ಮಾಘ ಸ್ನಾನ – Magha Snana

ಮೊದಲು ನೀರನ್ನು ನಮ್ಮ ಮೇಲೆ ಪ್ರೋಕ್ಷಿಸಿಕೊಳ್ಳಬೇಕು

ಅಪವಿತ್ರ ಪವಿತ್ರೋವಾ ಸರ್ವಾವಸ್ಥಾಂ ಗತೋಪಿವಾ |ಯ: ಸ್ಮರೇತ್ ಪುಂಡರೀಕಾಕ್ಷಂ ಸ ಬಾಹ್ಯಾಂತರಶುಚಿ: |

ಆಚಮನ, ಕೇಶವಾಯ ಸ್ವಾಹ, ನಾರಾಯಣಾಯ ಸ್ವಾಹಾ; ಮಾಧವಾಯ ಸ್ವಾಹ

ಸಂಕಲ್ಪ :

ಗೋವಿಂದಾಯ ನಮ:,………………………………..ಹರಯೇ ನಮ:| ಓಂ ಶ್ರೀಕೃಷ್ಣಾಯ ನಮ: |

ಪ್ರಣವಸ್ಯ ಪರಬ್ರಹ್ಮ ಋಷಿ, ಪರಮಾತ್ಮಾ ದೇವತಾ, ……………ಶ್ರೀ…………..ಸಂವತ್ಸರೇ, ದಕ್ಷಿಣಾಯಣೇ/ಉತ್ತರಾಯಣೇ, ಪುಷ್ಯ/ಮಾಘ ಮಾಸೆ, ಕೃಷ್ಣ/ಶುಕ್ಲಪಕ್ಷೇ, ………ತಿಥೌ, ….ವಾಸರೇ, ಶ್ರೀ ಭಾರತೀರಮಣ ಮುಖ್ಯಪ್ರಾಣಾಂತರ್ಗತ, ಶ್ರೀ ಲಕ್ಷ್ಮೀ ನರಸಿಂಹ/ವೆಂಕಟೇಶ (ಮನೆದೇವರು), ಪ್ರೇರಣಯಾ, ಶ್ರೀ ಲಕ್ಷ್ಮೀ ನರಸಿಂಹ/ವೆಂಕಟೇಶ ಪ್ರೀತ್ಯರ್ಥ, ಸಕಲ ಗಂಗಾದಿ ತೀರ್ಥಾಭಿಮಾನಿ ಸನ್ನಿಧೌ, ___ಸನ್ನಿಧೌ, (ಕ್ಷೇತ್ರದೈವ), ಏವಂಗುಣ.. ಮಾಘ ಮಾಸಪ್ರಯುಕ್ತ ಮಾಸ ನಿಯಾಮಕ ಶ್ರೀ ಕಮಲಾ ಮಾಧವ ಪ್ರೀತ್ಯರ್ಥಂ ಮಾಘ ಸ್ನಾನಂ ಕರಿಷ್ಯೆ.

ಮಾಘ ಸ್ನಾನಮ್ ಕರಿಶ್ಯಾಮಿ ಮಕರಸ್ಥೆ ದಿವಾಕರೆ|
ಆಸಮಾಪ್ಥಿ ಮಹಾದೇವ ನಿರ‍್ವಿಘ್ನಂ ಕುರು ಮಾಧವ||


ಸ್ನಾನಾರ್ಘ್ಯ ಮಂತ್ರ

ನಮ: ಕಮಲನಾಭಾಯ
ನಮಸ್ತೇ ಜಲಶಾಯಿನೇ |
ನಮಸ್ತೇಸ್ತು ಹೃಷೀಕೇಶ ಗೃಹಾಣಾರ್ಘ್ಯಂ ನಮೋಸ್ತುತೇ |(ಅರ್ಘ್ಯ ಶ್ರೀಹರಿಗೆ)

ಏಹಿ ಸೂರ್ಯ ಸಹಸ್ರಾಂಶೋ ತೇಜೋರಾಶೇ ಜಗತ್ಪತೇ |
ಅನುಕಂಪಾಯ ಮಾಂಭಕ್ತಂ ಗೃಹಾಣಾರ್ಘ್ಯಂ ನಮೋಸ್ತುತೇ |
(ಅರ್ಘ್ಯ ಸೂರ್ಯನಿಗೆ)

ವಿಷ್ಣುಪಾದಾಬ್ಜಸಂಭೂತೇ
ಗಂಗೇ ತ್ರಿಪಥಗಾಮಿನಿ |
ಗೃಹಾಣಾರ್ಘ್ಯಂ ಮಯಾ ದತ್ತಂ
ಜಲೇ ಸನ್ನಿಹಿತಾ ಭವ |
(ಅರ್ಘ್ಯ ಗಂಗೆಗೆ)

ವೃದ್ಧಗಂಗೇ ಮಹಾಪುಣ್ಯೇ ಗೌತಮಸ್ಯಾಘನಾಶಿನಿ |
ಗೋದಾವರೀ ಗ್ರುಹಾಣಾರ್ಘ್ಯಂ ತ್ರ್ಯಂಬಕಸ್ಯ ಜಟೋದ್ಭವೇ | 
(ಅರ್ಘ್ಯ ಗಂಗೆಯ ಇನ್ನೊಂದು ರೂಪವಾದ ಗೋದಾವರೀಗೆ)

ಸಕಲ ಗಂಗಾತೀರ್ಥಾಭಿಮಾನಿ ದೇವತೆಗಳನ್ನೂ ಸ್ಮರಿಸಬೇಕು

ಗಂಗಾಸಿಂಧು ಸರಸ್ವತೀ ಚ ಯಮುನಾ ಗೋದಾವರೀ ನರ್ಮದಾ |
ಕೃಷ್ಣಾ ಭೀಮರತೀ ಚ ಫಲ್ಘುಸರಯೂ ಶ್ರೀಗಂಡಕೀ ಗೋಮತೀ |
ಕಾವೇರೀ ಕಪಿಲಾಪ್ರಯಾಗವಿನುತಾ ನೇತ್ರಾವತೀತ್ಯಾದಯೋ |
ನದ್ಯ:ಶ್ರೀ ಹರಿಪಾದಪಂಕಜಭವಾ: ಕುರ್ವಂತು ನೋ ಮಂಗಳಂ ||

ಸ್ನಾನ ಮಾಡುವಾಗ ಶ್ರೀಮನ್ನಾರಾಯಣನನ್ನು ಸ್ಮರಿಸುತ್ತಾ ಶಂಖಮುದ್ರೆಯಿಂದ ಪ್ರೋಕ್ಷಣ ಮಾಡಿಕೊಳ್ಳಬೇಕು.

ಶಂಖಮುದ್ರೆ – ನಮ್ಮ ಎಡಗೈಯ ಎಲ್ಲಾ ಬೆರಳುಗಳ ಮಧ್ಯದಲ್ಲಿ ಬಲಗೈಯ ಅಂಗುಷ್ಠವನ್ನು ಮೇಲ್ಮುಖವಾಗಿಟ್ಟುಕೊಂಡು ಅದನ್ನು ಗಟ್ಟಿಯಾಗಿ ಹಿಡಿದುಕೊಳ್ಳಬೇಕು. ಬಲಗೈಯ ಉಳಿದ ಎಲ್ಲಾ ಬೆರಳುಗಳಿಂದ ಎಡಗೈಯನ್ನು ಒತ್ತಿ ಹಿಡಿಯಬೇಕು. ಇದೇ ಶಂಖಮುದ್ರೆ.

ಸ್ನಾನ ಕಾಲದಲ್ಲಿ ನೀರಿನಿಂದಲೇ ದ್ವಾದಶ ನಾಮಗಳನ್ನು ಹಚ್ಚಿಕೊಂಡು ಪಿತೃತರ್ಪಣವನ್ನು (ಅಧಿಕಾರಿಗಳು) ಕೊಡಬೇಕು, ದೇವತೆಗಳು, ಋಷಿಗಳು, ಪಿತೃಗಳು ಇವರಿಗೆ ತರ್ಪಣ ಕೊಡುವುದು.

ನಾವು ಅನುಸಂಧಾನ ಮಾಡಬೇಕಾದ ವಿಧಾನ

ಈ ನೀರೇ ಗಂಗೆಯಲ್ಲ, ಅದರಲ್ಲಿ ಸಕಲ ತೀರ್ಥಾಭಿಮಾನಿ ದೇವತೆಗಳೂ ಇರುತ್ತಾರೆ. ಅವರ ಜೊತೆಗೆ ಅವರ ಪತಿಗಳೂ, ಅವರ ಪತ್ನಿಯರೂ (ಗಂಡು ನದಿಗಳಾದರೆ), ಇದ್ದು, ಅವರೊಳಗೆ ಗಂಗಾ ನದಿಯ ಸಾನ್ನಿಧ್ಯವನ್ನು ಅನುಸಂಧಾನ ಮಾಡಿ, ಆ ಗಂಗಾದೇವಿಯ ಅಂತರ್ಗತನಾದ ಭಾರತೀರಮಣ ಮುಖ್ಯ ಪ್ರಾಣಾಂತರ್ಗತ ಕ್ಷೀರಾಬ್ಧಿಶಾಯಿ, ಶ್ರೀ ಲಕ್ಷ್ಮೀನಾರಾಯಣನಿಗೆ ನಮಸ್ಕರಿಸಿ, ಈ ಸ್ನಾನ ನಮಗಲ್ಲ, ನಮಗೊಳಗಿರುವ ಲಕ್ಷ್ಮೀರಮಣನಿಗೆ ಅಭಿಷೇಕ ಎಂದು ಅನುಸಂಧಾನ ಮಾಡಿ, ಶಂಖಮುದ್ರೆಯಿಂದ ನೀರನ್ನು ಪ್ರೋಕ್ಷಿಸಿಕೊಂಡು (ಶಂಖದಲ್ಲಿ ಲಕ್ಷ್ಮಿಯ ಸಾನ್ನಿಧ್ಯವಿರುವುದರಿಂದ – ಶಂಖಮುದ್ರೆಯಿಂದ ಪ್ರೋಕ್ಷಿಸಿಕೊಳ್ಳಬೇಕು.

ಅಷ್ಠೇ ಅಲ್ಲ ಪರಮಾತ್ಮನಿಗೆ ಸ್ನಾನ ಮಾಡಿಸಲು ನಮಗೆ ಯೋಗ್ಯತೆ ಇಲ್ಲ, ಆದ್ದರಿಂದ ಅಲ್ಲಿ  ಲಕ್ಷ್ಮಿದೇವಿಯನ್ನು ಅನುಸಂಧಾನ ಮಾಡಬೇಕು), ನಂತರ ಸ್ನಾನ ಮಾಡಬೇಕು.

madhwamrutha

Tenets of Madhwa Shastra

You may also like...

1 Response

  1. ಸತೀಶ್ says:

    ಉತ್ತಮ ವಿವರಣೆ, ವಂದನೆಗಳು,
    ಸಾಧನೆಗೆ ಅನುಕೂಲವಾಗಿದೆ

Leave a Reply

Your email address will not be published. Required fields are marked *