ರುಕ್ಮಿಣಿ ಪಾರ್ವತಿ ಸಂವಾದ – Rukmini Parvati Samvada

ಜಲದಿ ನಲಯ ಗಾರ ಏತರ ಚೆಲುವ ರುಕ್ಮಿಣಿ |
ಬಿಳಿಯ  ಮೈಯ ಬೂದಿ ಶಿವಗೆ ಒಲಿದೆ ಪಾರ್ವತಿ ||ಪ|
|
ಉದಕದೊಳಗೆ ವಾಸವೇಕೆ ಸದನವಿಲ್ಲವೆ |
ಸುದತಿ ಸುಡುಗಾಡಿಗಿಂತ ಲೇಸು ಅಲ್ಲವೆ ||1||

ಶೃಂಗ ಬೆನ್ನಲಿ ಪೂತ್ತವನ  ಸುದ್ದಿಕೇಳಿದ್ಯಾ |
ಗಂಗೆ ಜಡೆಯಲಿಟ್ಟವನ ಗುರುವ ಕೇಳಿದ್ಯ||2||

ವಸುಧೆ ನೆಗಹಿ ಬೇರು ಮೆಲ್ಲಲುಅಶನವಿಲ್ಲವೆ |
ಹಸಿದು ವಿಷವ ನುಂಡುದೆಲ್ಲ ಹುಸಿಯು ಅಲ್ಲವೆ||3||

ಕೊರಳ ಕರುಳ ಮಾಲೆ ಯಾಕೆ ಸರವು ದೊರಕದೆ |
ರುಂಡಮಾಲೆ ಧರಿಸಿದವನು ಕಾಂತನಲ್ಲವೆ||4||

ವಸುಧಿಗೀಶನಾಗಿ ಬಲಿಯ ಬೇಡಲಿಲ್ಲವೆ|
ಎಸೆವ ಕಪಾಲ ಪಿಡಿದ ಕರ್ತನಲ್ಲವೆ||5||

ಮಾತೆ ಶಿರವ ತರಿದವನ ಮಾತು ಕೇಳಿದ್ಯಾ|
ತಾತನಾಗಿ ಸುತನ ಕೊಂದ ನೀತಿ ಕೇಳಿದ್ಯಾ¦|6||

ಕೋತಿಗಳನು ಕೂಡಲ್ಯಾಕೆ ಜಾತಿ ತನ್ನದೆ |
ಭೂತಗಣಗಳಾಳುವುದಕೆ ನೀತಿ ಪೇಳ್ವೆಲೆ||7||

ಕಂಜ ನೇತ್ರೆ ಹಾವುತುಳಿಯಲಂಜಿಕೆ ಬಾರದೇ|
ಮಂಜುಳ ವದನೆ ಮೈಯಲ್ಲ ಸರ್ಪ ಕುಂಜರ ಭೂಷಣಗೆ||8||

ಸುತ್ತಲಿದ್ದ ಸ್ತ್ರೀಯರೊಳು ಬತ್ತಲೆ ನಿಲುವರೆ |
ಉತ್ತಮರಾದ ಸ್ತ್ರೀಯರ ಶಾಪ ಹತ್ತಲಿಲ್ಲವೆ||9||

ಹತ್ತಲಿದ್ದ  ವಾಜಿಯ ಬಿಟ್ಟು ಹದ್ದನೇರುವರೇ
ಎತ್ತಿನ ಬೆನ್ನೇರಿದವನು ಉತ್ತಮನಾಹನೆ||10||

ಹರಿಹರರೊಳು ಯಾರು ಶ್ರೇಷ್ಟಹೇಳೆ ರುಕ್ಮಿಣಿ|
ಪುರಂದರವಿಠಲ ಸರ್ವೋತ್ತಮನು ಕೇಳೆ ಪಾರ್ವತಿ ||11||

madhwamrutha

Tenets of Madhwa Shastra

You may also like...

Leave a Reply

Your email address will not be published. Required fields are marked *