ಶ್ರೀ ರಘುರಾಮವಿಠ್ಠಲ ಕೃತ ದಶಾವತಾರ ಸ್ತೋತ್ರ – Sri Raghurama Vittala Kruta Dashavatara Stotra

ಸೃಷ್ಠಿಶ ದೇವ ಪರಮೇಶ್ಟ್ಯಾದಿ ವಂದ್ಯ ಸುರಾ ಶ್ರೇಷ್ಟಾನೇ ಮತ್ಸ್ಯ ರೂಪಿ
ನಷ್ಟವ ಗೊಳಿಸು ಬಹು ದುಷ್ಟಾದ ಕರ್ಮಗಳ ಶಿಷ್ಟೀಷ್ಟ ಸುಷ್ಟವಪುಷ |
ಕಷ್ಟವೇ ನಿತ್ಯ ಸಂತುಷ್ಟನೇ ಸಲಹಾಲ್ಕೆ ದೃಷ್ಟೀಲಿ ಮಾತ್ರ ಜಗದೀ
ಕಾಷ್ಠಾದಿ ಬ್ರಹ್ಮಾಂತ ಚೇಷ್ಟಾದಿ ಗಳ ನಿತ್ಯ ನಿಷ್ಟೀಲಿ ಮಾಳ್ಪ ಹರಿಯೇ ll ೧ ll

ದುರ್ಮಾಯಿದಾನವರು ಧರ್ಮಾದಿಪಾರಮೃತ ನಿರ್ಮಾಣವಾಗುವಂತೆ
ನಿರ್ಮಥಿಸೇ ಗಿರಿಯ ಕೂರ್ಮಾಗಿ ನೀ ನೆಗದಿ ನಿರ್ಮಾಲ್ಯಪುಷ್ಪದಂತೆ |
ನಿರ್ಮೀಸಿ ಜೀವರಿಗೆ ಚರ್ಮಾಸ್ಥಿಯುಕ್ತತನು ದುರ್ಮೋಹವಿತ್ತು ಸೃಷ್ಟಿ
ಮರ್ಮಾವ ತಿಳಿಸದಲೆ ಕೂರ್ಮನೇ ಕರ್ಮಫಲ ಧರ್ಮಾರ್ಥಕಾಮ ಕೊಡುವಿ ll ೨ll

ನೆರೆನಂಬಿದವರಘವ ಹರಿವಂಥ ಪರಪುರುಷ ಬಾರಯ್ಯ ಧ್ಯಾನಕೊದಗಿ
ಬೇರಿನ್ನು ಬೇಡೇನು ಘೋರಾದ ಭವಶರಧಿ ದಾಟೀಸಿ ಚರಣತೋರೋ |
ಧರಣೀಯಚೋರನ್ನ ವರಸಿದ ಮಹಾವರಹ ಕರುಣದಿ ಕೋರೆದೆಡೆಯಿಂ
ಧರಣೀಯನೆತ್ತಿ ಸುರವೃಂದವು ಸ್ತೋತ್ರ ಭರದಿಂದಲೇ ಗೈದರಾಗ ll ೩ll

ಬೊಮ್ಮಾದಿ ಚೇತನಕೆ ಸುಮ್ಮಾನೆ ಈವಗತಿ ಬೊಮ್ಮಾಂಡದೊಡೆಯನೆನುತ
ಒಮ್ಮನದಿ ಪ್ರಹ್ಲಾದ ತಮ್ಮಗಳ ಸಹಿತಾಗಿ ನಿಮ್ಮನೇ ನೆನೆಯುತಿರಲು |
ತಮ್ಮನ್ನಕೊಂದ ಪರಬೊಮ್ಮನೆ ಕೋಲು ವೆನುವ ದುಮ್ಮಾನಕನಕಶಯ್ಯಾ
ಬೊಮ್ಮನು ಇತ್ತವರ ಧೆಮ್ಮಿಲೆ ಇರಕೊಂದ ನಮ್ಮಯ ನಾರಸಿಂಗ ll ೪ll

ಕೋಮಲಗಾತ್ರ ಮಮ ಸ್ವಾಮಿಯೆ ಮನದಿರ್ದಕಾಮಾದಿವರ್ಗ ತಡೆದು
ಸಾಮ್ಯಾಧಿಕಾ ಶೂನ್ಯ ಕಾಮಾರಿವರವಂದ್ಯ ಸ್ವಾಮ್ಯಾಭಿಮಾನ ಕೀಳೋ |
ಕಾಮಿಸಿ ಸುರಪತಿಯ ಧಾಮವ ಗೈದ ಕೃತನೇಮದಿ ರಾಜ ಬಲಿಯ
ವಾಮನ ರೂಪದಲಿ ಭೂಮಿಯ ಬೇಡಿ ಬಲು ಸಾಮಾದಿ ತಲೆಯ ತುಳದಿ ll ೫ll

ಸಾಮಾದಿ ವೇದಗಳು ಲೋಮಾದ ನಿನ್ನ ಗುಣ ಸ್ತೋಮನೇ ನುಡಿಯಲರಿಯ
ಧಾಮೇಲೇನಾಮ್ ಪರಶುರಾಮನೆ ವರುಣಿಪೆನೆ ಪ್ರೇಮದಿ ನೋಡು ಧೊರಯೆ ಭೂಮೀಶರನು | ತೊರೆದು ಭೂಮೀಯ ವಿಪ್ರರಿಗೆ ಮಮತಾದಿ ಇತ್ತಪರಿಯ
ಪಾಮರನಪರಾಧ ಕ್ಷಮಿಸುತ್ತ ನಿಜಧಾಮ ಸೀಮಾದಲಾರಿಸು ಧಣಿಯೇ ll ೬ll

ಕ್ಷಿತಿಗೀಶ ದಶರಥ ಸುತನಾಗಿ ಮಲತಾಯಿ ಮಾತನು ಲಾಲಿಸುತಲಿ
ಅತಿ ತೋಷದಲಿ ಘೋರ ವ್ರತ ದಿಂದ ವನಖೋದಿ ಸತಿಭ್ರಾತೃರಿಂದ ಕೂಡಿ |
ಸೀತೆಯ ಕದ್ದದಿತಿಜಾತರಿಗಧಿಪತಿಯ ಘಾತೀಸಿ ಹತ್ತುತಲೆಯ
ವಾತಾತ್ಮ ಗಿತ್ತಿ ರಘುನಾಥನೇ ಸತ್ಯಪದ ಪ್ರೀತೀಲೆ ಮತ್ತೆ ತನುವ ll ೭ll

ಎಂದೆಂದೂ ತವಪಾದ ಪೊಂದಿರ್ದ ಬಳಿಕಿನ್ನು ಬಂಧದೊಳಿಡುವುದೆಷ್ಟೋ
ಅಂದವೆ ನಿನಗಿನ್ನು ಸುಂದರ ವದನನೆ ಮಂದ ಸ್ಮಿತದಿ ನೋಡೈ |
ನಂದನಕಂದ ಸುರವೃಂದದಿವಂದ್ಯ ಮನ ಕುಂದುಗಳನ್ನು ತರಿದು
ಇಂದೀವರಾಕ್ಷ ಮುದದಿಂದಲೇ ಕಂದ ನಿವನೆಂತೆಂದು ನಂದಗೊಳಿಸೋ ll೮ll

ಸದ್ಧರ್ಮದಲಿ ಮನಸು ಸಿದ್ಧಾತ್ಮರಲಿ ರತಿಯು ಶುದ್ಧಾಂತಃ ಕರಣ ವಿತ್ತು
ಸಿದ್ಧಿಯ ಗೈಸು ಸತ್ಸಿದ್ಧಾಂತ ದ ವಾಕ್ಯ ಕ್ರುದ್ಧೋಲ್ಕ ದೇವದೇವ |
ಬುದ್ಧನೇ ದುರ್ವಿಷಯ ಬದ್ಧಾನ ಮಾಡದಲೇ ಬುದ್ಧಿಲೇ ನಿನ್ನ ಸ್ಮರಣ
ಶ್ರದ್ಧವ ಕೊಟ್ಟು ಪ್ರಾರಬ್ದವ ದಾಟಿಸುತ ಉದ್ಧಾರ ಮಾಡು ತ್ವರದಿ ll ೯ll

ನೀಲಾಂಬುದ ಶ್ಯಾಮ ಬಾಲ್ಯಾದ ವಸ್ತೆಯಲಿ ಲೋಲಾಡಿ ನಿನ್ನ ಮರೆದೆ
ಕಾಲಾತ್ಮ ಮೂಲ ಗುಣ ಶೀಲಂಗಳನು ತೋರಿ ಕಾಲನ ಪಾಶ ಬೀಡಿಸೋ |
ಮಾಲೋಲ ನಿನ್ನ ಗುಣ ಲೀಲಾವಿನೋದಗಳ ನಾಲಿಗಿಯಲ್ಲಿ ನಿಲ್ಲಿಸೋ
ತಾಳದೆ ತಾಪಗಳ ಕೀಳೆಂದು ಮೊರೆಹೊಕ್ಕೆ ಲಾಲೀಸಿ ಕಲ್ಕಿ ಸಲಹೋ ll ೧೦ll

ಮಗುವಾಗಿ ವಟ ದೆಲೆಲಿ ಸೊಗಸಾಗಿ ಮಲಗಿರ್ದ ಖಗರಾಜ ಪತ್ರ ಅಖಿಲ
ನಿಗಮವು ಅಘದೂರ ಸುಗಮವು ಎನುತಿವೆ ಲಗುಬಗೆ ಸತ್ಯ ಗೊಳಿಸೋ |
ಯೋಗೀಶ ತವಯೋಗ ಯಾವಾಗ ಆಗುವದು ಬೇಗದಿ ತೋರೋ ದಯದಿ
ಬಾಗುವೇ ಪದಗಳಿಗೆ ಸಾಗಿಸು ಮುಕ್ತಿಪಧ ಶ್ರೀ ರಘುರಾಮ ವಿಠ್ಠಲll ೧೧ll

ll ಶ್ರೀ ಕೃಷ್ಣಾರ್ಪಣಮಸ್ತು ll

madhwamrutha

Tenets of Madhwa Shastra

You may also like...

1 Response

  1. Thanks for publishing this important Stotra.Its gist should have been explained.

Leave a Reply

Your email address will not be published. Required fields are marked *