Karteeka Masa Mahatva – ಕಾರ್ತಿಕ ಮಾಸದ ಮಹತ್ವ

ಕಾರ್ತೀಕಮಾಸದ ಆಚರಣೆಯ ಪರಿಚಯ:

ಕಾರ್ತಿಕ ಮಾಸವು ಶ್ರೀಹರಿಗೆ ಅತಿಪ್ರಿಯವಾದ ಮಾಸವೆನಿಸಿದೆ ಕಾರ್ತೀಕಮಾಸಕ್ಕೆ ಶ್ರೀದಾಮೋದರರೂಪಿ ಪರಮಾತ್ಮನು ನಿಯಾಮಕನು ಶ್ರೀಹರಿಯ ಪ್ರೀತಿಯನ್ನುದ್ದೇಶಿಸಿ ಈಮಾಸದಲ್ಲಿ ಮಾಡುವ ಸ್ನಾನ ದಾನ ವ್ರತ ಇತ್ಯಾದಿ ಗಳು ಅಕ್ಷಯ ಫಲವನ್ನು ನಿಡುತ್ತವೆ ಅಂತೆಯೇ

ನ ಕಾರ್ತಿಕ ಸಮೋ ಮಾಸೋ ನ ಕೃತೇನ ಸಮಂ ಯುಗಂ |
ನ ವೇದಸದೃಶಂ ಶಾಸ್ತ್ರಂ ನ ತೀರ್ಥಂ ಗಂಗಯಾ ಸಮಮ್ ||
ಸ್ಕಂದಪುರಾಣ

ಕಾರ್ತೀಕಮಾಸಕ್ಕೆ ಸಮನಾದ ಮಾಸವಿಲ್ಲ .ಕೃತಯುಗಕ್ಕೆ ಸಮಾನವಾದ ಯುಗವಿಲ್ಲ ವೇದಗಳಿಗೆ ಸಮಾನವಾದ ಶಾಸ್ತ್ರವಿಲ್ಲ .ಗಂಗಾನದಿಗೆ ಸಮಾನವಾದ ತೀರ್ಥವಿಲ್ಲ .
ಈ ಕಾರ್ತೀಕಮಾಸದಲ್ಲಿ ಯಾವುದೇ ಪುಣ್ಯಕಾರ್ಯಮಾಡಿದರೂ ವಿಶಿಷ್ಟವಾದ ಪುಣ್ಯ ಲಭಿಸುತ್ತದೆ ಕಾರ್ತೀಕಮಾಸದಲ್ಲಿ ಪ್ರಾತಃಸ್ನಾನ , ದೀಪದಾನ ,ಭಗವಧ್ಯಾನ ,ದೀಪೋತ್ಸವ, ನಾಮಸಂಕಿರ್ತನೆ , ಪುರಾಣಶ್ರವಣ ,ತುಲಸೀವೃಕ್ಷ ಬೆಳೆಸುವುದು ,ನೀರುಹಾಕುವುದು ಧಾತ್ರೀ(ನೆಲ್ಲಿ)ವೃಕ್ಷದ ಪೂಜೆ ಮುಂತಾದ ಕಾರ್ಯಗಳನ್ನು ನಿಷ್ಕಾಮ ಬುದ್ಧಿ ಯಿಂದ ಭಗವಂತನ ಪ್ರೀತ್ಯರ್ಥವಾಗಿ ಮಾಡಬೇಕು.

ಕಾರ್ತಿಕಮಾಸದಲ್ಲಿ ಭಗವದ್ಗೀತೆ ಹಾಗೂ ಭಾಗವತಗ್ರಂಥಗಳ ಶ್ರವಣ ಪಠಣ ಪಾರಾಯಣ ಮಾಡಬೇಕು.

ಗೀತಾಪಾಠಂ ತು ಯಃ ಕುರ್ಯಾತ್ ಕಾರ್ತೀಕೇ ವಿಷ್ಣುವಲ್ಲಭೇ |
ತಸ್ಯಪುಣ್ಯಫಲಂ ವಕ್ತುಂ ನಾಲಂ ವರ್ಷಶತೈರಪಿ |
ಶ್ರೀಮದ್ ಭಾಗವತಸ್ಯಪಿ ಶ್ರವಣಂ ಯಃ ಸಮಾಚರೇತ್
ಸರ್ವಪಾಪ ವಿನಿರ್ಮುಕ್ತ ಪರಂ ನಿರ್ವಾಣಮೃಚ್ಛತಿ ||

ಗೀತಾಪಾಠ ಪಠಣಾದಿಗಳನ್ನು ಕಾರ್ತಿಕ ಮಾಸದಲ್ಲಿ ಯಾರು ಮಾಡುವರೋ ಅವರಪುಣ್ಯದ ಫಲವನ್ನು ನೂರುವರಷಗಳವರೆಗೆ ಹೇಳಿದರೂ ಸಾಲದು ಮತ್ತು ಶ್ರೀಮದ್ ಭಾಗವತದ ಶ್ರವಣ ಯಾರು ಮಾಡುವರೋ ಅವರು ಎಲ್ಲ ಪಾಪಗಳಿಂದ ಮುಕ್ತರಾಗಿ ಸದ್ಗತಿಭಾಗಿಯಾಗುತ್ತಾರೆ .

ಕಾರ್ತಿಕಮಾಸದ ಶುಕ್ಲಪಕ್ಷದ ಕೂನೆಯ ಮೂರು ತಿಥಿಗಳು ತ್ರಯೋದಶಿ ,ಚತುರ್ದಶೀ ,ಪೌರ್ಣಿಮೆ ಇವು ಮೂರು ಲೋಕಕ್ಕೆ ಕಲ್ಯಾಣ ಕಾರಕವಾಗಿವೆ ಇವುಗಳಿಗೆ ಅಂತ್ಯಪುಷ್ಕರಿಣೀ ಎಂದು ಹೆಸರು .ಪೂರ್ತಿ ಒಂದು ತಿಂಗಳು ಕಾರ್ತೀಕ ಸ್ನಾನ ಮಾಡಲಾಗದಿದ್ದರೂ ಈ ಮೂರುದಿನಗಳಲ್ಲಿ ಪ್ರಾತಃಸ್ನಾನ ಮಾಡಿದರೆ ಕಾರ್ತೀಕವ್ರತದ ಪುಣ್ಯಕ್ಕೆ ಭಾಗಿಯಾಗುತ್ತಾರೆ.

ಕಾರ್ತೀಕಮಾಸದ ದಾನಧರ್ಮಗಳು

1) ಕಾರ್ತೀಕ ಮಾಸದಲ್ಲಿ ಪ್ರಾತಃ ಸ್ನಾನಕ್ಕೆ ವಿಶೇಷ ಫಲ

2) ಕಾರ್ತೀಕ ಮಾಸದಲ್ಲಿ ಜಲ ದಾನ
ಅನ್ನದಾನ ಶ್ರೇಷ್ಠದಾನವಾಗಿದೆ

3) ಕಾರ್ತೀಕ ಮಾಸದಲ್ಲಿ ಹತ್ತು ಗೋವುಗಳ ದಾನವು ಒಂದು ಗಾಡಿ(ವಾಹನ)ಯ ದಾನಕ್ಕೆ ಸಮವೆನಿಸುತ್ತದೆ .

4) ಹತ್ತು ಗಾಡಿಗಳ ದಾನಕ್ಕೆ ಒಂದು ಕುದುರೆಯ ದಾನವು ಸಮ.
ಮಠಗಳಿಗೆ ಮಾಡುವ ಆನೆಯ ದಾನವಾದರೂ ಸಾವಿರ ಕುದುರೆಯ ದಾನಕ್ಕೆ ಸಮ.

5) ಸಾವಿರ ಆನೆಗಳ ದಾನವು ಸುವರ್ಣದಾನಕ್ಕೆ ಸಮ
ಸಾವಿರ ತೊಲ ಸುವರ್ಣದಾನಕ್ಕೆ ವಿದ್ಯಾದಾನವು ಸಮ

6) ವಿದ್ಯಾದಾನಕ್ಕಿಂತ ಕೋಟಿ ಪಾಲು ಮಿಗಿಲಾದದ್ದು ಭೂಮಿದಾನ.

7)ಸಾವಿರ ಭೂಮೀದಾನಗಳಿಗಿoತ ಒಂದು ಗೋದಾನ ಮಿಗಿಲು

8)ಸಾವಿರ ಗೋದಾನಕ್ಕಿಂತ ಅನ್ನದಾನವು ಮಿಗಿಲಾದದ್ದು ಅನ್ನದಾನವು.
ಕಾರ್ತೀಕ ಮಾಸದಲ್ಲಿ ಅನ್ನದಾನವನ್ನು ಮಾಡಬೇಕು.

ಸರ್ವೇಷಾಮೇವ ದಾನಾನಾಮನ್ನದಾನಂ ವಿಶಿಷ್ಯತೇ |
ಅನ್ನo ಹಿ ಸರ್ವಭೂತಾನಾo ಪ್ರಾಣಭೂತಂ ಪರಂ ವಿಧು: ||

ಅನ್ನದಾನ,ಗೋಗ್ರಾಸ,
ಹರಿಕಥಾಶ್ರವಣ,ದೀಪದಾನ,
ಇವುಗಳನ್ನು ಪ್ರತಿಯೊಬ್ಬರು ಮಾಡಲೇಬೇಕು .ಬ್ರಹ್ಮಚರ್ಯ ,
ನೆಲದಮೇಲೆ ಮಲಗುವುದು ,ಒಂದೇ ಹೊತ್ತು ಊಟ ,ಹರಿನಾಮ ಸ್ಮರಣೆ ದೇವಾಲಯವನ್ನು ಗುಡಿಸಿ,ಒರಸಿ, ರಂಗೋಲೇಯನ್ನು ಹಾಕುವುದು. ತುಲಸೀ ಧಾತ್ರೀ ಪತ್ರಗಳಿಂದ ರಾಧ -ದಾಮೋದರನ ಪೂಜೆ ,ಸಾಲಿಗ್ರಾಮ ಪೂಜೆ,ಬ್ರಾಹ್ಮಣರ ಪೂಜೆ,ಅಶ್ವತ್ಥ ಪೂಜೆ,ಗುರುಸೇವೆ ನಿತ್ಯವು ದೀಪವನ್ನು ಬೆಳಗುವುದು.

ಕಾರ್ತೀಕಮಾಸದಲ್ಲಿ ಮಾಡಬೇಕಾದ ದಾನಗಳು

ಅನ್ನ ದಾನ
ತಿಲ ದಾನ
ಸುವರ್ಣ ದಾನ
ರಜತ(ಬೆಳ್ಳಿ )ದಾನ
ಭೂಮಿ ದಾನ
ವಸ್ತ್ರ ದಾನ
ಮೃಷ್ಟಾನ್ನ ದಾನ
ಗೋದಾನ
ಗೋಪಿಚಂದನ ದಾನ
ಬಾಳೆಹಣ್ಣುದಾನ
ಲವಣ (ಉಪ್ಪು)ದಾನ
ಸಾಲಿಗ್ರಾಮ ದಾನ
ಶಂಖ ದಾನ
ಘೃತ ದಾನ
ಪಾಯಸ ದಾನ
ಕಾರ್ತೀಕ ದಾಮೋದರ ಸ್ತೋತ್ರ ಪಾರಯಣ

ತುಲಸೀ ಪೂಜೆ,ಏಕಾದಶಿ ಉಪವಾಸ ,ನಕ್ತವ್ರತ ,ಮೌನ ವ್ರತ ,ತುಲಸೀ ಲಕ್ಷಪ್ರದಕ್ಷಿಣೆ ,ಅಶ್ವತ್ಥ ಪ್ರದಕ್ಷಿಣೆ ,ಧಾತ್ರಿ ಭೋಜನ ಇತ್ಯಾದಿ ಧರ್ಮಗಳನ್ನು ಪಾಲಿಸಬೇಕು.

ಕಾರ್ತೀಕಮಾಸದ ಮಹಿಮೆ

ಗುಣವತಿಯು ಸತ್ಯಭಾಮೆ ಯಾದದ್ದು

ಸತ್ಯಭಾಮೆಯು ನಾರದರ ಹೇಳಿಕೆಯಂತೆ ತುಲಾಪುರುಷದಾನ ವ್ರತವನ್ನು ಮಾಡಿ ಶ್ರೀಕೃಷ್ಣನನ್ನೇ ನಾರದರಿಗೆ ದಾನಕೊಟ್ಟಳು ನಂತರ ಶ್ರೀಕೃಷ್ಣನನ್ನು ಪ್ರತ್ಯಮ್ನಾಯವಾಗಿ ವಿಶೇಷವಾಗಿ ದಕ್ಷಿಣೆಯನ್ನು ಸ್ವೀಕರಿಸಿ ಶ್ರೀಕೃಷ್ಣನನ್ನು ಸತ್ಯಭಾಮೆಗೆ ಒಪ್ಪಿಸಿದರು ಈ ವ್ರತದಿಂದ ಜನ್ಮ ಜನ್ಮಾಂತರದಲ್ಲೂ ಪತಿಗೆ ಪ್ರಿಯಳಾಗಿದ್ದಳು .ಇದಾದನಂತರ ಸತ್ಯಭಾಮೆಯು ಶ್ರೀಕೃಷ್ಣನನ್ನು ಹೀಗೆ ಪ್ರಶ್ಣಿಸಿದಳು .ನಾನು ಏನು ಧರ್ಮಕಾರ್ಯ ಫಲವಾಗಿ ನೀನು ಪತಿಯಾಗಿ ದೊರೆತಿರುವಿ ಎಂದು ಶ್ರೀಕೃಷ್ಣನು -ಸತ್ಯಭಾಮೆ ,ನೀನು ಈ ಹಿoದೆ ಗುಣವತಿ ಎಂಬ ಕನ್ಯೆಯಾಗಿ ದೇವಶರ್ಮನೆಂಬ ಶ್ರೋತ್ರಿಯ ವಿಪ್ರನಿಗೆ ಪುತ್ರಿಯಾಗಿದ್ದೆ ದೇವಶರ್ಮನು ತನ್ನ ಶಿಷ್ಯನಾದ ಚಂದ್ರನೆಂಬುವನಿಗೆ ನಿನ್ನನ್ನು ಧಾರೆಯೆರೆದು ಕೊಟ್ಟನು .

ಒಂದು ಬಾರಿ ಅರಣ್ಯಕ್ಕೆ ಹೋಗಿದ್ದಾಗ ಘೋರ ರಾಕ್ಷಸನು ದೇವಶರ್ಮ ಹಾಗೂ ಅಳಿಯನನ್ನು ತಿಂದು ತೇಗಿದ .ಗುಣವತಿಯಾದರೂ ವಿಶೇಷವಾದ ರೀತಿಯಲ್ಲಿ ಕಾರ್ತೀಕ ವ್ರತ ಏಕಾದಶೀವ್ರತ ಇವೆ ಮೊದಲಾದ ದೇಹವನ್ನುಸವೆಸಿದ್ದಳು .
*ಕಾರ್ತೀಕ ಸ್ನಾನದ ಮಹಿಮೆ*

ಆ ಗುಣವತಿಯು ಕಾರ್ತೀಕಮಾಸದಲ್ಲಿ ನಸುಕಿನಲ್ಲಿಯೇ ಎದ್ದು ನದ್ಯಾದಿಗಳಲ್ಲಿ ಸ್ನಾನವನ್ನು ಮಾಡುತ್ತಿದ್ದಳು.ಕಾರ್ತೀಕದಲ್ಲಿ ಕಾವೇರಿಯ ಸ್ನಾನವಾದರೂ ಮಹಾಫಲಪ್ರದವಾದದ್ದು.
ವಿಷ್ಣುಸಾಯುಜ್ಯ ಪ್ರಾಪ್ತಿಗೆ ಸೋಪಾನವಾಗಿದೆ.

ಕಾರ್ತಿಕೇ ಮಾಸಿ ಕಾವೇರ್ಯಾಂ ಯಃ ಸ್ನಾನಂ ಕರ್ತುಮಿಚ್ಛತಿ |
ತಾವತೈವ ವೀಮುಕ್ತಾಘೋ ವಿಷ್ಣುಸಾಯುಜ್ಯಮಾಫ್ನುಯಾತ್ ||

ಕಾರ್ತೀಕ ಮಾಸದಲ್ಲಿ ಪ್ರತಿವರ್ಷವು ಗಂಗೇಯೇ ಕಾವೇರಿನದಿಗೆ ಬರುವಳು ಆದ್ದರಿಂದ ತುಲಾಮಾಸ ಸ್ನಾನವು ಕಾವೇರಿನದಿಯಲ್ಲಿ ಮಾಡುವುದು ಪ್ರಶಸ್ತವಾಗಿದೆ.

ಕಾರ್ತಿಕೇ ಪ್ರತಿವರ್ಷಂ ತು ಗಂಗಾ ತ್ರೈಲೋಕ್ಯ ಪಾವನೀ |
ಸ್ನಾತುo ಭಕ್ತ್ಯಾ ಸಮಾಯಾತಿ ಕಾವೇರಿಂ ಪುಣ್ಯಾದಾಂ ಶುಭಾಂ||

ಇಂತಹ ಶುಭಪ್ರದವಾದ ಕಾವೇರಿಯಲ್ಲಿ ಗುಣವತಿಯು ಸ್ನಾನ ಮಾಡಿದಳು. ಕಾರ್ತಿಕದಲ್ಲಿ ದೀಪಾರಾಧನೆಯು ಮುಖ್ಯವಾಗಿದೆ. ದೀಪಾರಾಧನೆಯನ್ನು ಮಾಡದವರು ಕುರುಡರಾಗುವರು.

ಕಾರ್ತಿಕೇ ಮಾಸಿ ಯೋವಿಶ್ಣೋರ್ನ ದೀಪಾರಾಧನಂ ಚರೇತ್ |
ಅಂಧತ್ವಂ ತಸ್ಯ ಜಾಯೇತ ಸಪ್ತಜನ್ಮ ನ ಸoಶಯಃ ||

ದೇವಾಲಯವನ್ನು ಸಾರಿಸುವುದು , ಸಾರಣಿ -ಕಾರಣಿ ,ಸಂಮಾರ್ಜನ, ರಂಗವಲ್ಲಿಯಿಂದ ಸ್ವಸ್ತಿಕದಿoದ ಚಿಹ್ನೆ ಬರೆಯುವುದು .ಏಕಾದಶಿ ಉಪವಾಸ ,ಜಾಗರಣೆ,ಪಾರಣೆ ಇವುಗಳಿಂದ ಗುಣವತಿಯು ಭಗವಂತನನ್ನು ಮೆಚ್ಚಿಸಿದಳು.ಹೀಗೆ ಆ ಜನ್ಮ ಪೂರ್ತಿ ಗುಣವತಿಯು ಕಾರ್ತೀಕ ಮಾಸದವ್ರತವನ್ನು ನಿಷ್ಠೆಯಿಂದ ಆಚರಿಸಿದ್ದರಿಂದ ಗುಣವತಿಯು ಸತ್ಯಭಾಮೆಯಾದಳು.ಆ ಗುಣವತಿಯು ನೀನಾಗಿದ್ದಿ ಎಂದು ಶ್ರೀಕೃಷ್ಣನು ತಿಳಿಸಿದನು ಈ ಕಥಾನಕದಿಂದ ಸ್ತ್ರೀಯರು ಕಾರ್ತೀಕಮಾಸ ಧರ್ಮಗಳನ್ನು ಪಾಲಿಸಿದರೆ ಯೋಗ್ಯ ಸದ್ಗುಣಿಯಾದ ಪತಿಯು ಲಭಿಸಿ ಪತಿವಿಯೋಗವಿಲ್ಲದೆ ಜೀವಿಸುವರು ಎಂದು ತಿಳಿಯುತ್ತದೆ.

ದೀಪದಾನ ಮಂತ್ರಗಳು

ದೀಪಸ್ತಮೋ ನಾಶಯತಿ ದೀಪಃಕಾಂತಿಂ ಪ್ರಯಚ್ಚತಿ |
ತಸ್ಮಾತ್ ದೀಪಪ್ರದಾನೇನ ಮಮ ವಂಶಪ್ರದಾನೇನ ವಂಶ: ಪ್ರವರ್ಧತಾಮ್ ||

ದೀಪೋ ಜ್ಞಾನಪ್ರದೋ ನಿತ್ಯಂ ದೇವಾನಾಂ ಪ್ರಿಯಃ ಸದಾ |
ದಾನೇನಾಸ್ಯ ಭವೇತ್ ಸೌಖ್ಯಂ ಶಾoತಿರ್ಮೇ ವಾಂಛಿತಂ ಫಲಮ್ ||

ದೀಪವು ಕತ್ತಲೇ ಕಳೆಯುತ್ತದೆ. ಶಾoತಿ ಕೊಡುತ್ತದೆ ಈ ದೀಪದಾನ ದಿoದ ನನ್ನ ವಂಶ ಬೆಳೆಯಲಿ. ಬೆಳಗಲಿ ದೇವತೆಗಳಿಗೆ ಪ್ರಿಯವಾದ
ದೀಪ ಜ್ಞಾನಪ್ರದಯಕ ಇದನ್ನು ನೀಡುವುದರಿoದ ನನಗೆ ಸುಖವಾಗಲಿ ಶಾoತಿಯಾಗಲಿ .
ಆನೇನ ದೀಪದಾನಖ್ಯಕರ್ಮಣಾ ಭಾರತಿರಮಣಮುಖ್ಯಪ್ರಾಣಂತರ್ಗತ ಕಾರ್ತೀಕದಮೋದರ ಪ್ರಿಯತಾo

ಕಾರ್ತಿಕಮಾಸದಲ್ಲಿ ದೀಪಾರಾಧನೆ ಮತ್ತು ದೀಪದಾನದ ಮಹತ್ವ

ಕಾರ್ತೀಕಮಾಸದಲ್ಲಿ ಭಗವಂತನಿಗೆ ದೀಪಗಳನ್ನು ಹಚ್ಚುವುದು ಪ್ರಶಸ್ತವಾಗಿದೆ.ಆಶ್ವಿನ ಮಾಸದ ಪೌರ್ಣಿಮೆಯಿಂದಲೇ ದೀಪವನ್ನು ಹಚ್ಚುವುದು.
*ದೀಪದಾನದ ಮಹಿಮೆ:- ಯಾರು ಕಾರ್ತೀಕದಲ್ಲಿ ಭಗವಂತನಿಗೆ ಶುಚಿಯಾಗಿ ಯಾರು ಬೆಳಗುವರೊ ಅವರು ಸಂಸಾರದಿಂದ ಮುಕ್ತರೆಂದೆ ಅರ್ಥ ಆರುತ್ತಿರುವ ದೀಪವನ್ನು ಉಜ್ವಲಗೊಳಿಸುವುದು ,
ಮತ್ತೊಬ್ಬರ ಮನೆಯ ದೀಪವನ್ನು ಹಚ್ಚುವುದು .ಬತ್ತಿಯನ್ನು ದಾನ ಮಾಡುವುದು ಇವೆಲ್ಲವೊ ದಾನಿಯ ಆಜ್ಞಾನವನ್ನು ಪರಿಹರಿಸಿ ಜ್ಞಾನವನ್ನು ನೀಡಲು ಸಹಕಾರಿಯಾಗಿವೆ.

ಪ್ರಾತಃ ಸ್ನಾತ್ವಾ ಶುಚಿರ್ಭೂತ್ವಾ ಯೋ ದದ್ಯಾದ್ ದೀಪಕಂ ಹರೇ |
ಸತು ಮೋಕ್ಷಮವಾಪ್ನೋತಿ ನಾತ್ರ ಕಾರ್ಯ ವಿಚಾರಣಾ ||

ಸಾವಿರದೆಂಟು, ನೊರೆಂಟು ,ಐವತ್ತನಾಲ್ಕು ಇಪ್ಪತ್ತೆಳು ಹೀಗೆ ದೀಪವನ್ನು ಶಕ್ತಿಯಿದ್ದಂತೆ ಬೆಳಗಿಸಬೇಕು.

ಕಾರ್ತೀಕ ಮಾಸದಲ್ಲಿ ಕಮಲಗಳಿಂದ ಪೂಜೆ ,ತುಲಸಿ ,ಮಾಲತೀ,ಮುನಿ ಪುಷ್ಪಗಳಿoದ ಪೂಜಿಸಬೇಕು ಮತ್ತು ದೀಪ ದಾನವನ್ನು ಮಾಡಬೇಕು ಹೀಗೆ ಈ ಐದು ಪವಿತ್ರವಾದವು ದೇವಸ್ಥಾನದ ಗೋಪುರದ ಮೇಲೆ ಆಕಾಶದೀಪವನ್ನು ಭಗವಂತನಿಗೆ ಈ ಕೆಳಗಿನ ಮಂತ್ರದಿoದ ಅರ್ಪಿಸಬೇಕು.

ಆಕಾಶದೀಪೋ ದಾತವ್ಯೋ ಮಾಸಮೆಕo ತು ಕಾರ್ತಿಕೇ |
ಕಾರ್ತಿಕೇ ಶುಕ್ಲ ಪೌರ್ಣಿಮ್ಯಾo ವಿಧಿನೋತ್ಸರರ್ಜಯೇಚ್ಚ ತಂ ||

ಮಹಪ್ರಕಾಶವಾದ ದೊಡ್ಡ ದೀಪವನ್ನು ಕಾರ್ತೀಕ ದಾಮೋದರನಿಗೆ ಅರ್ಪಿಸಬೇಕು.
ಕಾರ್ತಿಕಮಾಸವೂ ದೀಪದಾನಕ್ಕೆ ಪ್ರಸಿದ್ದವಾಗಿದೆ. ಪಿತೃಗಳೂ ಕೂಡ
ಕಾರ್ತೀಕಮಾಸದಲ್ಲಿ ದೇವ ದೇವನಿಗೆ ದೀಪವನ್ನು ಬೆಳಗುವ ಕುಲದೀಪಕ ಮಗನಿಗಾಗಿ ಕಾಯುತ್ತಿರುವರು.

ಭವಿಷ್ಯತಿ ಕುಲೇsಸ್ಮಾಕಂ ಪಿತೃಭಕ್ತಃ ಸುಪುತ್ರಕಃ |
ಕಾರ್ತಿಕೇ ದೀಪದಾನೇನ ಯಸ್ತೋಷಯತಿ ಕೇಶವಂ ||

ಕಾರ್ತೀಕದಲ್ಲಿ ತುಪ್ಪದ ದೀಪ, ತೈಲ ದೀಪ, ಆಕಾಶದೀಪ ಇವುಗಳನ್ನು ದೇವರಿಗೆ ಅರ್ಪಿಸಿದವನು ಸ್ವರ್ಗದಲ್ಲಿ ಸುಖಿಸುವನು .ಮೂವತ್ತು ದಿನಗಳು ದೀಪವನ್ನು ಬೆಳಗಬೇಕು .ಸಾಧ್ಯವಿಲ್ಲಡಿದ್ದರೆ ಕಡೆಯ ಐದು ದಿನಗಳಾದರೂ ದೀಪವನ್ನು ಬೆಳಗಬೇಕು . ದೀಪವನ್ನು ಬೆಳಗಲು ಶಕ್ತಿಯಿಲ್ಲದಿದ್ದರೆ ಬೇರೆಯವರು ಹಚ್ಚಿರುವ ದೀಪದ ಕರಿಯನ್ನು ತೆಗೆದು ಉಜ್ವಲಗೊಳಿಸುವುದು ದೀಪವು ಗಳಿಗೆ ಆರದಂತೆ ರಕ್ಷಿಸುವುದರಿಂದಲೂ ಅಕ್ಷಯ ಪುಣ್ಯವಿದೆ.

ದೀಪಮಾರೋಪಯೇತ್ಸಾಯಂ ಕಾರ್ತಿಕೇ ಪ್ರತಿ ವಾಸರಮ್
ನಿವೇದ್ಯ ಪಾಯಸನ್ನಂ ಚ ಸಿದ್ಧಿ ಮಿಷ್ಟಾಮವಾಫ್ನುಯಾತ್

ಕಾರ್ತೀಕಮಾಸದಲ್ಲಿ ಪ್ರತಿನಿತ್ಯವೂ ಪ್ರಾತಃಕಾಲ-ಸಾಯಂಕಾಲ ವಿಶೇಷವಾಗಿ ದೀಪಗಳಿಂದ ತುಳಸಿಯನ್ನು ಉಪಚರಿಸಬೇಕು .ಸಾಯಂಕಾಲ ವಿಶೇಷವಾಗಿ ದೀಪಾರಾಧನೆಯನ್ನು ಮಾಡಬೇಕು.(ತುಪ್ಪದ ದೀಪ ಶ್ರೇಷ್ಠ ಸಾಧ್ಯವಾಗದಿದ್ದಲ್ಲಿ ಎಳ್ಳೆಣ್ಣೆಯಿಂದಲಾದರು ದೀಪವನ್ನು ಬೆಳಗಿಸಬೇಕು)ಪ್ರತಿನಿತ್ಯ ತಪ್ಪದೇ ಇದನ್ನು ವ್ರತವಾಗಿ ಸ್ವೀಕರಿಸಬೇಕು ಮತ್ತು ದೇವರಿಗೆ ನಿವೇದಿಸಿದ ಪಾಯಸಾನ್ನವನ್ನು ಪ್ರತಿ ನಿತ್ಯ ತುಳಸಿಗೆ ನಿವೇದಿಸಬೇಕು ಹೀಗೆ ಕಾರ್ತೀಕಮಾಸದಲ್ಲಿ ತುಳಸಿಗೆ ಪ್ರತಿನಿತ್ಯವೂ ದೀಪಾರಾಧನೆ ಮತ್ತು ಪಾಯಸಾನ್ನದ ನೈವೈದ್ಯದಿಂದ ಇಷ್ಟಾರ್ಥಗಳು ಸಿದ್ಧಿಸುವುವು .

ಕಾರ್ತೀಕ ಮಾಸದಲ್ಲಿ ತುಲಸಿಯ ವಿಶೇಷ ಪೂಜೆ

ಕಾರ್ತೀಕ ಮಾಸವು ವರ್ಷದ ಶ್ರೇಷ್ಠ ಮಾಸಗಳಲ್ಲಿ ಒಂದು ಈ ಮಾಸದಲ್ಲಿ ಮಾಡುವ ಸಕಲ ಕಾರ್ಯಗಳು ಶ್ರೇಷ್ಠ ಅದರಲ್ಲೂ ತುಲಸಿಪೂಜೆಯು ವಿಶೇಷ. ದೀಪದಾನವಂತೂ ತುoಬ ಶ್ರೇಷ್ಠವಾದ ದಾನ. ಕಾರ್ತೀಕಮಾಸದಲ್ಲಿ ಇದು ಇನ್ನಷ್ಟು ಪವಿತ್ರ .ಕಾರ್ತೀಕವು ದೇವತೆಗಳ ಅರುಣೋದಯದ ಕಾಲ.ಆದಕ್ಕೆಂದೇ ದೀಪರಾಧನಯ ಮಹತ್ವ. ಮತ್ತು ದೀಪದಾನವೂ ಮಹತ್ವಪೂರ್ಣ.ತುಲಸೀ ಸಮೇತವಾದಗ ಇದಕ್ಕೆ ಇರುವ ಮಹತ್ವ ವರ್ಣನೆಗೆ ಮೀರಿದ್ದು ಕಾರ್ತೀಕಮಾಸವು ಮಾರ್ಗಶಿರ ಮಾಸದಿoದ ಪ್ರಾರoಭವಾಗುವ ಕೇಶವಾದಿ ಮಾಸಗಳಲ್ಲಿ ಕೊನೆಯದು ಎಂದರೆ ಇದು ಆ ವರ್ಷದ ಉಪಸಂಹಾರ ಸ್ವರೂಪದ ಮಾಸ ; ಆ ವರ್ಷದ ಸಮಸ್ತ ಕರ್ಮಗಳನ್ನೂ ಶ್ರೀಹರಿಗೆ ಸಮರ್ಪಿಸುವ ವಿಶೇಷ ಪರ್ವಕಾಲ.
ಸಮರ್ಪಣೆಗೆ ತುಲಸಿಯು ಅತ್ಯಂತ ಅಗತ್ಯವಾದುದರಿoದ ಈ ಮಾಸದಲ್ಲಿ ತುಲಸಿಯಪೂಜೆ ವಿಹಿತವಾಗಿದೆ.

ದೃಷ್ಟಾ ಸ್ಪರ್ಷ್ಟಾ ತಥಾ ಧ್ಯಾತಾ ಕಾರ್ತೀಕೇ ನಮಿತಾsರ್ಚಿತಾ |
ರೂಪೀತಾ ಸೇಚಿತಾ ನಿತ್ಯಂ ಪಾಪಂ ಹಂತಿ ಯುಗಾರ್ಚಿತಮ್ ||

ಅಷ್ಟಾಧಾ ತುಲಸೀ ಯೈಸ್ತು ಸೇವಿತಾ ದ್ವಿಜಸತ್ತಮ |
ಯುಗಕೋಟಿಸಹಸ್ರಾಣಿ ತೇ ವಸಂತಿ ಹರೇರ್ಗೃಹೇ ||
ಪದ್ಮಪುರಾಣ(ಉತ್ತರ ಖಂಡ)

ಕಾರ್ತೀಕಮಾಸದಲ್ಲಿ ತುಲಸಿಯ ದರ್ಶನ , ಸ್ಪರ್ಶನ ,ಧ್ಯಾನ,ನಮನ, ಅರ್ಚನೆ ,ರೋಪಣ ,ಸೇಚನ ,-ಮೊದಲಾದ ಸೇವೆಗಳಿoದ ತುಲಸಿಯು ಯುಗಗಟ್ಟಲೆ ಮಾಡಿದ ಪಾಪಗಳನ್ನು ನಾಶಪಡಿಸುವಳು .ಈ ಎಂಟು ರೀತಿಯಲ್ಲಿ ತುಲಸಿಯನ್ನು ಸೇವಿಸುವವರ ಮನೆಯಲ್ಲಿ ಕೋಟಿ ,ಸಾವಿರಯುಗಗಳವರೆಗೆ ನೆಲೆಸುವಳು , ಹೀಗೆ ತುಲಸಿಯನ್ನು ಸೇವಿಸು ವವರು .ಶ್ರೀ ಹರಿಯ ಮಂದಿರದಲ್ಲಿ ಕೋಟಿ ಸಾವಿರಯುಗ ಗಳಷ್ಟು ಕಾಲ ನೆಲೆಸುವರು.

ಕಾರ್ತೀಕಮಾಸದಲ್ಲಿ ಧಾತ್ರಿ(ನೆಲ್ಲಿ)ಮತ್ತು ತುಲಸಿಗಳ ಶ್ರೇಷ್ಠತೆ

ಕಾರ್ತೀಕ ಮಾಸದಲ್ಲಿ ತುಲಸಿ ಧಾತ್ರಿ(ನೆಲ್ಲಿ)ಗಳಿಗೆ ಪ್ರಾಧಾನ್ಯತೆಯನ್ನು ನೀಡಲಾಗಿದೆ .ಕಾರ್ತೀಕ ಮಾಸದಲ್ಲಿ ತುಲಸಿಪತ್ರ ಹಾಗೂ ಧಾತ್ರಿ ಪತ್ರದಿಂದ ವಿಷ್ಣುವನ್ನು ಪೂಜಿಸಿದರೆ ಅತಿಶಯವಾದ ಪುಣ್ಯವುoಟಾಗುತ್ತದೇ.ಧಾತ್ರಿ ತುಲಸಿಯನ್ನು ಸ್ಪರ್ಶಿಸಿದರೊ ಸಕಲದೋಷ ನಿವೃತ್ತಿಯಾಗುತ್ತದೆ .

ತುಲಸಿ ಧಾತ್ರಿ ಪತ್ರಾಭ್ಯಾಂ ಯಃ ಪೂಜಾ ಕುರುತೇ ಹರೆಃ |
ತಸ್ಯ ಪುಣ್ಯಸ್ಯ ಮಹಾತ್ಮ್ಯಂ ಮಯಾ |
ವಕ್ತುಂ ನ ಶಕ್ಯತೇ
ಸ್ಪರ್ಶನo ಧಾತ್ರಿ ಪತ್ರಣಾಂ ಮೋಚನಂ ದುಷ್ಟ ಯೋನಿತಃ ||

ತುಲಸಿ ಮತ್ತು ಧಾತ್ರಿಯುಕ್ತವಾದ ಜಲದಿಂದ ಪ್ರೋಕ್ಷಣೆ ಮಾಡುವುದರಿಂದ ಬ್ರಹ್ಮಹತ್ಯಾದಿ ಪಾತಕಗಳು ದೂರವಾಗುವುವು

ವಿಲಯಂ ಯಾಂತಿ ಪಾಪಾನಿ ಬ್ರಹ್ಮಹತ್ಯಾದಿಕಾನಿ ಚ |
ತುಲಸೀಧಾತ್ರಿಯುಕ್ತೋದ್ಯೈಃ ಸಿಕ್ತೇ ಹಿ ಕಾರ್ತಿಕೇ ||

ಕಲಹ ವೆಂಬ ಸ್ತ್ರೀಯು ತನ್ನ ಪತಿಗೆ ವಿರುದ್ಧವಾಗಿ ನಡೆದು ಗಂಡನಿoದ ಛೀತ್ಕಾರ ಹಾಕಿಸಿ ಕೊಂಡು ಆತ್ಮಹತ್ಯೆಯನ್ನು ಮಾಡಿಕೊoಡು ಪ್ರೇತಳಾಗಿ ದುಃಖವನ್ನು ಅನುಭವಿಸುತ್ತಿದ್ದಳು. ಒಂದು ದಿನ ಧರ್ಮದತ್ತನೆಂಬ ಬ್ರಾಹ್ಮಣನು ಅವಳನ್ನು ನೋಡಿ ಭಯದಿಂದ ತುಲಸಿ ಮಾಲೆ ಮತ್ತು ಧಾತ್ರಿ ಮಾಲೆಯಿoದ ಹೊಡೆದು ನೀರಿನಿಂದ ಸಿಂಪಡಿಸಿದನು .ಇದರಿಂದಲೆ ಅವಳು ಪ್ರೇತಯೋನಿ ಯಿಂದ ಮುಕ್ತಳಾದಳು.
ಕಾರ್ತಿಕಮಾಸದ ವ್ರತದಿಂದಲೇ ಧರ್ಮದತ್ತನು ದಶರಥ ಮಹಾರಾಜನಾಗಿ
ಶ್ರೀರಾಮಚಂದ್ರದೇವರ ಪಿತೃವೆನಿಸಿದನು.

ತುಲಸಿಯ ಪ್ರಾಧಾನ್ಯತೇ -ಕಾರ್ತಿಕಮಾಸದಲ್ಲಿ ತುಲಸಿಯಿoದ ನಾರಾಯಣನನ್ನು ಪೂಜಿಸಿದರೆ ಅಶ್ವಮೇಧಯಾಗದ ಫಲವುಲಭಿಸುತ್ತದೆ . ಕಾರ್ತೀಕ ಮಾಸದಲ್ಲಿ ತುಲಸಿಯನ್ನು ನೋಡುವುದು,ಸ್ಪರ್ಶಿಸುವುದು ,ಧ್ಯಾನ,ನಾಮೋಚ್ಚಾರಣೆ ,ತುಲಸಿಯ ಸ್ತೋತ್ರ ಮಾಡುವುದು.ನೀರು ಹಾಕಿ ಬೆಳೆಸುವುದು,ಪೂಜೆ ಮಾಡುವುದು ,ನೀರನ್ನು ಹಾಕುವುಡು ಇವುಗಳು ಶುಭಕಾರಿ .
ದೃಷ್ಟಾ ಸ್ಪೃಷ್ಟಾ ತಥಾ ಧ್ಯಾತಾ ಕೀರ್ತಿತ ನಾಮತಸ್ತುತಾ |
ರೋಪಿತಾ ಸಿಂಚಿತಾ ನಿತ್ಯಂ ಪೂಜಿತಾ ತುಲಸೀ ಶುಭಾ |
ನವಧಾ ತುಲಸೀ ಭಕ್ತಿಂ ಯೇ ಕುರ್ವಂತಿ ದಿನೆ ದಿನೇ ||

ತುಲಸಿಯ ಮಹತ್ವ

ತುಲಸೀ ಶಬ್ದದ ಅರ್ಥ

ಯಸ್ಯಾ ದೇವ್ಯಾಸ್ತುಲಾ ನಾಸ್ತಿ ವಿಶ್ವೇಶು ನಿಖಿಲೇಷು ಚ |
ತುಲಸೀ ಯೇನ ವಿಖ್ಯಾತ ತಾಂ ಯಾಮಿ ಶರಣಂ ಪ್ರಿಯೇ ||

ವಿಶ್ವದ ಸಕಲ ವೃಕ್ಷಗಳಲ್ಲೂ ಇದಕ್ಕೆ ಸಮನಾದ ಮತ್ತೊಂದು ವೃಕ್ಷವಿಲ್ಲ ಅದಕ್ಕೇಂದೇ ಇದಕ್ಕೆ ತುಲಸಿ ಎಂದು ಹೆಸರು .
-ಬ್ರಹ್ಮವೈವರ್ತಪುರಾಣ(1-22-24)

ತುಳಸಿದಳದ ಮಹಿಮೆ

ತುಲಸಿದಲಮಾಹತ್ಮ್ಯಂ ಶ್ರುಣುಷ್ವಾದ್ಯ ಸಮಾಹಿತಃ |
ತೇನಾಧೀತಂ ಶ್ರುತಂ ತೇನ ತೇನ ಸರ್ವಮನುಷ್ಠಿತಮ್||

ತುಲಸೀದಳದ ಮಾಹತ್ಮ್ಯಾ ಆಪಾರವಾದುದು .ಅದನ್ನು ತಿಳಿಯುವುದು ಸಹ ಸಕಲ ಶಾಸ್ತ್ರಗಳ ಅಧ್ಯಯನ , ಶ್ರವಣಗಳ ಹಾಗೂ ಸಕಲಸತ್ಕಾರ್ಯಗಳ ಅನುಷ್ಠಾನ ಫಲಕ್ಕೆ ಸಮವೆನ್ನಿಸುವುದು .
-ವಿಷ್ಣುಧರ್ಮೋತ್ತರ ಪುರಾಣ

ತುಲಸಿಯ ಸೇವೆಯ ಪಲ

ದೃಷ್ಟಾ ಸ್ಪೃಷ್ಟಾsಥವಾ ಧ್ಯಾತಾ ಕೀರ್ತೀತಾ ಶ್ರುತಾ |
ರೋಪಿತಾ ಸೇಚಿತ ನಿತ್ಯಂ ತುಲಸೀ ಪುಜಿತಾ ಶುಭಾ ||

ನವಧಾ ತುಲಸೀಭಕ್ತಿಂ ಯೇ ಕುರ್ವಂತಿ ದಿನೇ ದಿನೆ |
ಯುಗಕೋಟಿ ಸಹಸ್ರಾಣಿ ತೇ ವಸಂತಿ ಹರೇರ್ಗೃಹೇ ||

ತುಲಸಿಯ ದರ್ಶನ , ಸ್ಪರ್ಶನ ,ಧ್ಯಾನ, ಕೀರ್ತನ ,ಶ್ರವಣ ,ರೋಪಣ ಸೇಚನ, ಪೂಜನ ,ಹಾಗೋ ವಂದನ ಈರೀತಿಯಾಗಿ ಒಂಬತ್ತುಭಗೆಯಲ್ಲಿ ಭಕ್ತಿಯಿಂದ ತುಲಸಿಯನ್ನು ಯಾರು ಪ್ರತಿದಿನವೂ ಸೇವಿಸುವರೋ ಅವರು ಶ್ರೀಹರಿಯ ಮಂದಿರದಲ್ಲಿ ಕೋಟಿಯುಗಗಳಷ್ಟು ಕಾಲ ನೆಲೆಸುವರು .
-ಪದ್ಮಪುರಾಣ

ರೋಪಣ-ತುಲಸಿಯನ್ನು ದೇವರಿಗಾಗಿ ಬೇಳೆಸುವುದು
ಸೇಚನ- ತುಲಸಿಗೆ ಯಥಾಯೋಗ್ಯವಾಗಿ ನೀರನ್ನು ಹಾಕುವುದು .

ಬಿoಬಮಪ್ಯರ್ಚಿತo ದೃಷ್ಟ್ವಾ ಸಹೋಮಾಸೇ ಚ ಮಾಮಕಮ್ |
ತುಲಸೀಪತ್ರ ನಿಚಯೈಃ ಮುಚ್ಯತೇ ಬ್ರಹ್ಮಹತ್ಯಯಾ ||

ಕಾರ್ತೀಕಮಾಸದಲ್ಲಿ ತುಲಸಿಪತ್ರಗಳ ರಾಶಿಯಿಂದ ಶ್ರೀಹರಿಯಪ್ರತಿಮೆಗೆ ಪೂಜೆಸಲ್ಲಿಸಬೇಕು ಹೀಗೆ ಮಾಡಲು ಸಾಧ್ಯವಾಗದಿದ್ದಾಗ ತುಲಸಿಯಿಂದ ಅರ್ಚಿತವಾದ ಮೂರ್ತಿಯ ದರ್ಶನಪಡೆದುಕೊಳ್ಳಬೇಕು .ಭಕ್ತಿ-ಶ್ರದ್ಧೆಗಳಿಂದ ಹೀಗೆ ಮಾಡಿದರೆ ಬ್ರಹ್ಮಾಹತ್ಯಾದಿ ಪಾಪಗಳು ನಾಶವಾಗುತ್ತದೆ .
-ಪದ್ಮಪುರಾಣ

ತುಲಸಿಯ ಸೇವೆಯ ಫಲ

ತುಲಸ್ಯಾ ಸಹಿತಂ ದತ್ತಂ ತತ್ ಶ್ರೀಕೃಷ್ಣಸ್ಯ ತುಷ್ಟಯೇ|
ತುಲಸ್ಯಾ ಸಹಿತಂ ದಾನಂ ತದ್ದಾನಂ ಚ ಸುಖಾಪ್ತಯೇ||

ಯಾವುದೇ ದಾನವನ್ನು ತುಲಸಿಯ ಸಮೇತವಾಗಿಯೇ ಶ್ರೀಕೃಷ್ಣಪರಮಾತ್ಮನ ಪ್ರೀತಿಗೆಂದು ಸಮರ್ಪಿಸಬೇಕು .ಅಂತಹ ದಾನವು ಸುಖಪ್ರಾಪ್ತಿಗೆ ಸಾಧನವಾಗುವುದು .
-ಶಾಂಡಿಲ್ಯ ಸಂಹಿತೆ

ಕಾರ್ತೀಕ ಮಾಸದಲ್ಲಿ ತುಲಸಿಯ ವಿಶೇಷ ಪೂಜೆ

ಕಾರ್ತೀಕ ಮಾಸವು ವರ್ಷದ ಶ್ರೇಷ್ಠ ಮಾಸಗಳಲ್ಲಿ ಒಂದು ಈ ಮಾಸದಲ್ಲಿ ಮಾಡುವ ಸಕಲ ಕಾರ್ಯಗಳು ಶ್ರೇಷ್ಠ ಅದರಲ್ಲೂ ತುಲಸಿಪೂಜೆಯು ವಿಶೇಷ. ದೀಪದಾನವಂತೂ ತುಂಬ ಶ್ರೇಷ್ಠವಾದ ದಾನ. ಕಾರ್ತೀಕಮಾಸದಲ್ಲಿ ಇದು ಇನ್ನಷ್ಟು ಪವಿತ್ರ .ಕಾರ್ತೀಕವು ದೇವತೆಗಳ ಅರುಣೋದಯದ ಕಾಲ.ಆದಕ್ಕೆಂದೇ ದೀಪರಾಧನಯ ಮಹತ್ವ. ಮತ್ತು ದೀಪದಾನವೂ ಮಹತ್ವಪೂರ್ಣ.ತುಲಸೀ ಸಮೇತವಾದಾಗ ಇದಕ್ಕೆ ಇರುವ ಮಹತ್ವ ವರ್ಣನೆಗೆ ಮೀರಿದ್ದು ಕಾರ್ತೀಕಮಾಸವು ಮಾರ್ಗಶಿರ ಮಾಸದಿಂದ ಪ್ರಾರಂಭವಾಗುವ ಕೇಶವಾದಿ ಮಾಸಗಳಲ್ಲಿ ಕೊನೆಯದು ಎಂದರೆ ಇದು ಆ ವರ್ಷದ ಉಪಸಂಹಾರ ಸ್ವರೂಪದ ಮಾಸ ; ಆ ವರ್ಷದ ಸಮಸ್ತ ಕರ್ಮಗಳನ್ನೂ ಶ್ರೀಹರಿಗೆ ಸಮರ್ಪಿಸುವ ವಿಶೇಷ ಪರ್ವಕಾಲ.
ಸಮರ್ಪಣೆಗೆ ತುಲಸಿಯು ಅತ್ಯಂತ ಅಗತ್ಯವಾದುದರಿoದ ಈ ಮಾಸದಲ್ಲಿ ತುಲಸಿಯಪೂಜೆ ವಿಹಿತವಾಗಿದೆ.

ದೃಷ್ಟಾ ಸ್ಪೃಷ್ಟಾ ತಥಾ ಧ್ಯಾತಾ ಕಾರ್ತೀಕೇ ನಮಿತಾsರ್ಚಿತಾ |
ರೂಪೀತಾ ಸೇಚಿತಾ ನಿತ್ಯಂ ಪಾಪಂ ಹಂತಿ ಯುಗಾರ್ಚಿತಮ್ ||
ಅಷ್ಟಾಧಾ ತುಲಸೀ ಯೈಸ್ತು ಸೇವಿತಾ ದ್ವಿಜಸತ್ತಮ |ಯುಗಕೋಟಿಸಹಸ್ರಾಣಿ ತೇ ವಸಂತಿ ಹರೇರ್ಗೃಹೇ ||
ಪದ್ಮಪುರಾಣ(ಉತ್ತರ ಖಂಡ)

ಕಾರ್ತೀಕಮಾಸದಲ್ಲಿ ತುಲಸಿಯ ದರ್ಶನ , ಸ್ಪರ್ಶನ ,ಧ್ಯಾನ,ನಮನ, ಅರ್ಚನೆ ,ರೋಪಣ ,ಸೇಚನ ,-ಮೊದಲಾದ ಸೇವೆಗಳಿಂದ ತುಲಸಿಯು ಯುಗಗಟ್ಟಲೆ ಮಾಡಿದ ಪಾಪಗಳನ್ನು ನಾಶಪಡಿಸುವಳು .ಈ ಎಂಟು ರೀತಿಯಲ್ಲಿ ತುಲಸಿಯನ್ನು ಸೇವಿಸುವವರ ಮನೆಯಲ್ಲಿ ಕೋಟಿ ,ಸಾವಿರಯುಗಗಳವರೆಗೆ ನೆಲೆಸುವಳು , ಹೀಗೆ ತುಲಸಿಯನ್ನು ಸೇವಿಸು ವವರು .ಶ್ರೀ ಹರಿಯ ಮಂದಿರದಲ್ಲಿ ಕೋಟಿ ಸಾವಿರಯುಗ ಗಳಷ್ಟು ಕಾಲ ನೆಲೆಸುವರು.

ದೀಪಮಾರೋಪಯೇತ್ಸಾಯಂ ಕಾರ್ತಿಕೇ ಪ್ರತಿವಾಸರಮ್ |
ನಿವೇದ್ಯ ಪಾಯಸನ್ನಂ ಚ ಸಿದ್ಧಿಮಿಷ್ಟಾಮವಾಪ್ನುಯಾತ್ ||

ಕಾರ್ತೀಕಮಾಸದಲ್ಲಿ ಪ್ರತಿನಿತ್ಯವೂ ಪ್ರಾತಃಕಾಲ-ಸಾಯಂಕಾಲ ವಿಶೇಷವಾಗಿ ದೀಪಗಳಿಂದ ತುಳಸಿಯನ್ನು ಉಪಚರಿಸಬೇಕು .ಸಾಯಂಕಾಲ ವಿಶೇಷವಾಗಿ ದೀಪಾರಾಧನೆಯನ್ನು ಮಾಡಬೇಕು.(ತುಪ್ಪದ ದೀಪ ಶ್ರೇಷ್ಠ ಸಾಧ್ಯವಾಗದಿದ್ದಲ್ಲಿ ಎಳ್ಳೆಣ್ಣೆಯಿಂದಲಾದರು ದೀಪವನ್ನು ಬೆಳಗಿಸಬೇಕು)ಪ್ರತಿನಿತ್ಯ ತಪ್ಪದೇ ಇದನ್ನು ವ್ರತವಾಗಿ ಸ್ವೀಕರಿಸಬೇಕು ಮತ್ತು ದೇವರಿಗೆ ನಿವೇದಿಸಿದ ಪಾಯಸಾನ್ನವನ್ನು ಪ್ರತಿನಿತ್ಯ ತುಳಸಿಗೆ ನಿವೇದಿಸಬೇಕು ಹೀಗೆ ಕಾರ್ತೀಕಮಾಸದಲ್ಲಿ ತುಳಸಿಗೆ ಪ್ರತಿನಿತ್ಯವೂ ದೀಪಾರಾಧನೆ ಮತ್ತು ಪಾಯಸಾನ್ನದ ನೈವೈದ್ಯದಿಂದ ಇಷ್ಟಾರ್ಥಗಳು ಸಿದ್ಧಿಸುವುವು .
-ಪದ್ಮಪುರಾಣ

ಸಂಪ್ರಾಪ್ತಂ ಕಾರ್ತೀಕಂ ದೃಷ್ಟ್ವಾ ನಿಯಮೇನ ಜನಾರ್ದನಃ |
ಪೂಜನಿಯೋ ಮಹದ್ಭಿಶ್ಚ ಕೋಮಲೈ ತುಲಸೀ ದಲೈಃ ||

ಕಾರ್ತೀಕ ಮಾಸದಲ್ಲಿ ಜನಾರ್ಧನನನ್ನು ತುಲಸೀ ದಳಗಳಿಂದ ಪೂಜಿಸಬೇಕು. ಇದನ್ನು ಈ ಮಾಸದಲ್ಲಿ ನಿಯಮವಾಗಿ ಮಾಡಬೇಕು ಮಹಾತ್ಮರಾದವರೂ ಈ ಪೂಜೆಯನ್ನು ತಪ್ಪಿಸಬಾರದು.
-ಪದ್ಮಪುರಾಣ

ತುಲಸೀದಳಪುಷ್ಪಾಣಿ ಯೋ ದದ್ಯಾದ್ಧರಯೇ ಮುನೇ |
ಕಾರ್ತಿಕೇ ಸಕಲಂ ಪಾಪಂ ಸೋsತ್ರ ಜನ್ಮಾರ್ಜಿತಂ ದಹೇತ್ ||

ಕಾರ್ತೀಕಮಾಸದಲ್ಲಿ ವಿಶೇಷವಾಗಿ ತುಲಸೀ ಪತ್ರಗಳಿಂದ ,ತುಲಸೀದಳಗಳಿಂದ ಅಥವ ತುಲಸೀ ಪುಷ್ಪಗಳಿoದ ಪರಮಾತ್ಮನನ್ನು ಅರ್ಚಿಸಬೇಕು.ಹೀಗೆ ಮಾಡಿದ ಸಾಧಕನು ತಾನು ಈ ಜನ್ಮದಲ್ಲಿ ಸಂಪಾದಿಸಿದ ಪಾಪಗಳನ್ನೆಲ್ಲ ಕಳೆದುಕೊಳ್ಳುತ್ತಾನೆ ಅವನ ಎಲ್ಲ ಪಾಪಗಳು ಸುಟ್ಟು ಭಸ್ಮವಾಗುತ್ತದೆ.
-ಪದ್ಮಪುರಾಣ

ಬಿoಬಮಪ್ಯರ್ಚಿತo ದೃಷ್ಟ್ವಾ ಸಹೋಮಾಸೇ ಚ ಮಾಮಕಮ್ |
ತುಲಸೀಪತ್ರ ನಿಚಯೈಃ ಮುಚ್ಯತೇ ಬ್ರಹ್ಮಹತ್ಯಯಾ ||

ಕಾರ್ತೀಕಮಾಸದಲ್ಲಿ ತುಲಸಿಪತ್ರಗಳ ರಾಶಿಯಿಂದ ಶ್ರೀಹರಿಯಪ್ರತಿಮೆಗೆ ಪೂಜೆಸಲ್ಲಿಸಬೇಕು ಹೀಗೆ ಮಾಡಲು ಸಾಧ್ಯವಾಗದಿದ್ದಾಗ ತುಲಸಿಯಿಂದ ಅರ್ಚಿತವಾದ ಮೂರ್ತಿಯ ದರ್ಶನಪಡೆದುಕೊಳ್ಳಬೇಕು .ಭಕ್ತಿ-ಶ್ರದ್ಧೆಗಳಿಂದ ಹೀಗೆ ಮಾಡಿದರೆ ಬ್ರಹ್ಮಾಹತ್ಯಾದಿ ಪಾಪಗಳು ನಾಶವಾಗುತ್ತದೆ .
-ಪದ್ಮಪುರಾಣ

ಪ್ರಾತಃ ಸ್ನಾತ್ವ ಶುಚಿರ್ಭೂತ್ವಾ ಕಾರ್ತೀಕೇ ವಿಷ್ಣುತತ್ಪರಃ |
ದೇವಂ ದಾಮೋದರಂ ಪೂಜ್ಯ ಕೋಮಲೈಸ್ತುಲಸೀದಲೈಃ |
ನ ತು ಮೋಕ್ಷಮವಾಪ್ನೋತಿ ನಾತ್ರ ಕಾರ್ಯಾ ವಿಚರಣಾ ||

ಕಾರ್ತೀಕಮಾಸದಲ್ಲಿ ಪ್ರಾತಃಕಾಲದಲ್ಲಿ ಸ್ನಾನಮಾಡಿ ಶುಚಿರ್ಭೂತನಾಗಿ ಕೋಮಲವಾದ ತುಳಸಿದಳಗಳಿಂದ ದೇವನಾದ ದಾಮೋದರನನ್ನು ಪೂಜಿಸಿದವನು ಮೋಕ್ಷವನ್ನು ಪಡೆದು ಕೊಳ್ಳುವನು ; ಈ ಬಗ್ಗೆ ವಿಚಾರಮಾಡಬೇಕಿಲ್ಲ .
ಸ್ಕಂಧಪುರಾಣ

ಕಾರ್ತೀಕೇ ತುಲಸೀಪತ್ರಂ ವಿಷ್ಣವೇ ಯೋ ದದಾತಿ ಚ |
ಗವಾಮಯುತದಾನಸ್ಯ ಫಲಮಾಪ್ನೋತಿ ನಿಶ್ಚೀತಮ್ ||

ಕಾರ್ತೀಕಮಾಸದಲ್ಲಿ ವಿಷ್ಣುವಿಗೆ ತುಲಸಿಯ ಪತ್ರವನ್ನು ಸಮರ್ಪಿಸುವವನಿಗೆ ಹತ್ತು ಸಾವಿರ ಗೋವುಗಳನ್ನು. ದಾನಮಾಡಿದ ಫಲವು ನಿಶ್ಚಿತವಾಗಿ ಲಭಿಸುವುದು .
-ಬ್ರಹ್ಮವೈವರ್ತಪುರಾಣ

|| ಶ್ರೀಗುರ್ವಂತರಗತ ಶ್ರೀಭಾರತೀರಮಣಮುಖ್ಯಪ್ರಾಣಾಂತರ್ಗತ ಶ್ರೀಕಾರ್ತೀಕ ರಾಧಾ ದಾಮೋದರಾರ್ಪಣಮಸ್ತು ||

madhwamrutha

Tenets of Madhwa Shastra

You may also like...

Leave a Reply

Your email address will not be published. Required fields are marked *