ಋಗ್ವೇದೀಯ ವೈಶ್ವದೇವಃ – Rigveda Vaishvadeva
ಋಗ್ವೇದೀಯ ವೈಶ್ವದೇವಃ
ಪ್ರತಿದಿನ ಊಟಕ್ಕೂ ಮುಂಚೆ. ಗೃಹಸ್ಥರು ಈ “ವೈಶ್ವದೇವ” ಯಜ್ಞವನ್ನು ಮಾಡುತ್ತಾರೆ. ಅಂದರೆ, ಅಗ್ನಿಗೆ, ಮಾಡಿದ ಅಡಿಗೆಯ ಸ್ವಲ್ಪ ಭಾಗವನ್ನು ಅರ್ಪಿಸುವುದು. ಅದೇನೆಂದರೆ, ನಾವು ಸಸ್ಯಾಹಾರಿಗಳೂ, ಸಸ್ಯಗಳನ್ನು ಕೊಂದು ಆ ಪಾಪದಿಂದ ಲೇಪಿತರಾಗಿರುತ್ತೇವೆ.. ಅದನ್ನು ಕ್ಷಮಿಸು ಎಂದು ಪ್ರಾರ್ಥನೆ ಮಾಡಿಯೇ, ಆ ಭಾಗವನ್ನು ಅಗ್ನಿಗೆ ಅರ್ಪಿಸುವುದು.. ಅಂದ ಮೇಲೆ, ಒಂದಂತೂ ಸ್ಪಷ್ಟವಾಯಿತು.. ಕೇವಲ ಪ್ರಾಣಿವಧೆಯೊಂದೆ ಹಿಂಸೆಯಲ್ಲ.. ಸಸ್ಯಹಿಂಸೆಯೂ ಹಿಂಸೆಯೇ..ಆ ಪಾಪದ ಪ್ರಾಯಶ್ಚಿತ್ತವೆ “ವೈಶ್ವದೇವ.”
ವೈಶ್ವದೇವ:- ಆಹಾರ ಸಮರ್ಪಣೆ, ಸೇವನೆ ಎಂದರ್ಥ. ಯಾವುದೇ ವ್ಯಕ್ತಿಯು ತಾನು ಆಹಾರವನ್ನು ಸೇವಿಸುವುದಕ್ಕೆ ಮೊದಲು ಎಲ್ಲ ದೇವತೆಗಳಿಗೂ, ಪ್ರಾಣಿಗಳಿಗೂ, ಅತಿಥಿಗಳಿಗೂ ಸಾಂಕೇತಿಕವಾಗಿ ಆಹಾರವನ್ನು ಸಮರ್ಪಿಸಿ, ಅನಂತರವೇ ಅಂದರೆ ಅವರೆಲ್ಲರೂ ತೃಪ್ತರಾಗಿದ್ದಾರೆ ಎಂದು ತಿಳಿದಬಳಿಕ ತಾನು ಆಹಾರವನ್ನು ಸೇವಸಬೇಕು.
ಪ್ರತಿಯೊಬ್ಬನ ಹೊಟ್ಟೆಯಲ್ಲೂ ‘ವೈಶ್ವಾನರ’ ಎಂಬ ಅಗ್ನಿಯಿರುತ್ತಾನೆ. ಅವನಿಗೆ ಅನ್ನವೆಂಬ ಹವಿಸ್ಸನ್ನು ಸಮರ್ಪಿಸಬೇಕು. ಇದಕ್ಕೆ ‘ಪ್ರಾಣಾಗ್ನಿಹೋತ್ರ’ವೆಂದು ಕರೆಯುತ್ತಾರೆ.
ವೈಶ್ವದೇವ ಮಹತ್ವ ಖಂಡನೀ ಪೇಷಣೀ ಚುಲ್ಲೀ ಉದಕುಂಭೀ ಚ ಮಾರ್ಜನೀ | ಪಂಚಸೂನಾ ಗೃಹಸ್ಥಸ್ಯ ತಾಭಿಃ ಸ್ವರ್ಗಂ ನ ವಿಂದತಿ ||
ಜೀವನೋಪಯುಕ್ತವಾಗಿ ಆಹಾರವನ್ನು ಸಿದ್ಧಪಡಿಸಿಕೊಳ್ಳುವಾಗ ಹಿಂಸಾರೂಪವಾದ ಐದು ದೋಷಗಳು ತಪ್ಪದೇ ಬರುವವು. ಅವನ್ನು ಸೂನಾ ಎಂಬುದಾಗಿ ಶಾಸ್ತ್ರದಲ್ಲಿ ಕರೆದಿರುವರು.ಅವು ಯಾವುವೆಂದರೆ :-
1 ಖಂಡನೀ = ಭತ್ತದ ಧಾನ್ಯವನ್ನು ಸಂಗ್ರಹಿಸುವಾಗ ಪೈರನ್ನು ಕುಯ್ಯಿವುದರಿಂದ ಸಸ್ಯ ಪ್ರಾಣಿ ಹಿಂಸೆ
2 ಪೇಷಣೀ = ಧಾನ್ಯವನ್ನು ಬಡಿದು , ಕುಟ್ಟಿ ಬೀಸುವಾಗ ಸಂಭವಿಸಬಹುದಾದ ಪ್ರಾಣಿಹಿಂಸೆ
3 ಚುಲ್ಲೀ = ಒಲೆಯೊಳಗೆ ಬೆಂಕಿ ಹಾಕಿ ಉರಿಸುವಾಗ ಸಂಭವಿಸುವ ಪ್ರಾಣಿಹಿಂಸೆ
4 ಉದಕುಂಭೀ = ನೀರನ್ನು ತರುವಾಗ ,ಕಾಯಿಸುವಾಗ ಸಂಭವಿಸುವ ಪ್ರಾಣಿಹಿಂಸೆ
5 ಮಾರ್ಜನೀ = ಒಲೆ ಮುಂತಾದುವನ್ನು ಗುಡಿಸಿಸಾರಿಸುವಾಗ ಸಂಭವಿಸುವ ಪ್ರಾಣಿಹಿಂಸೆ.
ಇವೆ ಪಂಚಸೂನಾ = ಐದು ಪಾಪಗಳು ಇವು ಸದ್ಗತಿಗೆ ಪ್ರತಿಬಂಧಕವು . ಇವು ವೈಶ್ವದೇವ ಮಾಡುವುದರಿಂದ ಪರಿಹಾರವಾಗುತ್ತವೆ. ಆದ ಕಾರಣ ವೈಶ್ವದೇವ ಮಾಡಿ ಈ ಪಾಪಗಳನ್ನು ಪರಿಹರಿಸಿಕೊಂಡು ಉಳಿದ ಅನ್ನವನ್ನು ಭುಂಜಿಸುವುದು ಶ್ರೇಷ್ಠ.
ಅಕೃತ್ವಾ ವೈಶ್ವದೇವಂ ತು ಯೋಽನ್ನಂ ಭುಂಕ್ತೇ ದ್ವಿಜಾಧಮಃ |
ನ ಭುಂಕ್ತೇ ಹಿ ಕ್ರಿಮೀನ್ ಸರ್ವಾನ್ ಕಾಕಯೋನಿಷು ಜಾಯತೇ ||
ವೈಶ್ವದೇವನ್ನು ಮಾಡದೇ ಅನ್ನವನ್ನು ಭೋಜನ ಮಾಡುವ ಬ್ರಾಹ್ಮಣನು ಕ್ರಿಮಿಗಳನ್ನು ತಿಂದಂತೆ. ಅವನು ಕಾಗೆಯಾಗಿ ಹುಟ್ಟುತ್ತಾನೆ.
“ಹುತಶೇಷಂ ಭುಂಜಾನೋ ಬ್ರಾಹ್ಮಣೋ ನಾವಸೀದತಿ” (ಪರಾಶರಸ್ಮೃತಿ)
ವೈಶ್ವದೇವದ ಹೋಮಶೇಷವನ್ನು ಭುಂಜಿಸುವ ಬ್ರಾಹ್ಮಣನು ಎಂದೂ ನಾಶಹೊಂದುವುದಿಲ್ಲ. ಆದ್ದರಿಂದ ಪ್ರತಿಯೊಬ್ಬ ಬ್ರಾಹ್ಮಣರು ವೈಶ್ವದೇವ ಮಾಡುವುದು ಅವಶ್ಯ ಕರ್ತವ್ಯವಾಗಿದೆ.
ಋಗ್ವೇದೀಯ ವೈಶ್ವದೇವ ಪದ್ಧತಿ
ಸಂಕಲ್ಪ: (ಅಗ್ನಿಯ ಮುಂದೆ ಪೂರ್ವಾಭಿಮುಖವಾಗಿ ಕುಳಿತು) ಮೊದಲು ಆಚಮನ ಮಾಡಬೇಕು.
ಆಚಮ್ಯ, ಪ್ರಾಣಾಯಾಮ
ಶ್ರೀಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀವಿಷ್ಣುಪ್ರೇರಣಯಾ ಶ್ರೀವಿಷ್ಣುಪ್ರೀತ್ಯರ್ಥಂ ಅಗ್ನ್ಯಂತರ್ಗತಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀಪರಶುರಾಮಪ್ರೇರಣಯಾ ಶ್ರೀಪರಶುರಾಮಪ್ರೀತ್ಯರ್ಥಂ ಪಂಚಸೂನಾ ದೋಷಪರಿಹಾರಾರ್ಥಂ ಅದ್ಯ ಆತ್ಮಸ0ಸ್ಕಾರಾರ್ಥಂ ಪ್ರಾತಃ /ಸಾಯಂ ವೈಶ್ವದೇವಾಖ್ಯಂ ಕರ್ಮ ಕರಿಷ್ಯೇ ! .
ಅಗ್ನಿ ಆವಾಹನಮ್ :
ಜುಷ್ಟೋದಮೂನಾ ಆತ್ರೇಯೊ ವಸುಶ್ರುತೋsಗ್ನಿ ಸ್ತ್ರಿಷ್ಟುಪ್ | ಏಹ್ಯಗ್ನೇ ರಾಹುಗಣೋ ಗೌತಮೋಽಗ್ನಿ ಸ್ತ್ರಿಷ್ಟುಪ್ | ಅಗ್ನ್ಯಾವಾಹನೇ ವಿನಿಯೋಗಃ ||
ಓಂ ಜುಷ್ಟೋದಮೂನಾ ಅತಿಥಿರ್ದುರೋಣ ಇಮಂ ನೋ ಯಜ್ಞಮುಪಯಾಹಿ ವಿದ್ವಾನ್ |
ವಿಶ್ವಾ ಅಗ್ನೇ ಅಭಿಯುಜೋ ವಿಹತ್ಯಾ ಶತ್ರೂಯತಾಮಾಭರಾ ಭೋಜನಾನಿ ||
ಏಹ್ಯಗ್ನ ಇಹಹೋತಾ ನಿಷಿದಾದಬ್ಧ: ಸುಪುರ ಏತಾ ಭವಾನಃ |
ಅವತಾಂ ತ್ವಾ ರೋದಸೀ ವಿಶ್ವಮಿನ್ವೇ ಯಜಾಮಹೇ ಸೌಮನಸಾಯ ದೇವಾನ್ ||
(ಅಕ್ಷತೆಗಳಿಂದ ಆವಾಹಿಸಿ ಆಚ್ಚಾದನವನ್ನು ದೂರ ಮಾಡಬೇಕು)
ಅಗ್ನಿಪ್ರತಿಷ್ಠಾಪನಮ್ :
ಸಮಸ್ತವ್ಯಾಹೃತೀನಾಂ ಪರಮೇಷ್ಠಿ ಪ್ರಜಾಪತಿಃ ಪ್ರಜಾಪತಿರ್ಬೃಹತೀ ಅಗ್ನಿಪ್ರತಿಷ್ಠಾಪನೇ ವಿನಿಯೋಗಃ |
ಓಂ ಭೂರ್ಭುವಃ ಸ್ವರೋಮ್ | ವಿಷ್ಣು ವೀರ್ಯಾತ್ಮಕಂ ರುಕ್ಮಕನಾಮಾನಮ್ ಅಗ್ನಿಂ ಪ್ರತಿಷ್ಠಾಪಯಾಮಿ ||
(ತುಳಸೀಕಾಷ್ಠ ಅಗ್ನಿಯಲ್ಲಿ ಹಾಕಿ ಊದುಗೊಳವೆಯಿಂದ ಅಗ್ನಿಯನ್ನು ಪ್ರಜ್ವಲಿಸಬೇಕು) ಇಲ್ಲಿ ಕೆಲವರು ಅನಿರುದ್ಧಾದಿರೂಪಗಳಿಗೆ 4 ಆಜ್ಯಾಹುತಿಗಳನ್ನು ಕೊಡುವುದುಂಟು
ಅಗ್ನಿಮೂರ್ತಿ ಧ್ಯಾನಮ್ :
ಚತ್ವಾರಿಶೃಂಗೇತಿ ಗೌತಮೋ ವಾಮದೇವೋsಗ್ನಿ ಸ್ತ್ರಿಷ್ಟುಪ್ | ಅಗ್ರಿಮೂರ್ತಿಧ್ಯಾನೇ ವಿನಿಯೋಗ: ||
ಓಂ ಚತ್ವಾರಿಶೃಂಗಾ ತ್ರಯೋ ಅಸ್ಯ ಪಾದಾ ದ್ವೇ ಶೀರ್ಷೇ ಸಪ್ತ ಹಸ್ತಾಸೋ ಅಸ್ಯ |
ತ್ರಿಧಾ ಬದ್ದೋ ವೃಷಭೋ ರೋರವೀತಿ ಮಹೋ ದೇವೋ ಮರ್ತ್ಯಾ ಅವಿವೇಶ ||
ಸಪ್ತಹಸ್ತಶ್ಚತು:ಶೃಂಗಃ ಸಪ್ತಜಿಹ್ವೋ ದ್ವಿಶೀರ್ಷಕಃ |
ತ್ರಿಪಾತ್ ಪ್ರಸನ್ನವದನಃ ಸುಖಾಸೀನಃ ಶುಚಿಸ್ಮಿತಃ |
ಸ್ವಾಹಾಂತು ದಕ್ಷಿಣೇ ಪಾರ್ಶ್ವೇ ದೇವೀಂ ವಾಮೇ ಸ್ವಧಾಂ ತಥಾ |
ಬಿಭ್ರದಕ್ಷಿಣಹಸ್ತೈಸ್ತು ಶಕ್ತಿಮನ್ನಂ ಸ್ರುಚಂ ಸ್ರುವಮ್ ||
ತೋಮರಂ ವ್ಯಜನಂ ವಾಮೇ ಘೃತಪಾತ್ರಂ ಚ ಧಾರಯನ್ |
ಮೇಷಾರೂಢೋ ಜಟಾಬದ್ದೋ ಗೌರವರ್ಣೋ ಮಹೌಜಸಃ ||
ಧೂಮ್ರಧ್ವಜೋ ಲೋಹಿತಾಕ್ಷಃ ಸಪ್ತಾರ್ಚಿಃ ಸರ್ವಕಾಮದಃ |
ಆತ್ಮಾಭಿಮುಖಮಾಸೀನ ಏವಂ ರೂಪೋ ಹುತಾಶನಃ |
ಆಥ ಮುಖ್ಯಪ್ರಾಣಧ್ಯಾನಮ್ :
ಉದ್ಯದ್ರವಿಪ್ರಕರ ಸನ್ನಿಭಮಚ್ಯುತಾಂಕೇ ಸ್ಪಾಸೀನಮಸ್ಯ ನುತಿನಿತ್ಯವಚಃ ಪ್ರವೃತ್ತಿಮ್ |
ಧ್ಯಾಯೇದ್ಗದಾಭಯಕರಂ ಸುಕೃತಾಂಜಲಿಂ ತಂ ಪ್ರಾಣಂ ಯಥೇಷ್ಟತನುಮುನ್ನತಕರ್ಮಶಕ್ತಿಮ್ ||
ಪರಶುರಾಮಧ್ಯಾನಮ್ :
ಅಂಗಾರವರ್ಣಮಭಿ ತೋಂಡ ಬಹಿಃ ಪ್ರಭಾಭಿರ್ವ್ಯಾಪ್ತಂ ಪರಶ್ವಧಧನುರ್ಧರಮೇಕವೀರಮ್ |
ಧ್ಯಾಯೇದಜೇಶಪುರುಹೂತಮುಖೈಃ ಸ್ತುವದ್ಭಿರಾವೀತಮಾತ್ಮಪದವೀಂ ಪ್ರತಿಪಾದಯಂತಮ್ ||
ಅಗ್ನಿಸಮ್ಮುಖೀಕರಣಮ್ :
ಏಷ ಹಿ ದೇವ ಇತ್ಯಸ್ಯ ಹಿರಣ್ಯಗರ್ಭೋಽಗ್ನಿ ಸ್ತ್ರಿಷ್ಟುಪ್ |
ಅಗ್ನಿಸಮ್ಮುಖೀಕರಣೇ ವಿನಿಯೋಗಃ ||
ಏಷ ಹಿ ದೇವಃ ಪ್ರದಿಶೋ ನು ಸರ್ವಾಃ ಪೂರ್ವೋ ಹಿ ಜಾತಸ್ಸ ಉ ಗರ್ಭೇ ಅಂತಃ | ಸವಿಜಾಯಮಾನಃ ಸಜನಿಷ್ಯಮಾಣಃ ಪ್ರತ್ಯಜ್ಞ್ಮುಖಾಸ್ತಿಷ್ಠತಿ ವಿಶ್ವತೋಮುಖಃ ||
ಅಗ್ನಿ ವೈಶ್ವಾನರ ಶಾಂಡಿಲ್ಯಗೋತ್ರ ಮೇಷಾರೂಢ ಮೇಷಧ್ವಜ ವರಪ್ರದ ಪ್ರಾಜ್ಞ್ಮುಖೋ ದೇವ ಮಮ ಸಮ್ಮುಖೋ ವರದೋ ಭವ ||
(ಅಗ್ನಿಯು ತಮ್ಮ ಅಭಿಮುಖವಾಗಿ ಇರುವಂತೆ ಭಾವಿಸಬೇಕು)
ಪರಿಷೇಕಮ್ :
ಅದಿತೇಽನುಮನ್ಯಸ್ವ,
ಅನುಮತೇsನುಮನ್ಯಸ್ವ,
ಸರಸ್ವತೇಽನುಮನ್ಯಸ್ವ,
ದೇವಸವಿತುಃ ಪ್ರಸುವ,
(ಈಶಾನ್ಯದಿಂದ ಪ್ರಾರಂಭಿಸಿ ಅಗ್ನಿಯಸುತ್ತಲೂ ಮಂತ್ರಾಕ್ಷತೆ ನೀರಿನಿಂದ ಪರಿಷೇಚನೆ ಮಾಡಬೇಕು)
ಅಗ್ನಿ ಅಲಂಕರಣಮ್ (ಪೂಜನಮ್) :
ವಿಶ್ವಾನಿನ ಇತಿ ತಿಸೃಣಾಮಾತ್ರೇಯೋ ವಸುಸ್ತುತೋsಗ್ನಿ ಸ್ತ್ರಿಷ್ಟುಪ್ |
ದ್ವಯೋಃ ಅಲಂಕರಣೇ ತೃತೀಯಸ್ಯ ಅಗ್ನ್ಯರ್ಚನೇ ವಿನಿಯೋಗಃ ||
ಓಂ ವಿಶ್ವಾನಿನೋ ದುರ್ಗಹಾ ಜಾತವೇದಃ | ಸಿಂಧುಂ ನ ನಾವಾ ದುರಿತಾತಿಪರ್ಷಿ |
ಅಗ್ನೇ ಅತ್ರಿಮನ್ನಮಸಾ ಗ್ರಣಾನಃ | ಅಸ್ಮಾಕಂ ಬೋಧ್ಯವಿತಾ ತನೂನಾಮ್ |
ಯಸ್ತ್ವಾ ಹೃದಾ ಕೀರಿಣಾ ಮನ್ಯಮಾನಃ | ಅಮರ್ತ್ಯಂ ಮರ್ತ್ಯೋ ಜೋಹವೀಮಿ |
ಜಾತವೇದೋ ಯಶೋ ಅಸ್ಮಾಸು ದೇಹಿ | ಪ್ರಜಾಭಿರಗ್ನೇ ಅಮೃತತ್ವಮಶ್ಯಾಮ್ ||
ಯಸ್ಮೈ ತ್ವಂ ಸುಕೃತೇ ಜಾತವೇದ ಉ ಲೋಕಮಗ್ನೇ ಕೃಣವಃ ಸ್ಯೋನಂ | ಅಶ್ವಿನಂ ಸಪುತ್ರಿಣಂ ವೀರವಂತಂ ಗೋಮಂತಂ ರಯಿಂ ನಶತೇ ಸ್ವಸ್ತಿ ||
(ಎಂಟು ದಂಡಗೆಳಿದ ಕಡೆ ಎಂಟು ದಿಕ್ಕಿನಲ್ಲಿ ಮಂತ್ರಾಕ್ಷತೆ ಯಿಂದ ಅಲಂಕಾರ ಮಾಡಿ “ಯಸ್ಮೈ ತ್ವಂ” ಎಂಬ ಮಂತ್ರದಿಂದ ಪ್ರಾರ್ಥಿಸಬೇಕು)
“ಆಹುತೇರನುಜ್ಞಾ” ಎಂದು ಬ್ರಾಹ್ಮಣರನ್ನು ಕೇಳಿ “ಸುಹುತಮಸ್ತು” ಎಂದು ಅವರು ಹೇಳಿದ ನಂತರ ಎಡಗೈಯನ್ನು ಎದೆಗಿಟ್ಟುಕೊಂಡು ಮೃಗೀಮುದ್ರೆಯಿಂದ (ಅಂಗುಷ್ಠ, ಮಧ್ಯಮ ಮತ್ತು ಅನಾಮಿಕ ಬೆರಳು ಗಳಿಂದ) ತುಪ್ಪ ಬಡಿಸಿದ ನೈವೇದ್ಯಶೇಷ ಅನ್ನವನ್ನು ತೆಗೆದುಕೊಂಡು ಅಹುತಿಗಳನ್ನು ಕೊಡಬೇಕು
ಆಹುತಿಪ್ರದಾನಮ್ :
ಅಗ್ನಿಗೆ ಸಂಸ್ಕಾರಾರ್ಥವಾಗಿ ವ್ಯಾಹೃತಿಹೋಮಃ, ಪುರುಷಸೂಕ್ತಹೋಮ ಮಾಡಬೇಕು. ನಂತರ ಆಹುತಿ, ಮನಸಾ ಪ್ರಜಾಪತಿಂ ಧ್ಯಾಯನ್ ‘ಪ್ರಜಾಪತಯೇ ಸ್ವಾಹಾ’ ಎಂದು ಸಮಿತ್ತನ್ನು ಹಾಕಿ ಪ್ರಜಾಪತಯೇ ಇದಂ ನ ಮಮ ಎಂದು ತ್ಯಾಗಮಾಡಿ
ಓಂ ನಮೋ ನಾರಾಯಣಾಯ ಸ್ವಾಹಾ, ನಾರಾಯಣಾಯ ಇದಂ ನ ಮಮ (ಎಂಟು ಆಹುತಿ) ಇತಿ ಜುಹುಯಾತ್
ಓಂ ಕ್ಲೀಂ ಕೃಷ್ಣಾಯ ಸ್ವಾಹಾ, ಕೃಷ್ಣಾಯ ಇದಂ ನ ಮಮ (ಆರು ಆಹುತಿ)
ಓಂ ನಮೋ ಭಗವತೇ ವಾಸುದೇವಾಯ ಸ್ವಾಹಾ ವಾಸುದೇವಾಯ ಇದಂ ನ ಮಮ (ಹನ್ನೆರಡು ಆಹುತಿ)
ಓಂ ಸೂರ್ಯಾಯ ಸ್ವಾಹಾ, ಸೂರ್ಯಾತ್ಮನೇ ಸಂಕರ್ಷಣಾಯ ಇದಂ ನ ಮಮ
ಓಂ ಪ್ರಜಾಪತಯೇ ಸ್ವಾಹಾ, ಪ್ರಜಾಪತ್ಯಾತ್ಮನೇ ವಾಸುದೇವಾಯ ಇದಂ ನ ಮಮ
ಓಂ ಅಗ್ನಯೇ ಸ್ವಾಹಾ, ಅಗ್ನ್ಯಾತ್ಮನೇ ಅನಿರುದ್ಧಾಯ ಇದಂ ನ ಮಮ ||
ಓಂ ಪ್ರಜಾಪತಯೇ ಸ್ವಾಹಾ, ಪ್ರಜಾಪತಯ ಇದಂ ನ ಮಮ |
ಓಂ ಸೋಮಾಯ ವನಸ್ಪತಯೇ ಸ್ವಾಹಾ, ಸೋಮಾಯ ವನಸ್ಪತಯ ಇದಂ ನ ಮಮ |
ಓಂ ಅಗ್ನಿಷ್ಟೋಮಾಭ್ಯಾಂ ಸ್ವಾಹಾ, ಅಗ್ನಿಷ್ಟೋಮಾಭ್ಯಾಮ್ ಇದಂ ನ ಮಮ |
ಓಂ ಇಂದ್ರಾಗ್ನಿಭ್ಯಾಂ ಸ್ವಾಹಾ, ಇಂದ್ರಾಗ್ನಿಭ್ಯಾಮ್ ಇದಂ ನ ಮಮ ||
ಓಂ ದ್ಯಾವಾಪೃಥಿವೀಭ್ಯಾಂ ಸ್ವಾಹಾ, ದ್ಯಾವಾಪೃಥಿವೀಭ್ಯಾಮ್ ಇದಂ ನ ಮಮ |
ಓಂ ಧನ್ವಂತರಯೇ ಸ್ವಾಹಾ, ಧನ್ವಂತರಯ ಇದಂ ನ ಮಮ ||
ಓಂ ಇಂದ್ರಾಯ ಸ್ವಾಹಾ, ಇಂದ್ರಾಯ ಇದಂ ನ ಮಮ |
ಓಂ ವಿಶ್ವೇಭ್ಯೋ ದೇವೇಭ್ಯಃ ಸ್ವಾಹಾ | ವಿಶ್ವೇಭ್ಯೋ ದೇವೇಭ್ಯೋ ಇದಂ ನ ಮಮ |
ಓಂ ಬ್ರಹ್ಮಣೇ ಸ್ವಾಹಾ, ಬ್ರಹ್ಮಣ ಇದಂ ನ ಮಮ ||
ವೈಶ್ವದೇವ ಸಾಂಗತಾಸಿದ್ಧ್ಯರ್ಥಂ (ಷಾಡ್ಗುಣಾರ್ಥಂ) ವ್ಯಾಹೃತಿಹೋಮಂ ಕರಿಷ್ಯೇ | (ತುಪ್ಪದಿಂದ 4 ಆಹುತಿ)
ಓಂ ಭೂಃ ಸ್ವಾಹಾ ಅಗ್ನಯೇ ಶ್ರೀ ಅನಿರುದ್ಧಾಯ ಇದಂ ನ ಮಮ ||
ಓಂ ಭುವಃ ಸ್ವಾಹಾ ವಾಯವೇ ಶ್ರೀ ಪ್ರದ್ಯುಮ್ರಾಯ ಇದಂ ನ ಮಮ |
ಓಂ ಸ್ವ: ಸ್ವಾಹಾ ಸೂರ್ಯಾಯ ಶ್ರೀ ಸಂಕರ್ಷಣಾಯ ಇದಂ ನ ಮಮ ||
ಓಂ ಭೂರ್ಭುವಸ್ವಃ ಸ್ವಾಹಾ ಪ್ರಜಾಪತಯೇ ಶ್ರೀ ವಾಸುದೇವಾಯ ಇದಂ ನ ಮಮ |
ಈಗ ಪರಿಷೇಕವನ್ನು ಮಾಡಿ, ಭಸ್ಮಧಾರಣೆಯನ್ನು ಮಾಡಿ ಉಪಸ್ಥಾನ ಮಾಡಬೇಕು.
ಅಗ್ನಿ ಉಪಸ್ಥಾನಮ್ :
ಓಂ ಚಮ ಇತ್ಯಸ್ಯ ಸಾರಸ್ವತೋಽಗ್ನಿಸ್ತ್ರಿಷ್ಟುಪ್ | ಅಗ್ನಿ ಪ್ರಾರ್ಥನೇ ವಿನಿಯೋಗಃ |
ಓಂ ಚಮೇ ಸ್ವರಶ್ಚ ಮೇ ಯಜ್ಞೋಪಚತೇ ನಮಶ್ಚ | ಯತ್ತೇ ನ್ಯೂನಂ ತಸ್ಮೈ ತ ಉಪಯತ್ತೇಽತಿರಿಕ್ತಂ ತಸ್ಮೈ ತೇ ನಮಃ | ಅಗ್ನಯೇ ನಮಃ | ಓಂ ಸ್ವಸ್ತಿ ||
ಶ್ರದ್ದಾಂ ಮೇಧಾಂ ಯಶಃ ಪ್ರಜ್ಞಾಂ ವಿದ್ಯಾಂ ಬುದ್ದಿ೦ ಶ್ರಿಯಂ ಬಲಂ |
ಆಯುಷ್ಯಂ ತೇಜ ಆರೋಗ್ಯಂ ದೇಹಿ ಮೇ ಹವ್ಯವಾಹನ | ಶ್ರಿಯಂ ದೇಹಿ ಮೇ ಹವ್ಯವಾಹನ ಓಂ ನಮೋ ನಮಃ ||
(ಗೋತ್ರಾಭಿವಾದನ ಮಾಡಿ ನಮಸ್ಕರಿಸ ಬೇಕು)
ಅಗ್ನಿಸ್ತು ವಿಶ್ರವಸ್ತಮಂ ತು ಬ್ರಹ್ಮಾಣಮುತ್ತಮಂ | ಅತೂರ್ತಂ ಶ್ರಾವಯತ್ಪತಿಂ ಪುತ್ರಂ ದದಾತು ದಾಶುಷೇ ||
ಅಗ್ನ್ಯಂತರ್ಗತ ಹರಿಣೀಪತಿ ಶ್ರೀ ಪರಶುರಾಮಾಯ ನಮಃ ಸಕಲಪೂಜಾರ್ಥೇ ತೀರ್ಥಗಂಧಾಕ್ಷತತುಳಸೀಪತ್ರಂ ಸಮರ್ಪಯಾಮಿ || (ಎಂದು ಸಮರ್ಪಿಸಬೇಕು)
ಸಮಾಪನಮ್ :
ಯಸ್ಯ ಸ್ಮತ್ಯಾ ಚ ನಾಮೋಕ್ಕಾ ತಪೋ ಯಜ್ಞಕ್ರಿಯಾದಿಷು | ನ್ಯೂನಂ ಸಂಪೂರ್ಣತಾಂ ಯಾತಿ ಸದ್ಯೋ ವಂದೇ ತಮಚ್ಯುತಮ್ ||
ಮಂತ್ರಹೀನಂ ಕ್ರಿಯಾಹೀನಂ ಭಕ್ತಿಹೀನಂ ಹುತಾಶನ | ಯತ್ಕೃತಂ ತು ಮಯಾ ದೇವ ಪರಿಪೂರ್ಣ೦ ತದಸ್ತು ಮೇ ||
ಅನೇನ ಪ್ರಾತಃ/ಸಾಯಂ ವೈಶ್ವದೇವಹೊಮೇನ ಭಗವಾನ್ ಯಜ್ಞಪುರುಷಾಂತರ್ಯಾಮೀ ಹರಿಣೀಪತಿಃ ಶ್ರೀಪರಶುರಾಮಃ ಪ್ರೀಯತಾಂ ಪ್ರೀತೋ ಭವತು |
|| ಇತಿ ಋಗ್ವೇದೀಯ ವೈಶ್ವದೇವಹೋಮಂ ಸಂಪೂರ್ಣಮ್ ||
|| ಶ್ರೀಮಧ್ವಾಂತರ್ಗತ ಶ್ರೀಕೃಷ್ಣಾರ್ಪಣಮಸ್ತು ||
Download PDF of Kannada Rugveda Vaishvadeva