Rigveda Sayam Sandhyavandhane

ಋಗ್ವೇದೀಯ ಸಾಯಂ ಸಂಧ್ಯಾವಂದನಂ

ಸಾಯಂಕಾಲದ ಸಂಧ್ಯಾವಂದನೆಯನ್ನು ಉತ್ತರಾಭಿಮುಖವಾಗಿ ಕುಳಿತು ಮಾಡಬೇಕು. ಅರ್ಘ್ಯವನ್ನು ಪಶ್ಚಿಮಾಭಿಮುಖವಾಗಿ ಕೊಡಬೇಕು. ನದೀತೀರದಲ್ಲಿ ಮಾಡುವಾಗ ನೀರನ್ನು ಬಂಡಯಮೇಲೆ ಹಾಕಬೇಕು, ನೀರಿನಲ್ಲಿ ಹಾಕಬಾರದು. ಗಾಯತ್ರೀಜಪವನ್ನು ಪಶ್ಚಿಮಾಭಿಮುಖವಾಗಿ ಮಾಡಬೇಕು.
(ಅಚಮನ, ಪ್ರಾಣಾಯಾಮ, ಸಂಕಲ್ಪಗಳನ್ನು ಪ್ರಾತಃಸಂಧ್ಯಾವಂದನದಂತೆ ಮಾಡಬೇಕು) ……. ಶ್ರೀ ಲಕ್ಷ್ಮೀನಾರಾಯಣ ಪ್ರೀತ್ಯರ್ಥಂ ಸಾಯಂಸಂಧ್ಯಾಮುಪಾಸಿಷ್ಯೇ

(ಆಪೋ ಹಿಷ್ಠಾ ಇತ್ಯಾದಿ ಮಂತ್ರಗಳಿಂದ ಪ್ರಾತಃಸಂಧ್ಯಾವಂದನದಂತೆ ಮಾರ್ಜನವನ್ನು ಮಾಡಬೇಕು)

ಜಲಾಭಿಮಂತ್ರಣಂ :

ಅಗ್ನಿಶ್ಚೇತ್ಯಶ್ಯ ಮಂತ್ರಸ್ಯ ಹಿರಣ್ಯಗರ್ಭ ಋಷಿಃ ಅಗ್ನಿಮಾಮನ್ಯು ಮನ್ಯುಪತಯೋ ಅಹರ್ದೇವತಾ ಪ್ರಕೃತಿಶ್ಚಂದಃ ಜಲಾಭಿಮಂತ್ರಣೇ ವಿನಿಯೋಗಃ
ಓಂ ಅಗ್ನಿಶ್ಚ ಮಾ ಮನ್ಯುಶ್ಚ ಮನ್ಯುಪತಯಶ್ಚ ಮನ್ಯುಕೃತೇಭ್ಯಃ ಪಾಪೇಭ್ಯೋ ರಕ್ಷಂತಾಂ ಯದಹ್ನಾ ಪಾಪಮಕಾರ್ಷಂ ಮನಸಾ ವಾಚಾ ಹಸ್ತಾಭ್ಯಾಂ ಪದ್ಭ್ಯಾಮುದರೇಣ ಶಿಶ್ನಾ ಅಹಸ್ತದವಲುಂಪತು ಯತ್ಕಿಂಚ ದುರಿತಂ ಮಯಿ ಇದಮಹಂ ಮಾಮಮೃತಯೋನೌ ಸತ್ಯೇ ಜ್ಯೋತಿಷಿ ಜುಹೋಮಿ ಸ್ವಾಹಾ ! ಓಂ

(ಅನಂತರ ಪುನರ್ಮಾರ್ಜನಾದಿಗಳನ್ನು ಅರ್ಘ್ಯಪ್ರದಾನದವರೆಗೆ ಪ್ರಾತಃಸಂಧ್ಯೆಯಂತೆ ಆಚರಿಸಬೇಕು)

ಅರ್ಘ್ಯಪ್ರದಾನಂ – ಗಾಯತ್ರೀಜಪಃ :
(ಅಚಮನ, ಪ್ರಾಣಾಯಾಮಗಳನ್ನು ಮಾಡಿ) ಅದ್ಯ ಪೂರ್ವೋಕ್ತೈವಂಗುಣವಿಶೇಷಣ ವಿಶಿಷ್ಟಾಯಾಂ ಶುಭತಿಥೌ ….ಶ್ರೀ ಲಕ್ಷ್ಮೀನಾರಾಯಣ ಪ್ರೇರಣಯಾ ಶ್ರೀ ಲಕ್ಷ್ಮೀನಾರಾಯಣ ಪ್ರೀತ್ಯರ್ಥಂ ಸಾಯಂಸಂಧ್ಯಾರ್ಘ್ಯ ಪ್ರದಾನಮಹಂ ಕರಿಷ್ಯೇ (ಎಂದು ಸಂಕಲ್ಪಿಸಿ ಪ್ರಾತಃಸಂಧ್ಯೆಯಂತೆ ಮೂರು ಅರ್ಘ್ಯಗಳನ್ನು, ಕಾಲಾತಿಕ್ರಮವಾಗಿದ್ದಲ್ಲಿ ಪ್ರಾಯಶ್ಚಿತ್ತಾರ್ಘ್ಯವನ್ನೂ ಕೊಡಬೇಕು. ಅನಂತರ ಭೂತೋಚ್ಚಾಟನ, ಆಸನಶುದ್ಧಿ ಆಚರಿಸಿ ಪ್ರಾತಃಸಂಧ್ಯೆಯಂತೆ ಪ್ರಾಣಾಯಾಮ, ಅಂಗನ್ಯಾಸ, ಕರನ್ಯಾಸ, ಧ್ಯಾನ ಇತ್ಯಾದಿಗಳನ್ನು ಮಾಡಿ ಗಾಯತ್ರೀಜಪವನ್ನು ಶಕ್ತ್ಯನುಸಾರ ಮಾಡಬೇಕು.
ಸಂಧ್ಯೋಪಸ್ಥಾನ ಮತ್ತು ದಿಜ಼್ನಮಸ್ಕಾರ
(ಪಶ್ಚಿಮಾಭಿಮುಖವಾಗಿ ನಿಂತು ಪ್ರಾತಃಸಂಧ್ಯೆಯಂತಯೇ ಜಾತವೇದಸೇ ಇತ್ಯಾದಿ ಮಂತ್ರಗಳಿಂದ ಆಚರಿಸಬೇಕು. ಓಂ ನಮಃ ಪ್ರತೀಚೈ ದಿಶೇ ಇತ್ಯಾದಿ ಮಂತ್ರಗಳಿಂದ ಪಶ್ಚಿಮದಿಕ್ಕಿನಿಂದಾರಂಭಿಸಿ ಕ್ರಮವಾಗಿ ದಿಜ಼್ನಮಸ್ಕಾರವನ್ನು ಮಾಡಬೇಕು. ಅನಂತರ ಓಂ ಸಂಧ್ಯಾಯೈ ನಮಃ ಇತ್ಯಾದಿಯಾಗಿ ಸಂಧ್ಯಾದಿದೇವತೆಗಳಿಗೆ ನಮಸ್ಕರಿಸಿ ಗೋತ್ರಾಭಿದಾನವನ್ನು ಮಾಡಬೇಕು.

ಸಮಾಪನಂ :
ಯಸ್ಯ ಸ್ಮೃತ್ಯಾ ಚ ನಾಮೋಕ್ತ್ಯಾ ತಪಃ ಸಂಧ್ಯಾಕ್ರಿಯಾದಿಷು
ನ್ಯೂನಂ ಸಂಪೂರ್ಣತಾಂ ಯಾತಿ ಸದ್ಯೋ ವಂದೇ ತಮಚ್ಯುತಂ
ಮಂತ್ರಹೀನಂ ಕ್ರಿಯಾಹೀನಂ ಭಕ್ತಿಹೀನಂ ರಮಾಪತೇ
ಯತ್ ಕೃತಂ ತು ಮಯಾ ದೇವ ಪರಿಪೂರ್ಣಂ ತದಸ್ತು ಮೇ

ಅನೇನ ಸಾಯಂ ಸಂಧ್ಯಾವಂದನೇನ ಭಗವಾನ್ ಭಾರತೀರಮಣಮುಖ್ಯಪ್ರಾಣಾಂತರ್ಗತ ಸವಿತೃನಾಮಕ ಶ್ರೀ ಲಕ್ಷ್ಮೀನಾರಾಯಣ ಪ್ರಿಯತಾಂ ಪ್ರೀತೋ ವರದೋ ಭವತು ಶ್ರೀ ಕೃಷ್ಣಾರ್ಪಣಮಸ್ತು.
(ಉದ್ಧರಿಣಿ ಯಿಂದ ನೀರನ್ನು ಬಿಟ್ಟು ಎರಡು ಸಲ ಆಚಮನ ಮಡಬೇಕು)
ಮಧ್ಯೇ ಮಂತ್ರ ತಂತ್ರ ಸ್ವರ ವರ್ಣ ಲೋಪದೋಷ ಪ್ರಾಯಶ್ಚಿತ್ತಾರ್ಥಂ ನಾಮತ್ರಯಮಂತ್ರಜಪಂ ಕರಿಷ್ಯೇ
ಅಚ್ಯುತಾಯ ನಮಃ ಅನಂತಾಯ ನಮಃ ಗೋವಿಂದಾಯ ನಮಃ (ಮೂರು ಸಲ) ಅಚ್ಯುತಾನಂತಗೋವಿಂದೇಭ್ಯೋ ನಮಃ

ಕಾಯೇನವಾಚಾ ಮನಸೇಂದ್ರಿಯೈರ್ವಾ ಬುದ್ಧ್ಯಾತ್ಮನಾ ವಾ ಅನುಸೃತ್ ಸ್ವಭಾವಂ
ಕರೋಮಿ ಯದ್ಯತ್ ಸಕಲಂ ಪರಸ್ಮೈ ನಾರಾಯಣಾಯೇತಿ ಸಮರ್ಪಯಾಮಿ

 

(Download link of Article)

Rugvediya saayam Sandhyavandanam_Telugu

Rugvediya saayam Sandhyavandanam_Kannada

madhwamrutha

Tenets of Madhwa Shastra

You may also like...

Leave a Reply

Your email address will not be published. Required fields are marked *