ಶ್ರೀ ಹರಿದಾಸ ದರ್ಶನ – Sri Haridasa darshana

” ಶ್ರೀ ಹರಿದಾಸ ಮಾರ್ಗದರ್ಶಿ “
[ ಕರ್ನಾಟಕ ಹರಿದಾಸ ಪರಂಪರೆ / ಪೀಳಿಗೆ ]
” ಪ್ರಸ್ತಾವನೆ “
ಹರಿದಾಸ ಸಾಹಿತ್ಯದ ಚೇತನವೇ ಆಗಿರುವ ದ್ವೈತ ದರ್ಶನದ ಪ್ರಮುಖ ತತ್ತ್ವಗಳನ್ನು [ ನವ ಪ್ರಮೇಯಗಳನ್ನು ] ಶ್ರೀಮದಾಚಾರ್ಯರು [ ಆನಂದತೀರ್ಥ ] – ಶ್ರೀ ನರಹರಿತೀರ್ಥರು [ ರಘುಪತಿ ] – ಶ್ರೀ ಜಯತೀರ್ಥರು [ ಶ್ರೀರಾಮ / ಶ್ರೀ ಜಯರಾಮ ] – ಶ್ರೀ ವಿಬುಧೇಂದ್ರತೀರ್ಥರು [ ಶ್ರೀ ವಿಬುಧೇಂದ್ರರಾಮ ] – ಶ್ರೀ ಶ್ರೀಪಾದರಾಜರು [ ರಂಗವಿಠಲ ] – ಶ್ರೀ ವ್ಯಾಸರಾಜರು [ ಸಿರಿಕೃಷ್ಣ / ಶ್ರೀಕೃಷ್ಣ ] – ಶ್ರೀ ಗೋವಿಂದ ಒಡೆಯರು [ ಶ್ರೀ ಗುರುಕೃಷ್ಣ ] – ಶ್ರೀ ವಾದಿರಾಜರು [ ಹಯವದನ ] – ಶ್ರೀ ವಿಜಯೀ೦ದ್ರತೀರ್ಥರು [ ಶ್ರೀ ವಿಜಯೀ೦ದ್ರರಾಮ ] – ಶ್ರೀ ರಾಘವೇಂದ್ರತೀರ್ಥರು [ ವೇಣುಗೋಪಾಲ ] – ಶ್ರೀ ಪುರಂದರದಾಸರು, ಶ್ರೀ ಕನಕದಾಸರು, ಶ್ರೀ ವಿಜಯದಾಸರುಗಳ ಶಿಷ್ಯ – ಪ್ರಶಿಷ್ಯರುಗಳು ಪ್ರತಿಪಾದಿಸಿದ್ದಾರೆ.
ಅವುಗಳೆಂದರೆ –
- ಹರಿಃ ಪರತರಃ = ಶ್ರೀ ಹರಿ ಸರ್ವೋತ್ತಮ
- ಸತ್ಯಂ ಜಗತ್ = ಜಗತ್ತು ಸತ್ಯವಾಗಿದೆ.
- ತತ್ತ್ವತೋ ಭೇದಃ = ಭೇದವು ಪಾರಮಾರ್ಥಿಕವಾಗಿದೆ.
- ಜೀವಗಣಾ ಹರೇರನುಚರಾ = ಸಮಸ್ತ ಜೀವರಾಶಿಯೂ ಶ್ರೀ ಹರಿಯ ಅಧೀನ.
- ನೀಚೋಚ್ಛ ಭಾವಂಗತಾ = ಸಮಸ್ತ ಜೀವರಾಶಿಗಳೂ ತಾರತಮ್ಯಯುಕ್ತವಾದುದು.
- ಮುಕ್ತಿ: ನೈಜ ಸುಖಾನುಭೂತಿ = ಆತ್ಮನ ನಿಜವಾದ ಸುಖಾನುಭವವೇ ಮುಕ್ತಿ
- ಅಮಲಾ ಭಕ್ತಿ: ತತ್ ಸಾಧನಂ = ನಿರ್ಮಲ ಭಕ್ತಿಯೇ ಮುಕ್ತಿಗೆ ಸಾಧನೆ
- ಅಕ್ಷಾದಿ ತ್ರಿತಯಂ ಪ್ರಮಾಣಂ = ಪ್ರತ್ಯಕ್ಷಾದಿ ಮೂರು ಪ್ರಮಾಣಗಳು
- ಅಖಿಲಾಮ್ನಾಯೈಕ ವೇದ್ಯೋ ಹರಿಃ = ಶ್ರೀ ಹರಿಯು ಅನಂತ ವೇದ ಪ್ರತಿಪಾದ್ಯ
ಇವೆ ನವ ಪ್ರಮೇಯಗಳು – ದ್ವೈತ ಸಿದ್ಧಾಂತದ ನವ ಪ್ರಮೇಯಗಳಲ್ಲಿ ಒಂದಾಗಿ – ಅತ್ಯಂತ ಮಹತ್ವವನ್ನು ಪಡೆದು – ಎಲ್ಲಾ ಹರಿದಾಸರು ಉಸಿರೇ ಆದ –
” ಹರಿ ಸರ್ವೋತ್ತಮತ್ವ ” ವು ಎಲ್ಲಾ ಕೀರ್ತನೆಗಳಲ್ಲಿಯೂ ಪ್ರತಿಪಾದಿತವಾಗಿರುವುದನ್ನು ಕಾಣಬಹುದು.
ಆ ದರ್ಶನದ ಇತರ ತತ್ತ್ವಗಳೆಲ್ಲವೂ ಶ್ರೀ ಹರಿ ಸರ್ವೋತ್ತಮತ್ವಕ್ಕೆ ಪೂರಕ – ಪೋಷಕ ಹಾಗೂ ಪ್ರತಿಪಾದಗಳೆಂದಾಗ ಈ ತತ್ತ್ವದ ಮಹತ್ವ ಅರಿವಾಗುತ್ತದೆ.
ಈ ದ್ವೈತ ದರ್ಶನದ ಸಿದ್ಧಾಂತಗಳನ್ನು ಎಲ್ಲಾ ಹರಿದಾಸರು ಅತ್ಯಂತ ಸರಳವಾಗಿ – ಅಷ್ಟೇ ದೃಢವಾಗಿ ತಮ್ಮ ಕೃತಿಗಳಲ್ಲಿ ತಂದಿದ್ದಾರೆ.
ಹರಿದಾಸರ ಕೀರ್ತನೆಗಳಲ್ಲಿ ಹರಿಸರ್ವೋತ್ತಮ – ಜೀವರಾಶಿ ಶ್ರೀ ಹರಿಯ ಅಧೀನ – ತಾರತಮ್ಯ – ಪಂಚಭೇದ – ನಿರ್ಮಲ ಭಕ್ತಿ – ಶ್ರೀ ಹರಿ ಅನಂತ ವೇದಗಳಿಂದ ಪ್ರತಿಪಾದ್ಯ – ಈ ತತ್ತ್ವಗಳು ನಿರೂಪಿತವಾಗಿರುವುದನ್ನು ಅರಿಯಬಹುದು.
ಹರಿದಾಸರಲ್ಲಿ ಕಂಡು ಬರುವ ಶ್ರೀ ಹರಿಸರ್ವೋತ್ತಮತ್ವದ ಬಗೆಗಿನ ಈ ಒಲವು ತತ್ವಕ್ಕಿಲ್ಲ ಅಥವಾ ಅನುಷಂಗಿಕವಾಗಿರದೆ ಅದು ಆಳವಾದ ಶ್ರದ್ಧೆ ಹಾಗೂ ಅಚಲವಾದ ನಿಷ್ಠೆಗಳ ನಿಲುವಾಗಿದೆ ಎಂಬುದನ್ನು ಕಂಡುಕೊಳ್ಳಬಹುದಾಗಿದೆ.
ಇಲ್ಲಿ ಏಕದೇವ ನಿಷ್ಠೆ ಬಲಿಷ್ಠವಾಗಿದ್ದರೂ ಕೂಡಾ ಈ ನಿಷ್ಠೆ ಅನ್ಯ ದೇವತೆಗಳ ಅವಹೇಳನದಲ್ಲಿ ಪರ್ಯವಸಾನವಾಗುವುದಿಲ್ಲ ಎಂಬುದು ಮಹತ್ವದ ಅಂಶ.
ಶ್ರೀ ಮಧ್ವ ಸಂಪ್ರದಾಯದಲ್ಲಿ ದೇವತಾ ತಾರತಮ್ಯದ ಕಲ್ಪನೆ ಇರುವುದರಿಂದ ಅನ್ಯ ದೇವತೆಗಳ ನಿಂದೆಗೆ ಅವಕಾಶವಿಲ್ಲ ಎನ್ನಬಹುದು.
ಅಂತೆಯೇ ತಾರತಮ್ಯಕ್ಕೆ ಅನುಗುಣವಾಗಿ –
ಶ್ರೀ ವಾಯು – ಶ್ರೀ ಲಕ್ಷ್ಮೀ – ಶ್ರೀ ಸರಸ್ವತೀ – ಶ್ರೀ ಭಾರತೀ – ಶ್ರೀ ಶಿವ – ಶ್ರೀಪಾರ್ವತಿ – ಶ್ರೀ ಗಣಪತಿ ಮೊದಲಾದ ಎಲ್ಲ ದೇವತೆಗಳೂ ಸ್ತುತಿಸಲ್ಪಟ್ಟಿದ್ದಾರೆ.
ದ್ವೈತ ಸಿದ್ಧಾಂತದ ಘೋಷಣೆಯ ವಾಕ್ಯವಾದ –
” ಶ್ರೀ ಹರಿ ಸರ್ವೋತ್ತಮ – ಶ್ರೀ ವಾಯು ಜೀವೋತ್ತಮ ” ವು
ಎಲ್ಲ ಹರಿದಾಸರ ಧೋರಣೆಯಾಗಿದೆ.
ಶ್ರೀ ಕೃಷ್ಣ ಪರಮಾತ್ಮನ ಜ್ಯೇಷ್ಠ ಪುತ್ರರಾದ ಶ್ರೀ ವಾಯುದೇವರು ತ್ರೇತೆಯಲ್ಲಿ ” ಶ್ರೀ ಹನೂಮಂತ ” ರಾಗಿಯೂ – ದ್ವಾಪದಲ್ಲಿ ” ಶ್ರೀ ಭೀಮಸೇನ ” ರಾಗಿಯೂ – ಈ ಕಲಿಯುಗದಲ್ಲಿ ” ಶ್ರೀ ಮಧ್ವರಾಗಿ ಅವತರಿಸಿ ಶ್ರೀ ಕೃಷ್ಣ ಪರಮಾತ್ಮನ ಸೇವೆಗೈದರು ಎಂಬ ಶ್ರೀ ಮಧ್ವರ ನಂಬಿಕೆಯನ್ನು ಶ್ರೀ ಮಹಿಪತಿದಾಸರು –
ಪ್ರಥಮಲ್ಯಾದೆ ಹನುಮ ।
ದ್ವಿತೀಯಲ್ಯಾದೆ ಭೀಮ ।
ತೃತೀಯೆಲ್ಯಾದೆ ಪೂರ್ಣ –
ಪ್ರಜ್ಞ ನೆನಿಸಿದ ನಿಸ್ಸೀಮ ।।
ಎಂದು ನೆನಿಪಿಸಿದ್ದಾರೆ – ಇದರಂತೆ ಸಂಕ್ಷಿಪ್ತವಾಗಿ – ವಿಸ್ತಾರವಾಗಿ – ಇಡಿಯಾಗಿ – ಬಿಡಿಯಾಗಿ ವಿವಿಧ ರೀತಿಯಿಂದ ಈ ಅವತಾರತ್ರಯದ ವರ್ಣನೆ ಎಲ್ಲಾ ಹರಿದಾಸರಲ್ಲಿಯೂ ಕಂಡು ಬರುತ್ತದೆ.
ಹರಿದಾಸರ ಕೃತಿಗಳಲ್ಲಿ ಕಂಡು ಬರುವ ವಿವಧ ಪ್ರಕಾರಗಳು –
- ಕೀರ್ತನೆ
- ಉಗಾಭೋಗ
- ಸುಳಾದಿ
- ವೃತ್ತನಾಮ
- ಜಾವಳಿ
- ರಗಳೆ
- ದಂಡಕ
- ಮುಂಡಿಗೆ
- ಬಯಲಾಟ
- ಲಾವಣಿ
- ಕೋಲುಪದ
- ಗೀ ಗೀ ಪದ
- ಷಟ್ಪದಿ
- ಶ್ರೀ ಮಹಿದಾಸ ಶ್ರೀ ಕೃಷ್ಣ ಪರಮಾತ್ಮ
ಶ್ರೀ ಮಹಿದಾಸರು ಶ್ರೀ ಇತಿರಾದೇವಿಯರಲ್ಲಿ ಅವತಾರ – ಇವರು ಶ್ರೀ ಮಹಾಲಕ್ಷ್ಮೀದೇವಿಯರೂ ಹಾಗೂ ಶ್ರೀ ಚತುರ್ಮುಖ ಬ್ರಹ್ಮಾದಿಗಳಿಗೆ ದಾಸತ್ವ ಬೋಧಕರು.
” ಪ್ರಥಮ ಘಟ್ಟದ ಹರಿದಾಸರು “
- ಶ್ರೀಮನ್ಮಧ್ವಾಚಾರ್ಯರು
ಜನ್ಮ ಸ್ಥಳ : ಶ್ರೀ ಪಾಜಕ ಕ್ಷೇತ್ರ / ಶಿವಳ್ಳಿ
ತಂದೆ – ಶ್ರೀ ಮಧ್ಯಗೇಹ ಭಟ್ಟರು
ಕಾಲ : ಕ್ರಿ ಶ 1238 – 1317
” ಉಪದೇಶ ಗುರುಗಳು “
ಜಗನ್ನಾಥನೂ – ಜಗದೊಡೆಯನೂ – ಸರ್ವತಂತ್ರ ಸ್ವತಂತ್ರನೂ – ಅಖಿಲಾಂಡ ಕೋಟಿ ಬ್ರಹ್ಮಾಂಡನಾಯಕನಾದ ಶ್ರೀಮನ್ವೇದವ್ಯಾಸದೇವರು
ಅಂಕಿತ : “ಆನಂದತೀರ್ಥ “
- ಶ್ರೀ ನರಹರಿ ತೀರ್ಥರು
ಹೆಸರು : ಶ್ರೀ ಶ್ಯಾಮಶಾಸ್ತ್ರಿಗಳು
ತಂದೆ : ಶ್ರೀ ನರಸಿಂಹ ಶಾಸ್ತ್ರಿಗಳು
ಜನ್ಮ ಸ್ಥಳ : ಗಂಜಾಂ [ ಶ್ರೀಕಾಕುಳಂ ಜಿಲ್ಲೆ – ಆಧ್ರಪ್ರದೇಶ
ಕಾಲ : ಕ್ರಿ ಶ 1324 – 1333
ಕನ್ನಡ ಪದಗಳು : ೩
- ಶ್ರೀ ಜಯತೀರ್ಥರು
ಹೆಸರು : ಶ್ರೀ ರಘುನಾಥನಾಯಕ / ಧೋ೦ಡೋಪಂಥ
ಕಾಲ : ಕ್ರಿ ಶ 1365 – 1388
ಉಪದೇಶ ಗುರುಗಳು :
ಶ್ರೀ ಹರಿ ಪ್ರಸಾದಾಂಕಿತ ” ಶ್ರೀರಾಮ / ಶ್ರೀ ಜಯರಾಮ
ಕನ್ನಡ ಪದ – 1
- , ಶ್ರೀ ವಿಬುಧೇಂದ್ರತೀರ್ಥರು
ಹೆಸರು : ಶ್ರೀ ರಘುನಾಥ ಭಟ್ಟರು
ಕಾಲ : ಕ್ರಿ ಶ 1435 – 1490
ಗುರುಗಳು : ಶ್ರೀ ರಾಮಚಂದ್ರತೀರ್ಥರು
ಅಂಕಿತ : ವಿಬುಧರಾಮ / ವಿಬುಧೇಂದ್ರರಾಮ
ಪದ – 2 & ಉಗಾಭೋಗ – 2
- ಶ್ರೀ ಶ್ರೀಪಾದರಾಜರು
ಹೆಸರು : ಶ್ರೀ ಲಕ್ಷ್ಮೀನಾರಾಯಣ
ಜನ್ಮ ಸ್ಥಳ : ಅಬ್ಬೂರು
ಕಾಲ : ಕ್ರಿ ಶ 1406 – 1504
” ಅಂಕಿತ “
ಶ್ರೀ ಪ್ರಸಾದಾಂಕಿತ ” ರಂಗವಿಠಲ “
ಕನ್ನಡದಲ್ಲಿ – :
ಪದಗಳು – 133
ಸುಳಾದಿ : 3
ದಂಡಕ – 1
ಭ್ರಮರಗೀತೆ – 1
ಉಗಾಭೋಗ – 16
ಒಟ್ಟು- 154 ಎಲ್ಲವೂ 2001 ರಲ್ಲಿ ಅಚ್ಚು ಆಗಿದೆ. ಡಾ. ವರದರಾಜ ಮೈಸೂರು ಮುದ್ರಣ ಮಾಡಿಸಿದ್ದಾರೆ.
- ಶ್ರೀ ವ್ಯಾಸರಾಜ ಗುರುಸಾರ್ವಭೌಮರು
ಹೆಸರು : ಶ್ರೀ ಯತಿರಾಜ
ಜನ್ಮ ಸ್ಥಳ : ಬನ್ನೂರು
ಕಾಲ : 1447 – 1539
ಪದ : 250
ಉಗಾಭೋಗ : 15
ಸುಳಾದಿ – 13
ಒಟ್ಟು – 278 ಎಲ್ಲವೂ ಮೈಸೂರುನಿಂದ ಮುದ್ರಿತ ಆಗಿದೆ.
- ಶ್ರೀ ವಾದಿರಾಜ ಗುರುಸಾರ್ವಭೌಮರು
ಹೆಸರು : ಶ್ರೀ ಭೂವರಾಹ
ಜನ್ಮ ಸ್ಥಳ : ಹೂವಿನಕೆರೆ
ಕಾಲ : 1480 – 1600
ಪದ : 329
ಉಗಾಭೋಗ : 25
ಸುಳಾದಿ – 13
ಒಟ್ಟು 367 ಎಲ್ಲವೂ ಅಚ್ಚು ಆಗಿವೆ.
- ಶ್ರೀ ವಿಜಯೀ೦ದ್ರತೀರ್ಥರು
ಹೆಸರು : ಶ್ರೀ ವಿಠ್ಠಲಾಚಾರ್ಯರು
ಕಾಲ : 1517 – 1614
ಅಂಕಿತ :
ಶ್ರೀ ಹರಿ ಪ್ರಸಾದಾಂಕಿತ ” ವಿಜಯೀ೦ದ್ರರಾಮ “
ಪದ : 4
ಸುಳಾದಿ – 3 - ಶ್ರೀ ಗೋವಿಂದ ಒಡೆಯರು
ಕಾಲ : ಕ್ರಿ ಶ 1450 – 1535
ಉಪದೇಶ ಗುರುಗಳು : ಶ್ರೀ ವ್ಯಾಸರಾಜ ಗುರುಗಳು
ಅಂಕಿತ : ಗುರುಕೃಷ್ಣ
ಪದ – 1 - ಶ್ರೀ ಪುರಂದರದಾಸರು
ಹೆಸರು : ಶ್ರೀನಿವಾಸ ನಾಯಕ
ಜನ್ಮ ಸ್ಥಳ : ಪುರಂದರಗಡ
ಕಾಲ : ಕ್ರಿ ಶ 1484 – 1564
ಉಪದೇಶ ಗುರುಗಳು : ಶ್ರೀ ವ್ಯಾಸರಾಜ ಗುರುಸಾರ್ವಭೌಮರು
ಅಂಕಿತ : ಪುರಂದರವಿಠ್ಠಲರು
ಒಟ್ಟು : 475000
ಪದ – 1656
ಸುಳಾದಿ – 60
ಉಗಾಭೋಗ – 450
ಈವರೆಗೂ ಶ್ರೀ ಪುರಂದರ ದಾಸರ ಪದಗಳು 2166 ಸಿಕ್ಕಿದೆ ಎಲ್ಲವೂ 1958 ರಲ್ಲಿ ಮುದ್ರಿತ ಆಗಿದೆ.
- ಸಾಧ್ವೀ ಸರಸ್ವತೀ ಬಾಯಿ
ಇವರು ಶ್ರೀ ಪುರಂದರದಾಸರ ಪತ್ನಿ
ಕಾಲ : ಕ್ರಿ ಶ 1495 – 1555
ಉಪದೇಶ ಗುರುಗಳು : ಶ್ರೀ ಪುರಂದರದಾಸರು
ಅಂಕಿತ : ನಿಜ ಪುರಂದರವಿಠ್ಠಲ
ಪದ – 10
ಉಗಾಭೋಗ – 5 - ಶ್ರೀ ವರದಪ್ಪ [ ವೆಂಕಟೇಶ ] / ಶ್ರೀ ಪರಶು ಭಾಗವತ
ತಂದೆ : ಶ್ರೀ ಪುರಂದರದಾಸರು
ಜನ್ಮ ಸ್ಥಳ : ಪುರಂದರಗಡ
ಕಾಲ : ಕ್ರಿ ಶ 1501 – 1575
ಕಾರ್ಯ ಕ್ಷೇತ್ರ : ಹಂಪಿ
ಉಪದೇಶ ಗುರುಗಳು : ಶ್ರೀ ಪುರಂದರ ವಿಠ್ಠಲ
ಅಂಕಿತ : ವರದ ಪುರಂದರವಿಠ್ಠಲ
ಪದ – 22
ಉಗಾಭೋಗ – 10
ಸುಳಾದಿ – 5 - ಶ್ರೀ ಗುರುರಾಯನಾಯಕ
[ ಶ್ರೀ ಅಪ್ಪಣ್ಣ ಭಾಗವತ ]
ತಂದೆ : ಶ್ರೀ ಪುರಂದರದಾಸರು
ಜನ್ಮ ಸ್ಥಳ : ಪುರಂದರಗಡ
ಕಾಲ : ಕ್ರಿ ಶ 1503 – 1573
ಕಾರ್ಯ ಕ್ಷೇತ್ರ : ಹಂಪಿ
ಉಪದೇಶ ಗುರುಗಳು : ಶ್ರೀ ಪುರಂದರವಿಠ್ಠಲ
ಅಂಕಿತ : ಗುರು ಪುರಂದರವಿಠ್ಠಲ
ಪದ – 32
ಸುಳಾದಿ – 17
ಉಗಾಭೋಗ – 12 - ಶ್ರೀ ಅಭಿನವ ನಾಯಕ
ತಂದೆ ಶ್ರೀ ಪುರಂದರದಾಸರು
ಜನ್ಮ ಸ್ಥಳ : ಪುರಂದರಗಡ
ಕಾಲ : ಕ್ರಿ ಶ 1505 – 1580
ಕಾರ್ಯ ಕ್ಷೇತ್ರ : ಹಂಪಿ
ಉಪದೇಶ ಗುರುಗಳು : ಶ್ರೀ ಪುರಂದರವಿಠ್ಠಲ
ಅಂಕಿತ : ಅಭಿನವ ಪುರಂದರವಿಠ್ಠಲ
ಪದ – 4
ಸುಳಾದಿ – 1
ಉಗಾಭೋಗ – 1 - ಶ್ರೀ ಮಧ್ವಪತಿ ನಾಯಕ
ತಂದೆ : ಶ್ರೀ ಪುರಂದರದಾಸರು
ಜನ್ಮ ಸ್ಥಳ : ಪುರಂದರಗಡ
ಕಾಲ : ಕ್ರಿ ಶ 1510 – 1592
ಕಾರ್ಯ ಕ್ಷೇತ್ರ : ಹಂಪಿ
ಉಪದೇಶ ಗುರುಗಳು : ಶ್ರೀ ಪುರಂದರವಿಠ್ಠಲ
ಅಂಕಿತ : ಗುರು ಮಧ್ವಪತಿ ವಿಠ್ಠಲ
ಪದ – 10
ಸುಳಾದಿ – 7
ಉಗಾಭೋಗ – 12 - ಸಾಧ್ವೀ ರುಕ್ಮಿಣೀಬಾಯಿ
ತಂದೆ : ಶ್ರೀ ಪುರಂದರದಾಸರು
ಕಾಲ : ಕ್ರಿ ಶ 1508 – 1588
ಪಡದೇಶ ಗುರುಗಳು : ಶ್ರೀ ಪುರಂದರದಾಸರು
ಅಂಕಿತ : ತಂದೆ ಪುರಂದರ ವಿಠ್ಠಲ
ಪದ – 5 - ಶ್ರೀ ಕನಕದಾಸರು
ಹೆಸರು : ಶ್ರೀ ತಿಮ್ಮಪ್ಪ
ಜನ್ಮ ಸ್ಥಳ : ಬಾಡ
ಕಾಲ : ಕ್ರಿ ಶ 1508 – 1608
ಉಪದೇಶ ಗುರುಗಳು : ಶ್ರೀ ವ್ಯಾಸರಾಜ ಗುರುಸಾರ್ವಭೌಮರು
ಅಂಕಿತ : ಆದಿಕೇಶವ / ಬಾಡದಾದಿಕೇಶವ
ಕನ್ನಡ ಗ್ರಂಥಗಳು – 6
ಪದ – 532
ಸುಳಾದಿ – 1
ಉಗಾಭೋಗ – 20
ದಂಡಕಗಳು – 7
ಮುಂಡಿಗೆಗಳು – 25 - ಶ್ರೀ ಚೆನ್ನ ಕೇಶವ
ತಂದೆ : ಶ್ರೀ ಕನಕದಾಸರು
ಕಾಲ : ಕ್ರಿ ಶ 1530 – 1620
ಉಪದೇಶ ಗುರುಗಳು : ಶ್ರೀ ಕನಕದಾಸರು
ಅಂಕಿತ : ಚನ್ನಕೇಶವ
ಪದ – 2
ಸುಳಾದಿ – 2
ಉಗಾಭೋಗ – 2 - ಶ್ರೀ ವರದ ಕೇಶವ
ತಂದೆ : ಶ್ರೀ ನಕದಾಸರು
ಕಾಲ : ಕ್ರಿ ಶ 1535 – 1625
ಉಪದೇಶ ಗುರುಗಳು : ಶ್ರೀ ಕನಕದಾಸರು
ಅಂಕಿತ : ಗುರು ವರದ ಕೇಶವ
ಸುಳಾದಿ – ೨
ಉಗಾಭೋಗ – ೨ - ಶ್ರೀ ಬೇಲಾಪುರ ವೈಕುಂಠದಾಸರು
ಜನ್ಮ ಸ್ಥಳ : ಬೇಲಾಪುರ
ಕ್ರಿ ಶ : 1480 – 1550
ಅಂಕಿತ : ಶ್ರೀ ಹರಿ ಪ್ರಸಾದಾಂಕಿತ ” ವೈಕುಂಠ ವಿಠ್ಠಲ
ಪದ – 14
ಸುಳಾದಿ – 3 - ಶ್ರೀ ನವಸಾಲ್ಪುರಿ ತಿಮ್ಮಣ್ಣಾಚಾರ್ಯರು
ಜನ್ಮ ಸ್ಥಳ : ಕದಿರಿ
ಕಾಲ : ಕ್ರಿ ಶ 1415 – 1500
ಉಪದೇಶ ಗುರುಗಳು :
ಸಾಕ್ಷಾತ್ಶ್ರೀ ಶ್ರೀ ಹಂಸನಾಮಕ ಪರಮಾತ್ಮನಿಂದ ಅವಿಚ್ಛಿನ್ನವಾಗಿ ನಡೆದು ಬಂದ ಜಗದ್ಗುರು ಶ್ರೀಮನ್ಮಧ್ವಾಚಾರ್ಯರ ಮೂಲ ಮಹಾ ಸಂಸ್ಥಾನಾಧೀಶ್ವರರೂ ಹಾಗೂ ಶ್ರೀ ರಾಯರ ಮಠದ ಪೂರ್ವೀಕ ಗುರುಗಳಾದ ಶ್ರೀ ವಿಬುಧೇಂದ್ರ ತೀರ್ಥರು .
ಅಂಕಿತ : ಖಾದ್ರಿ ನರಸಿಂಹ
ಪದ – 150
ಸುಳಾದಿ – 15
ಹನುಮದ್ವಿಲಾಸ, ಸುಧಾಮ ಚರಿತ್ರೆ ಹಾಗೂ ಕಾಳಿಂಗಮರ್ದನ ದೀರ್ಘ ಕೃತಿಗಳು - ಶ್ರೀ ಸಿಕಾರಪುರ ನಾರಾಯಣಪ ಕೋಳಿವಾಡ
ಜನ್ಮ ಸ್ಥಳ : ಕೋಳಿವಾಡ
ಕಾಲ : ಕ್ರಿ ಶ 1380 – 1446
ಅಂಕಿತ : ಶ್ರೀ ಹರಿ ಪ್ರಸಾದಾಂಕಿತ : ಗದುಗಿನ ವೀರ ನಾರಾಯಣ [ ಕುಮಾರವ್ಯಾಸ ]
ಗ್ರಂಥ : ಕರ್ನಾಟಕ ಭಾರತ ಕಥಾಮಂಜರೀ - ಶ್ರೀ ರಾಘವೇಂದ್ರತೀರ್ಥರು
ಜನ್ಮ ಸ್ಥಳ : ಕುಮಾರಪಟ್ಟಣಂ
ಕಾಲ : ಕ್ರಿ ಶ 1595 – 1671
ಅಂಕಿತ : ಶ್ರೀ ಹರಿ ಪ್ರಸಾದಾಂಕಿತ – ” ವೇಣುಗೋಪಾಲ
ಪದ – 1
ಸುಳಾದಿ – 1 - ಶ್ರೀ ಯೋಗೀ೦ದ್ರತೀರ್ಥರು
ಕಾಲ : ಕ್ರಿ ಶ 1671 – 1688
ಉಪದೇಶ ಗುರುಗಳು : ಶ್ರೀ ರಾಘವೇಂದ್ರತೀರ್ಥರು
ಅಂಕಿತ : ಶ್ರೀ ರಾಮ / ಶ್ರೀ ಮೂಲರಾಮ
ಪದ – 2 - ಶ್ರೀ ವಾದೀಂದ್ರ ತೀರ್ಥರು
ಕಾಲ : ಕ್ರಿ ಶ 1728 – 1750
ಅಂಕಿತ : ಶ್ರೀ ಹರಿ ಪ್ರಸಾದಾಂಕಿತ ” ವಾದೀಂದ್ರರಾಮ “
ಪದ – 2 - ಶ್ರೀ ವರದೇಂದ್ರತೀರ್ಥರು
ಕಾಲ : ಕ್ರಿ ಶ 1762 – 1785
ಅಂಕಿತ : ಶ್ರೀ ಹರಿ ಪ್ರಸಾದಾಂಕಿತ ” ವರದೇಂದ್ರಯತಿ “
ಪದ – 1 - ಶ್ರೀ ವೇದವೇದ್ಯತೀರ್ಥರು
ಕಾಲ : ಕ್ರಿ ಶ 1530 – 1616
ಉಪದೇಶ ಗುರುಗಳು : ಶ್ರೀ ವಾದಿರಾಜ ತೀರ್ಥರು
ಅಂಕಿತ : ಇಮ್ಮಡಿ ವಾದಿರಾಜ
ಪದ – 31 - ಶ್ರೀ ವೇದನಿಧಿತೀರ್ಥರು
ಕಾಲ : ಕ್ರಿ ಶ
ಉಪದೇಶ ಗುರುಗಳು : ಶ್ರೀ ವಾದಿರಾಜ ತೀರ್ಥರು
ಅಂಕಿತ : ಶ್ರೀಕೃಷ್ಣ
ಪದ – 1 - ಶ್ರೀ ವಾದಿವಂದ್ಯ ತೀರ್ಥರು
ಕಾಲ : ಕ್ರಿ ಶ 1666 – 1706
ಉಪದೇಶ ಗುರುಗಳು : ವೇದನಿಧಿತೀರ್ಥರು
ಅಂಕಿತ : ವಾದಿವಂದ್ಯ
ಪದ – 1 - ಶ್ರೀ ಮಹಿಪತಿದಾಸರು
ಜನ್ಮ ಸ್ಥಳ : ಕಾಖಂಡಕಿ
ಕಾಲ :ಕ್ರಿ ಶ 1611 – 1681
ಅಂಕಿತ : ಶ್ರೀ ಮಹಿಪತಿ / ಮಹಿಪತಿವಿಠ್ಠಲ
ಪದ – 150 ಕ್ಕೂ ಅಧಿಕ
ಮುಂಡಿಗಿ – 5 - ಶ್ರೀ ದಾಸಪ್ಪದಾಸರು
ಜನ್ಮಸ್ಥಳ : ಚೀಕಲಪರವಿ
ಕಾಲ : 1682 – 1755
ಅಂಕಿತ : ಶ್ರೀ ಪುರಂದರದಾಸರ ಸ್ವಪ್ನಾಂಕಿತ ” ವಿಜಯವಿಠ್ಠಲ “
ಪದ – ಪದ್ಯ – ಸುಳಾದಿ – ಉಗಾಭೋಗ ಎಲ್ಲಾ ಸೇರಿ ಒಟ್ಟು : 25000 - ಶ್ರೀ ವೇದವೇದ್ಯಾತೀರ್ಥರು – ಸೋದೆ ಶ್ರೀ ವಾದಿರಾಜ ಮಠ
ಕಾಲ : 1530 – 1616
ಉಪದೇಶ ಗುರುಗಳು : ಶ್ರೀ ವಾದಿರಾಜರು
ಅಂಕಿತ : ಇಮ್ಮಡಿ ವಾದಿರಾಜ
ಪದ – 30 - ಶ್ರೀ ವೇದನಿಧಿತೀರ್ಥರು .- ಸೋದೆ ಶ್ರೀ ವಾದಿರಾಜ ಮಠ
ಕಾಲ :
ಉಪದೇಶ ಗುರುಗಳು : ಶ್ರೀ ವಾದರಾಜರು
ಅಂಕಿತ : ಶ್ರೀ ಕೃಷ್ಣ
ಪದ – 1 - ಶ್ರೀ ವಾದಿವಂದ್ಯತೀರ್ಥರು
ಕಾಲ : ಕ್ರಿ ಶ 1666 – 1706
ಉಪದೇಶ ಗುರುಗಳು : ಶ್ರೀ ವೇದವೇದ್ಯಾತೀರ್ಥರು
ಅಂಕಿತ : ಶ್ರೀ ವಾದಿವಂದ್ಯ - ಶ್ರೀ ರಘುನಾಥ ತೀರ್ಥರು [ ಶ್ರೀ ಶೇಷಚಂದ್ರಿಕಾಚಾರ್ಯರು ] ಶ್ರೀ ವ್ಯಾಸರಾಜ ಮಠ
ಕಾಲ : ಕ್ರಿ ಶ 1700 – 1755
ಅಂಕಿತ : ಶ್ರೀ ಹರಿಪ್ರಸಾದಾಂಕಿತ ” ರಘುನಾಥಯತಿ / ರಘುನಾಥ ಕೃಷ್ಣ
ಪದ : 1
36. ಶ್ರೀ ಲಕ್ಷ್ಮೀಕಾಂತ ತೀರ್ಥರು – ಶ್ರೀ ವ್ಯಾಸರಾಜ ಮಠ
ಕಾಲ : ಕ್ರಿ ಶ 1584 – 1594
ಅಂಕಿತ : ಶ್ರೀಕಾಂತ
ಪದ – 5
.
- ಶ್ರೀ ವ್ಯಾಸತತ್ತ್ವಜ್ಞತೀರ್ಥರು
ಕಾಲ :
ಉಪದೇಶ ಗುರುಗಳು : ಶ್ರೀ ಮುಖ್ಯಪ್ರಾಣದೇವರು
ಅಂಕಿತ : ವಾಸುದೇವ ವಿಠ್ಠಲ
ಪದ –
ಸುಳಾದಿ –
ಉಗಾಭೋಗ : - ಶ್ರೀ ವಿದ್ಯಾರತ್ನಾಕರತೀರ್ಥರು – ಶ್ರೀ ವ್ಯಾಸರಾಜ ಮಠ
ಕಾಲ : ಕ್ರಿ ಶ 1906 – 1915
ಅಂಕಿತ : ಶ್ರೀ ಹರಿ ಪ್ರಸಾದಾಂಕಿತ ” ನಾಮಗಿರೀಶ “
ಪದ – - ಶ್ರೀ ವಿಶ್ವೇಂದ್ರ ತೀರ್ಥರು – ಸೋದೆ ಶ್ರೀ ವಾದಿರಾಜ ಮಠ
ಕಾಲ : ಕ್ರಿ ಶ 1881 – 1943
ಅಂಕಿತ : ರಾಜೇಶ ಹಯಮುಖ
ಪದ – - ಶ್ರೀ ಪ್ರದ್ಯುಮ್ನತೀರ್ಥರು – ಶ್ರೀ ಸಾಗರಕಟ್ಟೆ ಮಠ – ಮೈಸೂರು.
ಕಾಲ : ಕ್ರಿ ಶ 1890 – 1975
ಅಂಕಿತ : ನರಹರಿ
ಪದ – - ಶ್ರೀ ಸುಯಮೀ೦ದ್ರತೀರ್ಥರು
ಕಾಲ : ಕ್ರಿ ಶ
ಅಂಕಿತ : ಶ್ರೀ ರಾಘವೇಂದ್ರತೀರ್ಥ ಸ್ವಪ್ನಾಂಕಿತ ” ಶ್ರೀನಿವಾಸ “
ಪದ – 2 [ ಶ್ರೀ ರಾಘವೇಂದ್ರ ಸ್ತುತಿ ಮತ್ತು ಶ್ರೀ ಶ್ರೀನಿವಾಸ ಸ್ತುತಿ ] - ಶ್ರೀ ವಿದ್ಯಾಪ್ರಸನ್ನ ತೀರ್ಥರು
ಕಾಲ : ಕ್ರಿ ಶ 1940 – 1969
ಅಂಕಿತ : ಪ್ರಸನ್ನ
ಪದ : –
ಲಾವಣಿ –
ಸಂಸ್ಕೃತ ಪದ – - ಶ್ರೀ ವಿದ್ಯಾ ಪಯೋನಿಧಿ ತೀರ್ಥರು
ಕಾಲ : ಕ್ರಿ ಶ 1969 – 1997
ಅಂಕಿತ : ಪಯೋನಿಧಿ
ಪದ – 5 - ಶ್ರೀ ವಿದ್ಯಾ ವಾಚಸ್ಪತಿ ತೀರ್ಥರು
ಕಾಲ : ಕ್ರಿ ಶ 1997 – 2007
ಅಂಕಿತ : ಶ್ರೀ ಕೃಷ್ಣಾ
ಪದ – 2 - ಕಾಖಂಡಕಿ ಶ್ರೀ ಕೃಷ್ಣರಾಯರು
ಕಾಲ : 1641 – 1729
ಉಪದೇಶ ಗುರುಗಳು : ಶ್ರೀ ಮಹಿಪತಿದಾಸರು
ಅಂಕಿತ : ತಂದೆ ಮಹಿಪತಿ / ಗುರು ಮಹಿಪತಿ
ಪದ – ಪದ್ಯ – ಮುಂಡಿಗೆ ಸೇರಿ ಒಟ್ಟು –
46. ಶ್ರೀ ವೆಂಕಣ್ಣ
ಕಾಲ : ಕ್ರಿ ಶ 1680 – 1755
ಉಪದೇಶ ಗುರುಗಳು : ತಿರುಮಲೆಯ ಚೆಲುವ ಶ್ರೀ ಶ್ರೀನಿವಾಸದೇವರು
ಅಂಕಿತ : ಪ್ರಸನ್ವೆಂಕಟ
ಪದ – ಪದ್ಯ –
- ಶ್ರೀ ಭಾಗಣ್ಣದಾಸರು
ಕಾಲ : ಕ್ರಿ ಶ 1722 – 1762
ಉಪದೇಶ ಗುರುಗಳು : ಶ್ರೀ ವಿಜಯದಾಸರು
ಅಂಕಿತ : ಗೋಪಾಲವಿಠ್ಠಲ [ ಪೂರ್ವದಲ್ಲಿ – ವೆಂಕಟಕೃಷ್ಣ ]
ಪದ – ಪದ್ಯ – ಸುಳಾದಿ – ವೃತ್ತನಾಮ ಸೇರಿ ಒಟ್ಟು – 332 - ಶ್ರೀ ಮೋಹನ
ಕಾಲ : ಕ್ರಿ ಶ
ಉಪದೇಶ ಗುರುಗಳು ” ಶ್ರೀ ವಿಜಯದಾಸರು
ಅಂಕಿತ : ಮೋಹನವಿಠ್ಠಲ
ಪದ – ಪದ್ಯ – ಸುಳಾದಿ ಸೇರಿ ಒಟ್ಟು – - ಶ್ರೀ ಪಂಗನಾಮದ ತಿಮ್ಮಣ್ಣದಾಸರು
ಕಾಲ : ಕ್ರಿ ಶ
ಉಪದೇಶ ಗುರುಗಳು : ಶ್ರೀ ವಿಜಯದಾಸರು
ಅಂಕಿತ : ವೇಣುಗೋಪಾಲವಿಠ್ಠಲ
ಪದ – ಪದ್ಯ – ಸುಳಾದಿ ಒಟ್ಟು ಸೇರಿ –
50.ಶ್ರೀ ಬೇಲೂರು ಶ್ರೀ ವೆಂಕಟೇಶ ದಾಸರು
ಕಾಲ : ಕ್ರಿ ಶ
ಉಪದೇಶ ಗುರುಗಳು : ಶ್ರೀ ವಿಜಯವಿಠ್ಠಲ
ಅಂಕಿತ : ವೆಂಕಟಾವಿಠ್ಠಲ
ಪದ –
- ಶ್ರೀ ಹೊನ್ನಾಳಿ ವೆಂಕಪ್ಪಾಚಾರ್ಯರು
ಕಾಲ : ಕ್ರಿ ಶ
ಉಪದೇಶ ಗುರುಗಳು : ಶ್ರೀ ವಿಜಯದಾಸರು
ಅಂಕಿತ : ವೆಂಕಟಾವಿಠ್ಠಲ
ಪದ –
52.ಶ್ರೀ ಮೀನಪ್ಪದಾಸರು
ಕಾಲ :ಕ್ರಿ ಶ
ಉಪದೇಶ ಗುರುಗಳು : ಶ್ರೀ ವಿಜಯದಾಸರು
ಅಂಕಿತ : ಮುದ್ದುವಿಠ್ಠಲ
ಪದ –
- ಶ್ರೀ ಕೂಡ್ಲಿ ಮಧ್ವಾಚಾರ್ಯರು
ಕಾಲ : ಕ್ರಿ ಶ
ಉಪದೇಶ ಗುರುಗಳು : ವಿಜಯವಿಠ್ಠಲ
ಅಂಕಿತ : ಗುರು ಮಧ್ವೇಶ ವಿಠ್ಠಲ
ಪದ – 26 - ಶ್ರೀ ಶೇಷಗಿರಿದಾಸರು
ಕಾಲ : ಕ್ರಿ ಶ
ಉಪದೇಶ ಗುರುಗಳು : ಶ್ರೀ ವಿಜಯದಾಸರು
ಅಂಕಿತ : ಶ್ರೀ ಹಯಗ್ರೀವ ವಿಠ್ಠಲ
ಪದ – 1
” ಹರಿದಾಸ ಮಾರ್ಗದರ್ಶಿ – 2 “
- ಶ್ರೀ ಸುಬ್ಬಣ್ಣಾಚಾರ್ಯರು
ಕಾಲ : ಕ್ರಿ ಶ 1800 – 1875
ಉಪದೇಶ ಗುರುಗಳು : ಶ್ರೀ ಜಗನ್ನಾಥದಾಸರು
ಅಂಕಿತ : ಶ್ರೀ ಗೋಪತಿವಿಠ್ಠಲ
ಪದ : 5 - ಶ್ರೀ ಶೀನಪ್ಪ ದಾಸರು
ಕಾಲ : ಕ್ರಿ ಶ 1724 – 1800
ಜನ್ಮಸ್ಥಳ : ಮೊಸರಕಲ್ಲು
ಉಪದೇಶ ಗುರುಗಳು : ಶ್ರೀ ಗೋಪಾಲದಾಸರು
ಅಂಕಿತ : – ಶ್ರೀ ಗುರುಗೋಪಾಲವಿಠ್ಠಲ
ಪದ – 75
ಸುಳಾದಿ : 5
ಉಗಾಭೋಗ :30 - ಶ್ರೀ ದಾಸಪ್ಪದಾಸರು
ಕಾಲ : ಕ್ರಿ ಶ 1726 – 1795
ಜನ್ಮಸ್ಥಳ : ಮೊಸರಕಲ್ಲು
ಉಪದೇಶ ಗುರುಗಳು : ಶ್ರೀ ಗೋಪಾಲವಿಠ್ಠಲ
ಅಂಕಿತ : ಶ್ರೀ ವರದ ಗೋಪಾಲವಿಠ್ಠಲ –
ಪದ – 138
ಸುಳಾದಿ – 30
ಉಗಾಭೋಗ : 25
4 ಶ್ರೀ ಶ್ರೀನಿವಾಸಾಚಾರ್ಯರು
ಕಾಲ : ಕ್ರಿ ಶ 1728 – 1809
ಜನ್ಮಸ್ಥಳ : ಬ್ಯಾಗವಾಟ
ಅಂಕಿತ : ಶ್ರೀ ಹರಿಪ್ರಸಾದಾಂಕಿತ ” ಜಗನ್ನಾಥವಿಠ್ಠಲ “
ಪದ -225
ಸುಳಾದಿ :15
ಉಗಾಭೋಗ : ೧೦
- ಶ್ರೀ ಯೋಗೀ೦ದ್ರರಾಯರು –
ಕಾಲ : ಕ್ರಿ ಶ 1736 – 1822
ಜನ್ಮಸ್ಥಳ : ಲಿಂಗಸೂಗೂರು
ಉಪದೇಶ ಗುರುಗಳು : ಶ್ರೀ ಜಗನ್ನಾಥದಾಸರು
ಅಂಕಿಂತ : ಶ್ರೀ ಪ್ರಾಣೇಶ ವಿಠ್ಠಲ
ಪದ : 270
ಸುಳಾದಿ : 3
ಉಗಾಭೋಗ : 8 - ಶ್ರೀ ಕರ್ಜಗಿ ದಾಸಪ್ಪನವರು
ಕಾಲ : ಕ್ರಿ ಶ 1740 – 1820
ಜನ್ಮ ಸ್ಥಳ : ಕರ್ಜಗಿ
ಉಅದೇಶ ಗುರುಗಳು : ಶ್ರೀ ಜಗನ್ನಾಥದಾಸರು
ಅಂಕಿತ : ಶ್ರೀ ಶ್ರೀದ ವಿಠ್ಠಲ
ಪದ – 114
ಸುಳಾದಿ – 2
ಹರಿಕಥಾಮೃತಸಾರ ಫಲ ಶ್ರುತಿ - ಶ್ರೀಶ್ರೀ ರಂಗಪ್ಪದಾಸರು
ಕಾಲ : ಕ್ರಿ ಶ 1730 – 1820
ಜನ್ಮ ಸ್ಥಳ : ಮೊಸರುಕಲ್ಲು
ಉಪದೇಶ ಗುರುಗಳು : ಶ್ರೀ ಗೋಪಾಲವಿಠ್ಠಲ
ಅಂಕಿತ : ಶ್ರೀ ತಂದೆ ಗೋಪಾಲವಿಠ್ಠಲ
ಪದ : 25
ಸುಳಾದಿ : 4
ಶ್ರೀ ಗೋಪಾಲದಾಸರ ಚರಿತ್ರೆಯ ದೀರ್ಘ ಕೃತಿ - ಶ್ರೀ ಕಲ್ಲೂರು ಸುಬ್ಬಣ್ಣಾಚಾರ್ಯರು
ಕಾಲ : ಕ್ರಿ ಶ :
ಜನ್ಮ ಸ್ಥಳ : ಕಲ್ಲೂರು
ಉಪದೇಶ ಗುರುಗಳು :
ಶ್ರೀ ವೇಣುಗೋಪಾಲದಾಸರು [ ಪಂಗನಾಮದ ತಿಮ್ಮಣ್ಣದಾಸರು ]
ಅಂಕಿತ : ಶ್ರೀ ವ್ಯಾಸವಿಠ್ಠಲ
ಪದ –
ಸುಳಾದಿ – - ಶ್ರೀ ಹುಂಡೇಕಾರ ದಾಸಪ್ಪ ದಾಸರು
ಕ್ರಿ ಶ : 1735 – 1800
ಜನ್ಮ ಸ್ಥಳ : ಹುಕ್ಕೇರಿ
ಉಪದೇಶ ಗುರುಗಳು : ಶ್ರೀ ಜಗನ್ನಾಥದಾಸರು
ಅಂಕಿತ : ಶ್ರೀ ಶ್ರೀಶವಿಠ್ಠಲ
ಪದ – 21
ಸುಳಾದಿ – 2 - ಶ್ರೀ ಬೂದಿನ್ನಿ ನಾರಾಯಣಪ್ಪ
ಕಾಲ : ಕ್ರಿ ಶ 1682 – 1769
ಜನ್ಮ ಸ್ಥಳ : ಬೂದಿನ್ನಿ
ಉಪದೇಶ ಗುರುಗಳು : ಶ್ರೀ ಜಗನ್ನಾಥದಾಸರು
ಅಂಕಿತ : ಶ್ರೀ ಮನೋಹರವಿಠ್ಠಲ
ಪದ -5
ಚರಿತ್ರೆ : - ಅನಂತಕಥಾ
- ರಾಘವೇಂದ್ರ ಸ್ತೋತ್ರ [ ಕನ್ನಡ ಷಟ್ಪದಿಯಲ್ಲಿ ]
- ಶ್ರೀ ವಾಯುಸ್ತುತಿ [ ವೃತ್ತನಾಮ ]
- ಅಣು ಶ್ರೀ ರಾಘವೇಂದ್ರ ವಿಜಯ [ ೧ ಪದ್ಯ ]
- ಶ್ರೀ ದಾಮೋದರದಾಸರು
ಕಾಲ : ಕ್ರಿ ಶ 1748 – 1780
ತಂದೆ : ಶ್ರೀ ಜಗನ್ನಾಥದಾಸರು
jಜನ್ಮ ಸ್ಥಳ : ಮಾನವಿ
ಅಉಪದೇಶ ಗುರುಗಳು : ಶ್ರೀ ಜಗನ್ನಾಥದಾಸರು
ಅಂಕಿತ : ತಂದೆ ಶ್ರೀ ಜಗನ್ನಾಥವಿಠ್ಠಲ
ಪದ -1 - ಶ್ರೀ ವೈರಾಗ್ಯಶಾಲಿ ತಮ್ಮಣ್ಣದಾಸರು –
ಕಾಲ : ಕ್ರಿ ಶ 1730 – 1815
ಜನ್ಮ ಸ್ಥಳ : ಕಲ್ಲೂರು
ಉಪದೇಶ ಗುರುಗಳು : ಶ್ರೀ ವ್ಯಾಸವಿಠ್ಠಲ
ಅಂಕಿತ : ಶ್ರೀ ರಘುಪತಿ ವಿಠ್ಠಲ
ಪದ – 2
ಸುಳಾದಿ – 22
ಗ್ರಂಥ – 1 [ ಆಧ್ಯಾತ್ಮಮಾಲಾ ] - ಶ್ರೀ ತಿರುಮಲ ದಾಸರು
ಕಾಲ : ಕ್ರಿ ಶ 1715 – 1800
ಜನ್ಮ ಸ್ಥಳ : ಸೋಮಪುರ
ಉಪದೇಶ ಗುರುಗಳು : ಶ್ರೀ ಗುರುಗೋವಿಂದವಿಠ್ಠಲ
ಅಂಕಿತ : ಶ್ರೀ ಜನಾರ್ದನ ವಿಠ್ಠಲ
ಪದ : 115 - ಶ್ರೀ ಪ್ರೇಮದಾಸರು
ಕಾಲ : ಕ್ರಿ ಶ 1742 – 1822
ಜನ್ಮ ಸ್ಥಳ : ಸೋಮಪುರ
ಉಪದೇಶ ಗುರುಗಳು : ಶ್ರೀ ಜನಾರ್ದನ ವಿಠ್ಠಲ
ಅಂಕಿತ : ಶ್ರೀ ಅಭಿನವ ಜನಾರ್ದನವಿಠ್ಠಲ
ಪದ – 82
ಸುಳಾದಿ – 9
ರಾಮಾಯಣ - ಶ್ರೀ ವೆಂಕಟದಾಸರು –
ಕಾಲ : ಕ್ರಿ ಶ 1775 – 1860
ಜನ್ಮ ಸ್ಥಳ : ಲಂಗಸೂಗೂರು
ಉಪದೇಶ ಗುರುಗಳು : ಶ್ರೀ ಪ್ರಾಣೇಶದಾಸರು
ಅಂಕಿತ : ಶ್ರೀ ಗುರು ಪ್ರಾಣೇಶವಿಠ್ಠಲ
ಪದ – 18 - ಶ್ರೀ ಶ್ರೀ ರಾಮದಾಸರು –
ಕಾಲ : ಕ್ರಿ ಶ 1815 – 1892
ಜನ್ಮ ಸ್ಥಳ : ಲಿಂಗಸೂಗೂರ
ಉಪದೇಶ ಗುರುಗಳು : ಶ್ರೀ ಗುರು ಪ್ರಾಣೇಶದಾಸರು
ಅಂಕಿತ : ಶ್ರೀ ಶ್ರೀಶ ಪ್ರಾಣೇಶವಿಠ್ಠಲ
ಪದ -24 - ಶ್ರೀ ಕುಲಕರ್ಣಿ ವೆಂಕಪ್ಪನವರು
ಕಾಲ ; ಕ್ರಿ ಶ
ಜನ್ಮ ಸ್ಥಳ : ಗೋರೆಬಾಳು
ಉಪದೇಶ ಗುರುಗಳು : ಶ್ರೀ ಶ್ರೀಶ ಪ್ರಾಣೇಶ ವಿಠ್ಠಲ
ಅಂಕಿತ : ಶ್ರೀ ಗುರು ಶ್ರೀಶ ಪ್ರಾಣೇಶವಿಠ್ಠಲ
ಪದ – 51
ಸುಳಾದಿ : 1 - ಶ್ರೀ ಏರಿ ಶೇಷಾಚಾರ್ಯ
ಕಾಲ : ಕ್ರಿ ಶ
ಜನ್ಮ ಸ್ಥಳ : ಚಿಂತಾಮಣಿ
ಅಂಕಿತ : ಏರಿ ವೆಂಕಟೇಶ
ಪದ – 1 [ ಶ್ರೀ ಶ್ರೀನಿವಾಸ ಕಲ್ಯಾಣ ಪದ್ಯ ರೂಪ ] - ಶ್ರೀ ರಾಮಣ್ಣನವರು
ಕ್ರಿ ಶ :
ಜನ್ಮ ಸ್ಥಳ : ಕಲ್ಲೂರು
ಉಪದೇಶ ಗುರುಗಳು : ಶ್ರೀ ವೇಣುಗೋಪಾಲದಾಸರು
ಅಂಕಿತ : ಶ್ರೀ ರಾಮಚಂದ್ರ ವಿಠ್ಠಲ
ಪದ – 2
ಸುಳಾದಿ – 11
21 ಶ್ರೀ ಶ್ರೀ ಕುಂಟೋಜಿ ನರಸಿಂಹದಾಸರು
ಕಾಲ : 1740 – 1846
ಜನ್ಮ ಸ್ಥಳ : ಕುಂಟೋಜಿ
ಉಪದೇಶ ಗುರುಗಳು : ಶ್ರೀ ಶ್ರೀಶ ವಿಠ್ಠಲ
ಅಂಕಿತ : ಶ್ರೀ ಗುರು ಶ್ರೀಶವಿಠ್ಠಲ
ಪದ – 31
ಸುಳಾದಿ – 4
- ಶ್ರೀ ಸುರಪುರದ ಆನಂದದಾಸರು
ಕಾಲ :
ಜನ್ಮ ಸ್ಥಳ : ಚೀಕಲಪರವಿ
ಉಪದೇಶ ಗುರುಗಳು : ಶ್ರೀ ಶ್ರೀಶವಿಠ್ಠಲ
ಅಂಕಿತ : ಶ್ರೀ ಕಮಲೇಶವಿಠ್ಠಲ
ಪದ – 114
ಸುಳಾದಿ – 7
ಕಾವ್ಯ ಗ್ರಂಥ : ರಾಮಾಯಣ – ಶ್ರೀಮದ್ಭಗವದ್ಗೀತೆ – ಶ್ರೀ ಕೃಷ್ಣಕಥಾಮೃತ - ಗದ್ವಾಲಿ ದಾಸರು
ಕಾಲ : ಕ್ರಿ ಶ 1798 – 1870
ಜನ ಸ್ಥಳ : ಗದ್ವಾಲ್ – ಆಂಧ್ರಪ್ರದೇಶ
ಉಪದೇಶ ಗುರುಗಳು : ಶ್ರೀ ಭೂವರಾಹ ರಘುಪತೋ ವಿಠ್ಠಲ
ಅಂಕಿತ : ಶ್ರೀ ಶ್ರೀಪತಿವಿಠ್ಠಲ
ಪದ – 35
ಸುಳಾದಿ – 3 - ಶ್ರೀ ವೆಂಕಟೇಶದಾಸರು –
ಕಾಲ : ಕ್ರಿ ಶ 1800 – 1890
ಜನ್ಮ ಸ್ಥಳ : ಗದ್ವಾಲ್ :
ಅಪದೇಶ ಗುರುಗಳು : ಶ್ರೀ ಶ್ರೀಪತಿವಿಠ್ಠಲ
ಅಂಕಿತ : ಶ್ರೀ ತಂದೆ ಶ್ರೀಪತಿವಿಠ್ಠಲ
ಪದ – 27
ಸುಳಾದಿ – 1 - ಶ್ರೀ ಮೊದಲಕಲ್ಲು ಶೇಷದಾಸರು –
ಕಾಲ : ಕ್ರಿ ಶ 1801 – 1885
ಜನ್ಮ ಸ್ಥಳ : ದರೂರು [ ಗದ್ವಾಲ್ ಸಂಸ್ಥಾನ ]
ಉಪದೇಶ ಗುರುಗಳು : ಶ್ರೀ ವಿಜಯದಾಸರಿಂದ ಸ್ವಪ್ನಾಂಕಿತ
ಅಂಕಿತ : ಶ್ರೀ ಗುರು ವಿಜಯವಿಠ್ಠಲ
ಪದ – 24
ಸುಳಾದಿ – 5
ಉಗಾಭೋಗ – 15
ಶ್ರೀ ಗಾಯತ್ರೀಮಂತ್ರಸಾರ [ ಚಿತ್ರದೊಂದಿದೆ ವಿಶ್ಲೇಷಣೆ ] ಶ್ರೀಮದ್ಭಗವದ್ಗೀತಾ - ಶ್ರೀ ಸ್ವಾಮಿರಾಯಾಚಾರ್ಯರು
ಕಾಲ : ಕ್ರಿ ಶ 1836 – 1918
ಜನ್ಮ ಸ್ಥಳ : ಕೋಸಗಿ – ಆಂಧ್ರಪ್ರದೇಶ
ಉಪದೇಶ ಗುರುಗಳು : ಶ್ರ ಪೆತ್ತತಂದೆ ಗೋಪಾಲವಿಠ್ಠಲ
ಅಂಕಿತ : ಶ್ರೀ ಗುರು ಜಗನ್ನಾಥದಾಸರು
ಪದ – 140
ಸುಳಾದಿ : 5
ಸಂಸೃತ : 15
ಕನ್ನಡಲ್ಲಿ – ಶ್ರೀಮದ್ರಾಮಾಯಣ, ಶ್ರೀ ವೆಂಕಟೇಶ ಹಾಗೂ ಶ್ರೀ ಮಹಾಲಕ್ಷ್ಮೀ ಸ್ಥವರಾಜ, – ಶ್ರೀಮದ್ ಹರಿಕಥಾಮೃತಸಾರದ ಕೆಲವು ಸಂಧಿಗಳಿಗೆ ವ್ಯಾಖ್ಯಾನ - ಶ್ರೀ ದಾಸಾಚಾರ್ಯರು
ಕಾಲ : ಕ್ರಿ ಶ 1780 – 1865
ಜನ್ಮ ಸ್ಥಳ : ಕೆಂಭಾವಿ
ಉಪದೇಶ ಗುರುಗಳು : ಶ್ರೀ ರಘುಪತಿ ವಿಠ್ಠಲ
ಅಂಕಿತ :
ಶ್ರೀ ಶ್ರೀನಿವಾಸ ಭೂವರಾಹ ರಘುಪತಿ ವಿಠಲ - ಶ್ರೀ ಲಕ್ಷ್ಮೀಶರಾಯರು
ಕಾಲ : ಕ್ರಿ ಶ 1750 – 1832
ಜನ್ಮ ಸ್ಥಳ : ಲಿಂಗಸೂಗೂರು
ಉಪದೇಶ ಗುರುಗಳು : ಶ್ರೀ ಪ್ರಾಣೇಶ ದಾಸರು
ಅಂಕಿತ : ಶ್ರೀ ಲಕ್ಷ್ಮೀಶವಿಠ್ಠಲ
ಪದ – 1 - ಶ್ರೀ ಸ್ವಾಮಿರಾಯರು
ಕಾಲ : 1885 – 1918
ಜನ್ಮ ಸ್ಥಳ : ಸಂತಿಕೆಲ್ಲೂರ್ / ಲಿಂಗಸೂಗೂರ
ಉಪದೇಶ ಗುರುಗಳು : ಶ್ರೀ ಗುರು ಜಗನ್ನಾಥದಾಸರು
ಅಂಕಿತ : ಶ್ರೀ ವರದೇಶವಿಠ್ಠಲ –
ಪದ – 41
ಚರಿತ್ರೆ – 3
ಉಗಾಭೋಗ – 1
30 ಶ್ರೀ ವೆಂಕಟೇಶ ಹಳ್ಳಿರಾವ
ಕಾಲ : ಕ್ರಿ ಶ 1886 – 1960
ಉಪದೇಶ ಗುರುಗಳು – ಶ್ರೀ ಗುರುಜಗನ್ನಾಥ ದಾಸರು
ಅಂಕಿತ : ಶ್ರೀ ವರದೇಂದ್ರ ವಿಠ್ಠಲ
ಪದ – 5
- ಶ್ರೀ ಕರಣಂ ಹನುಮಂತರಾಯರು
ಕಾಲ :
ಜನ್ಮ ಸ್ಥಳ : ಕೌತಾಳಂ
ಉಪದೇಶ ಗುರುಗಳು : ಶ್ರೀ ಗುರು ಜಗನ್ನಾಥ ದಾಸರು
ಅಂಕಿತ : ಶ್ರೀ ವರದ ವಿಠ್ಠಲ
ಪದ – 150 ಕ್ಕೂ ಅಧಿಕ.
32 ಶ್ರೀ ರಾಮರಾವ್ ಕುಲಕರ್ಣಿ
ಕಾಲ : ಕ್ರಿ ಶ – 1869 – 1917
ಅಂಕಿತ : ಶ್ರೀ ಆನಂದವಿಠ್ಠಲ
ಪದ – 5
33.ಶ್ರೀ ಶ್ರೀ ಗೋರೆಬಾಳ ಹನುಮಂತರಾಯರು
ಕಾಲ : ಕ್ರಿ ಶ 1893 – 1969
ಜನ್ಮ ಸ್ಥಳ : ಗೋರೆಬಾಳು
ಉಪದೇಶ ಗುರುಗಳು : ಶ್ರೀ ಗುರು ಜಗನ್ನಾಥ ದಾಸರು
ಅಂಕಿತ : ಶ್ರೀ ಸುಂದರವಿಠ್ಠಲ
ಪದ – 5
ಸುಳಾದಿ – 13
ಉಗಾಭೋಗ – 1
- ಶ್ರೀ ಅಸ್ಕಿಹಾಳ ಗೋವಿಂದದಾಸರು
ಕಾಲ : ಕ್ರಿ ಶ 1856 – 1940
ಜನ್ಮ ಸ್ಥಳ : ಅಸ್ಕಿಹಾಳ
ಉಪದೇಶ ಗುರುಗಳು : ಶ್ರೀ ರಘುಪತಿವಿಠ್ಠಲ
ಅಂಕಿತ : ಶ್ರೀ ಸಿರಿ ಗೋವಿಂದವಿಠ್ಠಲ / ಶ್ರೀ ಗೋವಿಂದವಿಠ್ಠಲ
ಪದ – - ಶ್ರೀ ಗುಂಡಾಚಾರ್ಯರು
ಕಾಲ : ಕ್ರಿ ಶ 1896 – 1956
ಜನ್ಮ ಸ್ಥಳ : ಕುರುಡಿ / ಬಲ್ಲಟಗಿ
ಉಪದೇಶ ಗುರುಗಳು : ಶ್ರೀ ಜಗನ್ನಾಥದಾಸರ ಸ್ವಪ್ನಾಂಕಿತ
ಅಂಕಿತ : ಶ್ರೀ ಶ್ಯಾಮಸುಂದರ ದಾಸರು - ಶ್ರೀ ರಾಘವೇಂದ್ರದಾಸರು
ಕಾಲ :
ಜನ್ಮಸ್ಥಳ ದೊಡ್ಡಬಳ್ಳಾಪುರ
ಉಪದೇಶ ಗುರುಗಳು : ಶ್ರೀ ವರ ವಿಠ್ಠಲ
ಪದ – - ಶ್ರೀ ಪರಮಪ್ರಿಯ ಸುಬ್ಬರಾಯದಾಸರು
ಕಾಲ : ಕ್ರಿ ಶ
ಜನ್ಮ ಸ್ಥಳ :
ಉಪದೇಶ ಗುರುಗಳು : ಶ್ರೀ ಮುದ್ದು ಮೋಹನ ದಾಸರು
ಅಂಕಿತ : ಶ್ರೀ ತಂದೆ ಮುದ್ದು ಮೋಹನವಿಠ್ಠಲ
ಪದ : - ಶ್ರೀ ಚಿಕ್ಕೇರಹಳ್ಳಿ ತಮ್ಮನ್ನ ದಾಸರು
ಕಾಲ : ಕ್ರಿ ಶ
ಜನ್ಮಸ್ಥಳ : ಚಿಕ್ಕೇರಹಳ್ಳಿ
ಉಪದೇಶ ಗುರುಗಳು : ಶ್ರೀ ಮೋಹನದಾಸರು
ಅಂಕಿತ : ಶ್ರೀ ಮಧ್ವಪತಿ ವಿಠ್ಠಲ
ಪದ – 4
39.ಶ್ರೀ ಕುರಡಿ ರಾಘವೇಂದ್ರಾಚಾರ್ಯ
ಕಾಲ : ಕ್ರಿ ಶ
ಜನ್ಮ ಸ್ಥಳ : ಕುರುಡಿ
ಉಪದೇಶ ಗುರುಗಳು : ಶ್ರೀ ಪಂಚಮುಖಿ ಪ್ರಾಣದೇವರ ಪ್ರಸಾದಾಂಕಿತ
ಅಂಕಿತ : ಶ್ರೀ ಲಕುಮೀಶ
40 ಶ್ರೀ ಶ್ರೀನಿವಾಸರಾಯರು
ಕಾಲ : ಕ್ರಿ ಶ 1871 – 1964
ಜನ್ಮ ಸ್ಥಳ : ಶಿವಮೊಗ್ಗ
ಉಪದೇಶ ಗುರುಗಳು : ಶ್ರೀ ತಂದೆ ಮುದ್ದು ಮೋಹನ ದಾಸರು
ಅಂಕಿತ : ಶ್ರೀ ಉರಗಾದ್ರಿ ವಾಸ ವಿಠ್ಠಲ
- ಶ್ರೀ ಎಂ ಆರ್ ಗೋವಿಂದರಾವ್
ಕಾಲ : ಕ್ರಿ ಶ 1884 – 1983
ಜನ್ಮ ಸ್ಥಳ : ಚಿಕ್ಕಮಗಳೂರು
ಉಪದೇಶ ಗುರುಗಳು : ಶ್ರೀ ತಂದೆ ಮುದ್ದು ಮೋಹನ ದಾಸರು
ಅಂಕಿತ : ಶ್ರೀ ಗುರು ಗೋವಿಂದವಿಠ್ಠಲ - ಶ್ರೀ ಆರ್ ರಾಮಚಂದ್ರರಾವ್
ಕಾಲ : ಕ್ರಿ ಶ 1907 – 1982
ಜನ್ಮ ಸ್ಥಳ : ಚಿತ್ರದುರ್ಗ
ಉಪದೇಶ ಗುರುಗಳು : ಶ್ರೀ ಉರಗಾದ್ರಿವಾಸ ವಿಠ್ಠಲ
ಅಂಕಿತ : ಶ್ರೀ ತಂದೆ ವೆಂಕಟೇಶ ವಿಠ್ಠಲ – - ಶ್ರೀ ಚಿಪ್ಪಗಿರಿ ವೆಂಕಟದಾಸರು
ಕ್ರಿ ಶ :
ತಂದೆ : ಶ್ರೀ ಮೋಹನದಾಸರು
ಜನ್ಮ ಸ್ಥಳ : ಚಿಪ್ಪಗಿರಿ
ಉಪದೇಶ ಗುರುಗಳು : ಶ್ರೀ ಗುರು ಮಧ್ವಪತಿ ವಿಠ್ಠಲ
ಪದ – 1 - ಶ್ರೀ ಶ್ರೀ ನಾಡೀಗ ತಿಮ್ಮಪ್ಪದಾಸರು
ಕಾಲ : ಕ್ರಿ ಶ 1745 – 1822
ಜನ್ಮ ಸ್ಥಳ : ಮಾನವಿ
ಉಪದೇಶ ಗುರುಗಳು : ಶ್ರೀ ಜಗನ್ನಾಥದಾಸರು
ಅಂಕಿತ : ಶ್ರೀ ಜ್ಞಾನಮಯ ವಿಠ್ಠಲ
ಪದ – 1 - ಶ್ರೀ ರಾಘಪ್ಪದಾಸರು
ಕಾಲ : ಕ್ರಿ ಶ 1820 – 1906
ಜನ್ಮ ಸ್ಥಳ : ಲಿಂಗಸೂಗೂರ
ಉಪದೇಶ ಗುರುಗಳು : ಶ್ರೀ ಗುರು ಪ್ರಾಣೇಶವಿಠ್ಠಲ
ಅಂಕಿತ : ಶ್ರೀ ಮೋದ ವಿಠ್ಠಲ
ಪದ – 14 - ಶ್ರೀ ರಾಘವಾರ್ಯ ಒಡೆಯರು
ಕಾಲ : ಕ್ರಿ ಶ 1829 – 1904
ಜನ್ಮ ಸ್ಥಳ : ಕುಷ್ಟಗಿ
ಉಪದೇಶ ಗುರುಗಳು : ಕೊಪ್ಪ ಶ್ರೀ ಪ್ರಾಣದೇವರ ವರ ಪ್ರಸಾದಾಂಕಿತ
ಅಂಕಿತ : ಶ್ರೀ ನಡುಪುರೇಶ
ಪದ – 16 - ಶ್ರೀ ಜಯವೆಂಕಟಾಚಾರ್ಯರು
ಕಾಲ : ಕ್ರಿ ಶ 1846 – 1926
ಜನ್ಮ ಸ್ಥಳ : ಕನಕಗಿರಿ
ಉಪದೇಶ ಗುರುಗಳು :
ನವಲಿ ಶ್ರೀ ಕನಕಗಿರಿ ಮುಖ್ಯಪ್ರಾದೇವರ ವರ ಪ್ರಸಾದಂಕಿತ
ಅಂಕಿತ : ಶ್ರೀ ಜಯ ವೆಂಕಟೇಶ
ಪದ – 1 [ ನವಲಿ ಶ್ರೀ ಭೋಗಾಪುರೇಶ ಮುಖ್ಯ ಪ್ರಾಣದೇವರ ಕರಾವಲಂಬನ ಸ್ತೋತ್ರ ] - ಶ್ರೀ ಸಿಂಗಪ್ಪಪಟವಾರಿ ದಾಸರು
ಕಾಲ : ಕ್ರಿ ಶ 1850 – 1910
ಜನ್ಮ ಸ್ಥಳ : ಗೋರ್ಕಲ್ಲು
ಉಪದೇಶ ಗುರುಗಳು : ಶ್ರೀ ವೆಂಕಟೇಶದೇವರ ವರ ಪ್ರಸಾದಾಂಕಿತ
ಅಂಕಿತ : ಶ್ರೀ ಶೀಶ
ರಚನೆಗಳು :
- ಶ್ರೀ ರಾಮ ಭಜನಾಮೃತ ಶತಾಷ್ಟಕ
- ಶ್ರೀಮದ್ಭಾಗವತದ ಶ್ರೀ ಕೃಷ್ಟಾವತಾರ ಲೀಲೆ
- ಶ್ರೀ ದತ್ತಾತ್ರೇಯ ಅವರಾತ
- ಶ್ರೀ ವೆಂಕಟೇಶದೇವರ ಅವತಾರ
- ಚಂದ್ರಹಾಸ ಚರಿತೆ ಬಯಲಾಟ
.
- ಶ್ರೀ ಮದ್ದಿಕೇರಿ ಭೀಮರಾಯರು
ಕಾಲ : ಕ್ರಿ ಶ 1815 – 1911
ಜನ್ಮ ಸ್ಥಳ : ಗಂಗಾವತಿ
ಉಪದೇಶ ಗುರುಗಳು : ಶ್ರೀ ಗುರು ಪ್ರಾಣೇಶದಾಸರು
ಅಂಕಿತ : ಸುಖದ ಸುಂದರ ವಿಠ್ಠಲ
ಪದ – 5
ಸುಳಾದಿ – 1 - ಶ್ರೀ ಭೀಮಸೇನಾಚಾರ್ಯರು
ಕಾಲ : ಕ್ರಿ ಶ 1854 – 1934
ಜನ್ಮ ಸ್ಥಳ : ಸಿಂಗನೋಡಿ
ಅಂಕಿತ : ಶ್ರೀ ರಂಗನಾಥದೇವರ ವರಪ್ರಸಾದಾಂಕಿತ ” ಶ್ರೀ ವರಬಂಡೇ ರಂಗವಿಠ್ಠಲ “-
ರಚನೆ :
ಅನೇಕ ಪದಗಳು ಹಾಗೂ ಬಯಲಾಟಗಳು ರಚಿಸಿದ್ದಾರೆ.
ಸಿಂಗನೋಡಿ – ಚಂದ್ರಬಂಡ – ನಂದಿನ್ನಿ ಸುತ್ತಮುತ್ತಲಿನ ಗ್ರಾಮದ ಕುರುಬ ಜನಾಂಗದವರ ಬಾಯಲ್ಲಿ ಇವರ ಹಾಡುಗಳು ಕೇಳಿಬರುತ್ತವೆ.
” ಶಬರ ಶಂಕರ ವಿಳಾಸ ” ಬಯಲಾಟ ಮಾತ್ರ ಮುದ್ರಿತವಾಗಿದೆ ಹಾಗೂ ಪ್ರದರ್ಶನವಾಗುತ್ತಿದೆ. - ಶ್ರೀ ಗೊಂಬೀ ಸೀನಪ್ಪ
ಕಾಲ : ಕ್ರಿ ಶ 1800 – 1860
ಜನ್ಮ ಸ್ಥಳ : ಕಿನ್ನಾಳ
ಅಂಕಿತ :
ಶ್ರೀ ಮುಖ್ಯಪ್ರಾಣದೇವರ ವರ ಪ್ರಸಾದಾಂಕಿತ ಶ್ರೀ ಕದರಮಂಡಲಗಿ ಪಾಂಡುರಂಗ –
ಪದ – 50
ಇವರ ಕೀರ್ತನೆಗಳೆಲ್ಲವೂ ಭಾವ ಸಂಭ್ರಮದಿಂದ ತುಂಬಿ ತುಳುಕುತ್ತಿದ್ದ ಮಧುರ ಮನೋಹರವಾದ ಮುಕ್ತಕಗಳಂತೆ ತೋರುತ್ತವೆ – ಅಲ್ಲದೇ ಇವರ ಕೀರ್ತನೆಗಳೆಲ್ಲವೂ ಸರಸ ಸುಂದರವಾಗಿದ್ದು ಅತ್ಯಂತ ತಿಟ್ಟಾಗಿರುವವು – ಆದುದರಿಂದಲೇ :
” ಕನಕದಾಸರ ಗುಟ್ಟು – ಶ್ರೀನಿವಾಸದಸರ ತಿಟ್ಟು ” ಎನ್ನುವ ಮಾತು ಶ್ರೀ ಹರಿದಾಸ ಪಂಥದಲ್ಲಿ ರೂಢಿಯಾಗಿದೆ. - ಶ್ರೀ ಸಿಂಗರಾಚಾರ್ಯರು
ಕಾಲ : ಕ್ರಿ ಶ 1873 – 1950
ಜನ್ಮ ಸ್ಥಳ : ಕನಕಗಿರಿ
ಅಂಕಿತ : ಶ್ರೀ ಕನಕಗಿರಿ ನೃಸಿಂದದೇವರ ವರ ಪ್ರಸಾದಾಂಕಿತ ” ಶ್ರೀ ಸಿಂಗರಿ “
ಇವರು ” ಶ್ರೀ ಸಿಂಗರಿ ” ಅಂಕಿತದಲ್ಲಿ ಅನೇಕ ಪದ – ಪದ್ಯ – ಲಾವಣಿಗಳು ರಚಿಸಿದ್ದು ಅದರಲ್ಲಿ ೫೦ ಮಾತ್ರ.
53 ಶ್ರೀ ಶ್ರೀ ಸುಬ್ಬಣ್ಣಾಚಾರ್ಯರು
ಕಾಲ : ಕ್ರಿ ಶ 1800 – 1885
ಜನ್ಮ ಸ್ಥಳ : ಸುರಪುರ
ಅಂಕಿತ :
ಮುದೇನೂರು ಶ್ರೀ ಮುಖ್ಯಪ್ರಾಣದೇವರ ವರ ಪ್ರಸಾದಾಂಕಿತ ” – ಶ್ರೀ ಗೋಪತಿ ಕೃಷ್ಣ ವಿಠ್ಠಲ “
ಇವರು ಸುಮಾರು ೫೦ ಪದ – ಪದ್ಯಗಳನ್ನು ರಚಿಸಿದ್ದು ತತ್ತ್ವ ಪ್ರಮೇಯಗೊಂದಿಗೆ ಭಕ್ತ ಹೃದಯದ ಆರ್ತತೆಯೂ ಇವರ ಪದ – ಪದ್ಯಗಳಲ್ಲಿ ಹೊರಹೊಮ್ಮಿವೆ.
54 ಶ್ರೀ ಕಟ್ಟ್ಯಾಚಾರ್ಯ ಜೋಶಿ
ಕಾಲ : ಕ್ರಿ ಶ 1880 – 1976
ಜನ್ಮ ಸ್ಥಳ : ಪಾಮನಕೆಲ್ಲೂರು
ಅಂಕಿತ :
ಶ್ರೀ ಯಂತ್ರೋದ್ಧಾರಕ ಪ್ರಾಣದೇವರ ಸ್ವಪ್ನಾಂಕಿತ ” ನರಸಿಂಹವಿಠ್ಠಲ ” ಅಂಕಿತದಲ್ಲಿ ಅನೇಕ ಪದ – ಪದ್ಯಗಳನ್ನು ರಚನೆ ಮಾಡಿದ್ದಾರೆ. :
- ಶ್ರೀ ಕೃಷ್ಣಲೀಲೆ
- ಶ್ರೀ ಗಣಪತಿಯಿಂದ ಮೊದಲು ಮಾಡಿ ಶ್ರೀ ಹರಿ ಸ್ತುತಿ ಹಾಗೂ ದಶಾವತಾರ ಪದಗಳು
- ಮಗಳಾರತಿ ಹಾಗೂ ಆಶೀರ್ವಾದ ಪದಗಳು
- ಲಾವಣಿ [ ಎಲೆ ಅಡಿಕೆ ಸುಣ್ಣದ ಜಗಳ ಹಾಗೂ ಕ್ವಾನಮ್ಮನ ಹಾಡುಗಳು ]
55 ಶ್ರೀ ಗುರುಮಧ್ವಚಾರ್ಯರು
ಕಾಲ : ಕ್ರಿ ಶ 1882 – 1962
ಜನ್ಮ ಸ್ಥಳ : ಗಂಗಾವತಿ
ಅಂಕಿತ : ಶ್ರೀ ಭೋಗಾಪುರೇಶ ವರಪ್ರಸಾದಾಂಕಿತ ” ಶ್ರೀ ಗುರುಮಧ್ವ “
ಇವರು ಅನೇಕ ಪದ ಪದ್ಯಗಳನ್ನು ರಚಿಸಿದ್ದಾರೆ!
ಅಮೋಘ, ಬಹಳ ಶ್ರಮ ಪಟ್ಟು ದಾಸ varenyara ಮಾಹಿತಿ ಕೊಟ್ಟಿದ್ದೀರಿ. ವಂದನ ಸಹಸ್ರಗಳು