ದೇವಪೂಜಾ ವಿಧಾನ

ದೇವಪೂಜಾ ವಿಧಾನ

ಅಚಮನ, ಪ್ರಾಣಾಯಾಮಗಳನ್ನು ಮಾಡಿ ಭಾರತೀರಮಣಮುಖ್ಯಪ್ರಾಣಾಂತರ್ಗತ ಶ್ರೀ ಲಕ್ಷ್ಮೀನಾರಾಯಣಸ್ಯ ನಿರ್ಮಾಲ್ಯ ವಿಸರ್ಜನಂ ಕರಿಷ್ಯೇ – ಎಂದು ಸಂಕಲ್ಪ ಮಾಡಬೇಕು.

ನಾರಾಯಣಾಯ ಪರಿಪೂರ್ಣಗುಣಾರ್ಣವಾಯ ವಿಶ್ವೋದಯಸ್ಥಿತಿ ಲಯೋನ್ನಿಯತಿ ಪ್ರದಾಯ ಜ್ಞಾನಪ್ರದಾಯ ವಿಭುದಾಸುರಸೌಖ್ಯದುಃಖ ಸತ್ಕಾರಣಾಯ ವಿತತಾಯ ನಮೋ ನಮಸ್ತೇ
ಯೋ ವಿಪ್ರಲಂಬ ವಿಪರೀತ ಮತಿಪ್ರಭೂತಾನ್ ವಾದಾನ್ನಿರಸ್ಯ ಕೃತವಾನ್ ಭುವಿ ತತ್ವ ವಾದಂ ಸರ್ವೇಶ್ವರೋ ಹರಿರಿತಿ ಪ್ರತಿಪಾದಯಂತಂ ಆನಂದತೀರ್ಥಮುನಿವರ್ಯಮಹಂ ನಮಾಮಿ

ದ್ವಾರಪಾಲಕರಿಗೆ ನಮಸ್ಕಾರ
ಓಂ ಶ್ರೀಯೈ ನಮಃ ಜಯಾಯ ನಮಃ ವಿಜಯಾಯ ನಮಃ
ಓಂ ಶ್ರೀಯೈ ನಮಃ ಬಲಾಯ ನಮಃ ಪ್ರಬಲಾಯ ನಮಃ
ಓಂ ಶ್ರೀಯೈ ನಮಃ ನಂದಾಯ ನಮಃ ಸುನಂದಾಯ ನಮಃ
ಓಂ ಶ್ರೀಯೈ ನಮಃ ಕುಮುದಾಯ ನಮಃ ಕುಮುದಾಕ್ಷಾಯ ನಮಃ

ತಾರತಮ್ಯ ಸ್ತೋತ್ರ
ವಂದೇ ವಿಷ್ಣುಂ ನಮಾಮಿ ಶ್ರಿಯಮಥ ಚ ಭುವಂ ಬ್ರಹ್ಮವಾಯೂ ಚ ವಂದೇ ಗಾಯತ್ರೀಂ ಭಾರತೀಂ ತಾಮಪಿ ಗರುಡಮನಂತಂ ಭಜೇ ರುದ್ರದೇವಂ
ದೇವೀಂ ವಂದೇ ಸುಪರ್ಣಿಮಹಿಪತಿದಯಿತಾಂ ವಾರುಣೀಮಪ್ಯುಮಾಂ ತಾಂ ಇಂದ್ರಾದೀನ್ ಕಾಮಮುಖ್ಯಾನಪಿ ಸಕಲಸುರಾನ್ ತದ್ಗುರೂನ್ ಮದ್ಗುರೂಂಶ್ಚ.
ಓಂ ವಾಯ ವಾಯಾಹಿ ದರ್ಶತಮೇ ಸೋಮಾ ಅರಂ ಕೃತಾಃ ತೇಷಾಂ ಪಾಹಿ ಶೃಧೀಹವಂ
ದೀಪಪ್ರಜ್ವಲನಂ
ಓಂ ಅಗ್ನಿನಾಗ್ನಿಃ ಸಮಿಧ್ಯತೇ ಕವಿರ್ಗೃಹಪತಿರ್ಯುವಾ ಹವ್ಯವಾಡ್ ಜುಹ್ವಾಸ್ಯಃ

ಓಂ ಅಪಸರ್ಪಂತು ಯೇ ಭೂತಾ ಯೇ ಭೂತಾ ಭುವಿಸಂಸ್ಥಿತಾಃ
ಯೇ ಭೂತಾ ವಿಘ್ನಕರ್ತಾರಸ್ತೇ ನಶ್ಯಂತು ಶಿವಾಜ್ಞಯಾ
ಅಪಕ್ರಾಮಂತು ತೇ ಭೂತಾಃ ಕ್ರೂರಾಶ್ಚೈವ ತು ರಾಕ್ಷಸಾಃ
ಯೇ ಚಾತ್ರ ನಿವಸಂತ್ಯೇವ ದೈವತಾ ಭುವಿ ಸಂತತಂ
ಭೂತಪ್ರೇತಪಿಶಾಚಾ ಯೇ ಯೇ ಚಾನ್ಯೇ ಭುವಿ ಭಾರಕಾಃ
ತೇಷಾಮಪ್ಯ ವಿರೋಧೇನ ಬ್ರಹ್ಮಕರ್ಮ ಸಮಾರಭೇ

ಯೇಭ್ಯೋ ಮಾತಾ ಮಧು ಮತ್ ಪಿನ್ವತೇ ಪಯಃ ಪೀಯೂಷಂ ದ್ಯೌರದಿತಿ ರದ್ರಿ ಬರ್ಹಾಃ ಉಕ್ಥಶುಷ್ಮಾನ್ ವೃಷಭರಾಂ ತ್ಸ್ವಪ್ನಸಸ್ತಾಂ ಆದಿತ್ಯಾಂ ಅನುಮದಾ ಸ್ವಸ್ತಯೇ
ಏವಾಪಿತ್ರೇ ವಿಶ್ವದೇವಾಯ ವೃಷ್ಣೇ ಯಜ್ಞೈರ್ವಿಧೇಮ ನಮಸಾ ಹವಿರ್ಭಿಃ ಬೃಹಸ್ಪತೇ ಸುಪ್ರಜಾ ವೀರವಂತೋ ವಯಂ ಸ್ಯಾಮ ಪತಯೋ ರಯೀಣಾಂ
ಬ್ರಹ್ಮಪಾರ ಸ್ತೋತ್ರಂ
ಪ್ರಚೇತಸ ಊಚುಃ
ಬ್ರಹ್ಮಪಾರಂ ಮುನೇ ಶ್ರೋತುಮಿಚ್ಚಾಮಃ ಪರಮಂ ಸ್ತವಂ
ಜಪತಾ ಕಂಡುನಾ ದೇವೋ ಯೇನಾರಾಧ್ಯತ ಕೇಶವಃ
ಸೋಮ ಉವಾಚ
ಪಾರಂ ಪರಂ ವಿಷ್ಣುರನಂತ ಪಾರಃ ಪರಃ ಪರಣಾಮಪಿ ಪಾರಪಾರಃ
ಸ ಬ್ರಹ್ಮಪಾರಃ ಪರಪಾರಭೂತಃ ಪರಃ ಪರೇಭ್ಯಃ ಪರಮಾರ್ಥರೂಪೀ
ಸ ಕಾರಣಂ ಕಾರಣತಸ್ತತೋಽಪಿ ತಸ್ಯಾಪಿ ಹೇತುಃ ಪರಹೇತುಹೇತುಃ
ಕಾರ್ಯೇಷುಚೈವಂ ಸ ಹಿ ಕರ್ಮಕರ್ತೃರೂಪೈರಶೆಷೈರವತೀಹ ಸರ್ವಂ
ಬ್ರಹ್ಮ ಪ್ರಭುರ್ಬ್ರಹ್ಮಸ ಸರ್ವಭೂತೋ ಬ್ರಹ್ಮಪ್ರಜಾನಾಂ ಪತಿರಚ್ಯುತೋಽಸೌ
ಬ್ರಹ್ಮಾವ್ಯಯಂ ನಿತ್ಯಮಜಂ ಸ ವಿಷ್ಣುರಪಕ್ಷಯಾದ್ಯೈರಖಿಲೈರಸಂಗೀ
ಬ್ರಹ್ಮಾಕ್ಷರಮಜಂ ನಿತ್ಯಂ ಯಥಾಸೌ ಪುರುಷೋತ್ತಮಃ
ತಥಾ ರಾಗಾದಯೋ ದೋಷಾಃ ಪ್ರಯಾಂತು ಪ್ರಶಮಂ ಮಮ
ಯ ಏತದ್ ಬ್ರಹ್ಮಪಾರಾಖ್ಯಂ ಸಂಸ್ತವಂ ಪರಮಂ ಜಪನ್
ಅವಾಪ ಪರಮಾಂ ಸಿದ್ಧಿಂ ಸ ಸಮಾರಾಧ್ಯ ಕೇಶವಂ

ಘಂಟಾವಾದನಂ
ಆಗಮಾರ್ಥಂ ತು ದೇವಾನಾಂ ಗಮಾನಾರ್ಥಂ ತು ರಕ್ಷಸಾಂ
ಕುರು ಘಂಟಾರವಂ ತತ್ರ ದೇವತಾಹ್ವಾನ ಲಾಂಛನಂ
ಅಜ್ಞಾನಾದ್ ಜ್ಞಾನತೋ ವಾಪಿ ಕಾಂಸ್ಯ ಘಂಟಾನ ವಾದಯೇತ್
ರಾಕ್ಷಸಾನಾಂ ಪಿಶಾಚಾನಾಂ ತದ್ದೇಶೀ ವಸತಿರ್ಭವೇತ್
ತಸ್ಮಾತ್ ಸರ್ವ ಪ್ರಯತ್ನೇನ ಘಂಟಾಮಾಚಲ್ಯ ವಾದಯೇತ್
ಕೃತಾಂಜಲಿ ಪುಟೋ ಭೂತ್ವಾ ವಿನಯಾನತ ಕಂಧರಃ
ಯಾಚೇ ತ್ವಾಂ ದೇವಪೂಜಾರ್ಥ ಮುತ್ತಿಷ್ಠತ್ವಂ ರಮಾಪತೇ

ನಿರ್ಮಾಲ್ಯ ವಿಸರ್ಜನಂ
(ಅಂಗುಷ್ಟ ಮತ್ತು ತರ್ಜನೀ ಬೆರಳುಗಳಿಂದ ಹಿಂದಿನ ದಿನದ ಗಂಧ, ತುಳಸಿ, ಪುಷ್ಪವನ್ನು ತೆಗೆದು ಸಂಪುಟದಲ್ಲಿರುವ ಸಾಲಗ್ರಾಮ ಮತ್ತು ದೇವರ ಪ್ರತಿಮೆಗಳನ್ನು ಸ್ನಾನಪಾತ್ರೆ (ತಾಮ್ರ ತಟ್ಟಿ) ಯಲ್ಲಿ ಇಡುವುದು.)
ಆಯತಾಭ್ಯಾಂ ವಿಶಾಲಾಭ್ಯಾಂ ಶೀತಲಾಭ್ಯಾಂ ಕೃಪಾನಿಧೇ
ಕರುಣಾಮೃತ ಪೂರ್ಣಾಭ್ಯಾಂ ಲೋಚನಾಭ್ಯಾಂ ವಿಲೋಕಯ
ಸಾಲಗ್ರಾಮ ನಿವಾಸಾಯ ಕ್ಷೀರಾಬ್ದಿ ಶಯನಾಯ ಚ
ಶ್ರೀಶೈಲಾದ್ರಿ ನಿವಾಸಾಯ ಶಿಲಾವಾಸಾಯ ತೇ ನಮಃ
ಸಾಲಗ್ರಾಮ ಶಿಲಾಯಂ ತು ನಿತ್ಯಂ ಸನ್ನಿಹಿತಃ ಕಲಿಃ
ಭೀಮಸೇನ ಮಹಾಬಾಹೋ ಗದಯಾ ಪೋತನಂ ಕುರು
(ಮೇಲಿನ ಮಂತ್ರದಿಂದ ಸಾಲಗ್ರಾಮಗಳನ್ನು ತೊಳೆದು ಅಭಿಷೇಕ ಪಾತ್ರೆಯಲ್ಲಿ ಮತ್ತೆ ಇಡಬೇಕು)

ನಿರ್ಮಾಲ್ಯ ಅಭಿಷೇಕ :
(ಒಂದು ಕಲಶದ ಮೀಸಲು ನೀರನ್ನು ಪಂಚಪಾತ್ರೆಯಲ್ಲಿ ಹಾಕಿಕೊಂಡು ತುಳಸೀ ಹಾಕಿ “ಓಂ ನಮೋ ನಾರಾಯಣಾಯ ಓಂ” ಎಂದು ೧೨ ಬಾರಿ ಅಭಿಮಂತ್ರಿಸಿ ಅಂಭೃಣೀಸೂಕ್ತ ಹೇಳುತ್ತಾ ಶಂಖದಿಂದ(ಮುತ್ತು ಹವಳ ಕತ್ತಿದ್ದರೆ ಮುಂಭಾಗದಿಂದ ಇಲ್ಲದಿದ್ದರೆ ಮಗ್ಗುಲಿಂದ) ಅಭಿಷೇಕ ಮಾಡಬೇಕು. ಸಾಲಗ್ರಾಮದಜೊತೆಗೆ ಸುದರ್ಶನ, ಚಕ್ರಾಂಕಿತ, ವಿಷ್ಣುಪಾದ, ಕೃಷ್ಣ ಪ್ರತಿಮೆ ಗಳಿಗೂ ಅಭಿಷೇಕ ಮಾಡಬೇಕು)

ಅಂಭೃಣೀಸೂಕ್ತ
ಅಹಂ ರುದ್ರೇಭಿರ್ವಸುಭಿಶ್ಚರಾಮ್ಯಹಮಾದಿತ್ಯೈರುತ ವಿಶ್ವದೇವೈಃ . ಅಹಂ ಮಿತ್ರಾವರುಣೋಭಾಭಿಭರ್ಮ್ಯಹಮೀಂದ್ರಾಗ್ನೀ ಅಹಮಶ್ವಿನೋಭಾ
ಅಹಂ ಸೋಮಮಾ ಹನಸಂ ಭಿಭರ್ಮ್ಯಹಂ ತ್ವಷ್ಟಾರಮುತ ಪೂಷಣಂ ಭಗಂ ಅಹಂ ದಧಾಮಿ ದ್ರವಿಣಂ ಹವಿಷ್ಮತೇ ಸುಪ್ರಾವ್ಯೇ೩ ಯಜಮಾನಾಯ ಸುನ್ವತೇ
ಅಹಂ ರಾಷ್ಟ್ರೀ ಸಂಗಮನೀ ವಸೂನಾಂ ಚಿಕಿತುಷೀ ಪ್ರಥಮಾ ಯಜ್ಞಯಾನಾಂ ತಾಂ ಮಾ ದೇವಾ ವ್ಯದಧುಃ ಪುರುತ್ರಾ ಭೂರಿಸ್ಥಾತ್ರಾಂ ಭೂರ್ಯಾವೇಶಯಂತೀಂ
ಮಯಾಸೋ ಅನ್ನಮತ್ತಿ ಯೋ ವಿಪಶ್ಯತಿ ಯಃ ಪ್ರಾಣಿತಿ ಯ ಈಂ ಶೃಣೋತ್ಯುಕ್ತಂ ಆಮಂತವೋ ಮಾಂ ತ ಉಪಕ್ಷಿಯಂತಿ ಶೃಧಿ ಶ್ರುತ ಶ್ರದ್ಧಿವಂತೇ ವದಾಮಿ
ಅಹಮೇವ ಸ್ವಯಮಿದಂ ವದಾಮಿ ಜುಷ್ಟಂ ದೇವೇಭಿರುತ ಮಾನುಷೇಭಿಃ ಯಂ ಕಾಮಯೇ ತಂ ತಮುಗ್ರಂ ಕೃಣೋಮಿ ತಂ ಬ್ರಹ್ಮಾಣಂ ತಮೃಷಿಂ ತಂ ಸುಮೇಧಾಂ
ಅಹಂ ರುದ್ರಾಯ ಧನುರಾತನೋಮಿ ಬ್ರಹ್ಮದ್ವಿಷೇ ಶರವೇ ಹಂತವಾ ಉ ಅಹಂ ಜನಾಯ ಸಮದಂ ಕೃಣೋಮ್ಯಹಂ ದ್ಯಾವಾಪೃಥಿವೀ ಆವಿವೇಶ
ಅಹಂ ಸುವೇ ಪಿತರಮಸ್ಯ ಮೂರ್ಧನ್ ಮಮ ಯೋನಿರಪ್ಸ್ವಂತಃ ಸಮುದ್ರೇ ತತೋ ವಿತಿಶ್ಠೇ ಭುವನಾನು ವಿಶ್ವೋತಾಮೂಂ ದ್ಯಾಮ್ ವರ್ಷ್ಮಣೋಪಸ್ಪೃಶಾಮಿ
ಅಹಮೇವ ವಾತ ಇವ ಪ್ರವಾಮ್ಯಾರಭಮಾಣಾ ಭುವನಾನಿ ವಿಶ್ವಾ ಪರೋ ದಿವಾ ಪರ ಏನಾ ಪೃಥಿವ್ಯೈ ತಾವತಿ ಮಹಿನಾ ಸಂಬಭೂವ
(ಈ ಅಭಿಷೇಕದ ತೀರ್ಥವೇ ನಿರ್ಮಾಲ್ಯ ತೀರ್ಥ. ಇದನ್ನು ಶಂಖಕ್ಕೆ, ಪ್ರಾಣ, ಗರುಡ, ಶೇಷ, ಗುರುಗಳು ಇವರುಗಳಿಗೆ ಅವರವರ ಅಭಿಷೇಕದ ನಂತರ ಉದ್ಧರಣೆಯಿಂದ ಕೊಡುವುದು)
ನಿರ್ಮಾಲ್ಯ ತೀರ್ಥದಲ್ಲಿ ಸ್ವಲ್ಪ ಬ್ರಹ್ಮ ಯಜ್ಞಕ್ಕೆ ತೆಗದಿಟ್ಟು ಉಳಿದ ತೀರ್ಥದಲ್ಲಿ ಶ್ರೀ ಸೂಕ್ತದಿಂದ ಶಂಖಕ್ಕೆ ಉದ್ಧರಣೆಯಿಂದ ಅಭಿಷೇಕ ಮಾಡುವುದು. ಇದೇ ನಿರ್ಮಾಲ್ಯ ತೀರ್ಥದಿಂದ ಪ್ರಾಣದೇವರಿಗೆ ಮತ್ತು ರಾಯರಿಗೆ ಅಭಿಷೇಕ ಮಾಡುವುದು. ಶುದ್ಧಜಲದಿಂದ ಶಂಖಾದಿಗಳಿಗೆ ಅಭಿಷೇಕ ಮಾಡಿ ನಿರ್ಮಾಲ್ಯತೀರ್ಥವನ್ನು ಮೂರಾವರ್ತಿ ಕೊಡುವುದೂ ಉಂಟು)

ಶ್ರೀ ಸೂಕ್ತಂ (ಶಂಖಕ್ಕೆ ಅಭಿಷೇಕ)
ಓಂ ಹಿರಣ್ಯ ವರ್ಣಾಂ ಹರಿಣೀಂ ಸುವರ್ಣರಜತಸ್ರಜಾಂ ಚಂದ್ರಾಂ ಹಿರಣ್ಮಯೀಂ ಲಕ್ಷ್ಮೀಂ ಜಾತವೇದೋ ಮ ಅವಹ
ತಾಂ ಮ ಅವಹ ಜಾತವೇದೋ ಲಕ್ಷ್ಮೀಮನಪಗಾಮಿನೀಂ ಯಸ್ಯಾಂ ಹಿರಣ್ಯಂ ವಿಂದೇಯಂ ಗಾಮಶ್ವಂ ಪುರುಷಾನಹಂ
ಅಶ್ವಪೂರ್ವಾಂ ರಥಮಧ್ಯಾಂ ಹಸ್ತಿನಾದಪ್ರಭೋದಿನೀಂ ಶ್ರಿಯಂ ದೇವೀಮುಪಹ್ವಯೇ ಶ್ರೀರ್ಮಾ ದೇವೀರ್ಜುಷತಾಂ
ಕಾಂ ಸೋಸ್ಮಿತಾಂ ಹಿರಣ್ಯಪ್ರಾಕಾರಾಮಾರ್ದ್ರಾಂ ಜ್ವಲಂತೀಂ ತೃಪ್ತಾಂ ತರ್ಪಯಂತೀಂ ಪದ್ಮೇ ಸ್ಥಿತಾಂ ಪದ್ಮವರ್ಣಾಂ ತಾಮಿಹೋಪಹ್ವಯೇ ಶ್ರಿಯಂ
ಚಂದ್ರಾಂ ಪ್ರಭಾಸಾಂ ಯಶಸಾ ಜ್ವಲಂತೀಂ ಶ್ರಿಯಂ ಲೋಕೇ ದೇವಜುಷ್ಟಾಮುದಾರಾಂ ತಾಂ ಪದ್ಮಿನೀಮೀಂ ಶರಣಮಹಂ ಪ್ರಪದ್ಯೇ ಅಲಕ್ಷ್ಮೀರ್ಮೇ ನಶ್ಯತಾಂ ತ್ವಾಂ ವೃಣೇ
ಆದಿತ್ಯವರ್ಣೇ ತಪಸೋಽಧಿಜಾತೋ ವನಸ್ಪತಿಸ್ತವ ವೃಕ್ಷೋಽಥ ಬಿಲ್ವಃ ತಸ್ಯ ಫಲಾನಿ ತಪಸಾ ನುದಂತು ಮಾ ಯಾಂತರಾ ಯಾಶ್ಚ ಬಾಹ್ಯಾ ಅಲಕ್ಷ್ಮೀಃ
ಉಪೈತು ಮಾಂ ದೇವಸಖಃ ಕೀರ್ತಿಶ್ಚ ಮಣಿನಾ ಸಹ ಪ್ರಾದುರ್ಭೂತೋಽಸ್ಮಿ ರಾಷ್ಟ್ರೇಽಸ್ಮಿನ್ ಕೀರ್ತಿಮೃದ್ಧಿಂ ದದಾತು ಮೇ
ಕ್ಷುತ್ಪಿಪಾಸಾಮಲಾಂ ಜ್ಯೇಷ್ಠಾಮಲಕ್ಷ್ಮೀಂ ನಾಶಯಾಮ್ಯಹಂ ಅಭೂತಿಮಸಮೃದ್ಧಿಂ ಚ ಸರ್ವಾಂ ನಿರ್ಣುದ ಮೇ ಗೃಹಾತ್
ಗಂಧದ್ವಾರಾಂ ದುರಾಧರ್ಷಾಂ ನಿತ್ಯಪುಷ್ಟಾಂ ಕರೀಷಿಣೀಂ ಈಶ್ವರೀಂ ಸರ್ವಭೂತಾನಾಂ ತಾಮಿಹೋಪಹ್ವಯೇ ಶ್ರಿಯಂ
ಮನಸಃ ಕಾಮಮಾಕೂತಿಂ ವಾಚಃ ಸತ್ಯಮಶೀಮಹಿ ಪಶೂನಾಂ ರೂಪಮನ್ನಸ್ಯ ಮಯಿ ಶ್ರೀಃ ಶ್ರಯತಾಂ ಯಶಃ
ಕರ್ದಮೇನ ಪ್ರಜಾಭೂತಾ ಮಯಿ ಸಂಭವ ಕರ್ದಮ ಶ್ರಿಯಂ ವಾಸಯ ಮೇ ಕುಲೇ ಮಾತರಂ ಪದ್ಮಮಾಲಿನೀಂ
ಆಪಃ ಸೃಜಂತು ಸ್ನಿಗ್ಧಾನಿ ಚಿಕ್ಲೀತ ವಸ ಮೇ ಗೃಹೇ ನಿ ಚ ದೇವೀಂ ಮಾತರಂ ಶ್ರಿಯಂ ವಾಸಯ ಮೇ ಕುಲೇ
ಆರ್ದ್ರಾಂ ಪುಷ್ಕರಿಣೀಂ ಪುಷ್ಟಿಂ ಸುವರ್ಣಾಂ ಹೇಮಮಾಲಿನೀಂ ಸೂರ್ಯಾಂ ಹಿರಣ್ಮಯೀಂ ಲಕ್ಷ್ಮೀಂ ಜಾತವೇದೋ ಮ ಆವಹ
ಆರ್ದ್ರಾಂ ಯಃ ಕರಿಣೀಂ ಯಷ್ಟಿಂ ಪಿಂಗಲಾಂ ಪದ್ಮಮಾಲಿನೀಂ ಚಂದ್ರಾಂ ಹಿರಣ್ಮಯೀಂ ಲಕ್ಷ್ಮೀಂ ಜಾತವೇದೋ ಮ ಆವಹ
ತಾಂ ಮ ಆವಹ ಜಾತವೇದೋ ಲಕ್ಷ್ಮೀಮನಪಗಾಮಿನೀಂ ಯಸ್ಯಾಂ ಹಿರಣ್ಯಂ ಪ್ರಭೂತಂ ಗಾವೋ ದಾಸ್ಯೋಽಶ್ವಾನ್ ವಿಂದೇಯಂ ಪುರುಷಾನಹಂ ಓಂ

(ಲಕ್ಷ್ಮೀ ಪ್ರತಿಮೆಗೆ ಶಂಖಕ್ಕೆ ನಿರ್ಮಾಲ್ಯ ತೀರ್ಥ ಕೊಡುವುದು)

ಬಳಿತ್ಥಾಸೂಕ್ತ (ಪ್ರಾಣದೇವರಿಗೆ ಅಭಿಷೇಕ)
ಓಂ ಬಳಿತ್ಥಾ ತದ್ವಪುಷೇ ಧಾಯಿ ದರ್ಶತಂ ದೇವಸ್ಯ ಭರ್ಗಃ ಸಹಸೋ ಯತೋ ಜನಿ
ಯದೀಮುಪಹ್ವರತೇ ಸಾಧತೇ ಮತಿಋತಸ್ಯ ಧೇನಾ ಅನಯಂತ ಸಸ್ರುತಃ
ಪೃಕ್ಷೋ ವಪುಃ ಪಿತುಮಾನ್ ನಿತ್ಯ ಆಶಯೇ ದ್ವಿತೀಯ ಮಾ ಸಪ್ತಶಿವಾಸು ಮಾತೃಷು
ತೃತೀಯಮಸ್ಯ ವೃಷಭಸ್ಯ ದೋಹಸೇ ದಶಪ್ರಮತಿಂ ಜನಯಂತ ಯೋಷಣಃ
ನಿರ್ಯದೀಂ ಬುಧ್ನಾನ್ ಮಹಿಷಸ್ಯ ವರ್ಪಸ ಈಸಾನಾಸಃ ಶವಸಾಕ್ರಂತ ಸೂರಯಃ
ಯದೀಮನು ಪ್ರದೀವೋ ಮಧ್ವ ಆಧವೇ ಗುಹಾ ಸಂತಂ ಮಾತರಿಶ್ವಾ ಮಥಾಯತಿ
ಪ್ರಯತ್ಪಿತುಃ ಪರಮಾನ್ನೀಯತೇ ಪರ್ಯಾ ಪೃಕ್ಷುದೋ ವೀರುಧೋದಂಸು ರೋಹತಿ
ಉಭಾ ಯದಸ್ಯ ಜನುಷಂ ಯದಿನ್ವತ ಆದಿದ್ಯವಿಷ್ಠೋ ಅಭವದ್ ಘೃಣಾ ಶುಚಿಃ
ಆದಿನ್ಮಾತ್ರೂರಾವಿಶದ್ಯಾ ಸ್ವಾ ಶುಚಿರಹಿಂಸ್ಯಮಾನ ಉರ್ವಿಯಾವಿವಾವೃಧೇ
ಅನು ಯತ್ಪೂರ್ವಾ ಅರುಹತ್ ಸನಾಜುವೋ ನಿ ನವ್ಯಸೀಷ್ವವರಾಸು ಧಾವತೇ

(ಪ್ರಾಣದೇವರಿಗೆ ಅಭಿಷೇಕದ ನಂತರ ತೀರ್ಥವನ್ನು ಪಂಚಪಾತ್ರೆಯಲ್ಲಿ ತೆಗದಿಟ್ಟುಕೊಂಡು ನಿರ್ಮಾಲ್ಯ ತೀರ್ಥ ಕೊಡುವುದು. ದೇವರ ತೀರ್ಥ ತೆಗದುಕೊಂಡ ನಂತರ ಪ್ರಾಣದೇವರ ತೀರ್ಥ ತೆಗದುಕೊಳ್ಳಬೇಕು)

ಶ್ರೀ ರಾಘವೇಂದ್ರ ಸ್ತೋತ್ರ (ರಾಯರಿಗೆ ಅಭಿಷೇಕ)
ಶ್ರಿ ಪೂರ್ಣಭೋದಗುರುತೀರ್ಥ ಪಯೋಬ್ದಿಪಾರಾ …………….

ಅಥ ಷೋಡಶೋಪಚಾರಾದಿ ಮಹಾಪೂಜಾ
ಮಂಟಪಧ್ಯಾನಂ
ಓಂ ಉತ್ತಪ್ತೋಜ್ವಲಕಾಂಚನೇನ ರಚಿತಂ ತುಂಗಾಂಗರಂಗಸ್ಥಲಂ
ಶುದ್ಧಸ್ಫಾಟಿಕ ಭಿತ್ತಿಕಾ ವಿಲಸಿತೈಃ ಸ್ತಂಭೈಶ್ಚ ಹೇಮೈಶುಭೈಃ
ದ್ವಾರೈಶ್ಚಾಮರ ರತ್ನರಾಜ ಖಚಿತೈಃ ಶೋಭಾವಹಂ ಮಂಡಿತೈಃ
ತತ್ರಾನ್ಯೈರಪಿ ಶಂಖಪದ್ಮ ಧವಲೈಃ ಪ್ರಭ್ರಾಜಿತಂ ಸ್ವಸ್ತಿಕೈಃ
ಮುಕ್ತಜಾಲ ವಿಲಂಬಿ ಮಂಟಪಯುತಂ ವಜ್ರೈಶ್ಚ ಸೋಪಾನಕೈಃ
ನಾನಾರತ್ನ ವಿನಿರ್ಮಿತೈಶ್ಚ ಕಲಶೈರತ್ಯಂತ ಶೋಭಾವಹಂ
ಮಾಣಿಕ್ಯೋಜ್ವಲ ದೀಪ ದೀಪ್ತಿ ವಿಲಸಲ್ಲಕ್ಷ್ಮೀ ವಿಲಾಸಾಸ್ಪದಂ
ಧ್ಯಾಯೇನ್ಮಂಟಪಮರ್ಚನೇಷು ಸಕಲೈರೇವಂವಿಧೈಃ ಸಾಧಕೈಃ
ಸಮ್ಮಾರ್ಜನೈ ರಂಗವಲ್ಲೀ ಧ್ವಜಕೇತಕ ತೋರಣೈಃ
ಏತಾನೈರಿಕ್ಷುಕದಲೀ ಪೂರ್ಣಕುಂಭಾಂಕುರಾದಿಭಿಃ
ಗೀತಾವಾದಿತ್ರ ನೃತೈಶ್ಚ ಪುರಾಣಪಠನೈಃ ಶುಭೈಃ
ಶೊಭಮಾನಂ ಮಹಾಪುಣ್ಯಂ ವರ್ಧಮಾನಂ ಮನೋಹರಂ
ಓಂ ನಿಷುಸೀದ ಗಣಪತೇ ಗಣೇಷು ತ್ವಾಮಾಹುರ್ವಿಪ್ರತಮಂ ಕವೀನಾಂ ನಋತೇ ತ್ವತ್ ಕ್ರಿಯತೇ ಕಿಂಚನಾರೇ ಮಹಾಮರ್ಕಂ ಮಘವನ್ ಚಿತ್ರಮರ್ಚ.
ಆರಾಧ್ಯಸೇ ಪ್ರಾಣಭೃತಾಂ ಪ್ರಣೇತ್ರಾ ಪ್ರಾಣಾಧಿನಾಥೇನ ಸಮೀರಣೇನ ನಾರಾಯಣ ಜ್ಞಾನಸುಖೈಕಪೂರ್ಣ ಸ್ವಾಮಿನ್ ಮಯಿ ಶ್ರೀ ರಮಣ ಪ್ರಸೀದ
ಬಿಂಬೋಽಸಿ ಪ್ರತಿಬಿಂಬೋಽಸ್ಮಿ ತವ ಯದ್ಯಪಿ ಚಾಂತರಂ
ಸ್ವಾಮಿನ್ ನಿರ್ದೋಷ ಮದ್ದೋಷಂ ವಿರೇಚಯ ನಮೋಽಸ್ತುತೇ
ಭಗವನ್ ಯನ್ ಮಯಾ ಕರ್ಮ ಶುಭಂ ಕಾರಯಸೇ ಪ್ರಭೋ
ತತ್ ಸರ್ವಂ ವಿಷ್ಣುಪೂಜಾಸ್ತು ತವ ದೇವ ಪ್ರಸಾದತಃ

ಆಚಮನ, ಪ್ರಾಣಾಯಾಮ, ಸಂಕಲ್ಪ

ಶುಭೇ ಶೋಭನೇ ಮುಹೂರ್ತೇ ವಿಷ್ಣೋರಾಜ್ಞಯಾ ಪ್ರವರ್ತಮಾನಸ್ಯ ಅದ್ಯಬ್ರಹ್ಮಣಃ ದ್ವಿತೀಯಪರಾರ್ಧೇ ಶ್ವೇತವರಾಹಕಲ್ಪೇ ವೈವಸ್ವತಮನ್ವಂತರೇ ಅಷ್ಟಾವಿಂಶಿತಿತಮೇ ಕಲಿಯುಗೇ ಪ್ರಥಮಪಾದೇ ಜಂಬೂದ್ವೀಪೇ ಭರತವರ್ಷೇ ಭರತಖಂಡೇ ದಂಡಕಾರಣ್ಯೇ ಗೋದಾವರ್ಯಾಃ ದಕ್ಷಿಣೇ ತೀರೇ ಶಾಲಿವಾಹನಶಕೇ ಬೌದ್ಧಾವತಾರೇ ರಾಮಕ್ಷೇತ್ರೇ ಅಸ್ಮಿನ್ ವರ್ತಮಾನೇ ಚಾಂದ್ರಮಾನೇನ ——— ಸಂವತ್ಸರೇ —– ಆಯನೇ —- ಋತೌ —- ಮಾಸೇ —- ಪಕ್ಷೇ —- ತಿಥೌ —- ವಾಸರಯುಕ್ತಾಯಾಂ —- ನಕ್ಷತ್ರ —- ಯೋಗ —– ಕರಣ ಏವಂಗುಣವಿಶೇಷಣ ವಿಶಿಷ್ಟಾಯಾಂ ಶುಭತಿಥೌ ಅಮ ಆತ್ಮನಃ ಶೃತಿ ಸ್ಮೃತಿ ಪುರಾಣೋಕ್ತ ಫಲಪ್ರಾಪ್ತ್ಯರ್ಥಂ ಜ್ಞಾತಾಜ್ಞಾತ ದೋಷ ಪರಿಹಾರಾರ್ಥಂ ಅಸ್ಯಾಂ ಮಹಾನದ್ಯಾಂ ಶಾಲಗ್ರಾಮ ಚಕ್ರಾಂಕಿತ ಸನ್ನಿಧೌ ಬ್ರಾಹ್ಮಣ ಸನ್ನಿಧೌ ಭಾಗೀರಥ್ಯಾದಿ ಸಾರ್ಧತ್ರಿಕೋಟ ದೇವತಾ ಸನ್ನಿಧೌ ಭಾರತೀರಮಣಮುಖ್ಯಪ್ರಾಣಾಂತರ್ಗತ ಶ್ರೀ ಲಕ್ಷ್ಮೀನಾರಾಯಣ ಪ್ರೇರಣಯಾ ಶ್ರೀ ಲಕ್ಷ್ಮೀನಾರಾಯಣ ಪ್ರೀತ್ಯರ್ಥಂ ಭಗವತೋ ವೀರ್ಯೇಣ ಭಗವತೋ ಬಲೇನ ಭಗವತಸ್ತೇಜಸಾ ಭಗವತಃ ಕರ್ಮಣಾ ಭಗವತಾ ಪ್ರೇರಿತೋಹಂ ಭಗವತೋ ಲಕ್ಷ್ಮೀನಾರಾಯಣಸ್ಯ ಯಥಾಮಿಲಿತೋಪಚಾರದ್ರವ್ಯೈಃ ಧಾನಾವಾಹನಾದಿ ಷೋಡಶೋಪಚಾರ ಪೂಜಾಂ ಕರಿಷ್ಯೇ.
(ಈ ಸಂಕಲ್ಪವನ್ನು ನೀರಿರುವ ಪಾತ್ರೆಯನ್ನು ಮುಟ್ಟಿಕೊಂಡು ಅಥವಾ ಎಡಗೈಯನ್ನು ಬಲಗೈಯಿಂದ ಮುಚ್ಚಿ ಬಲತೊಡೆಯ ಮೇಲಿಟ್ಟುಕೊಂಡು ಮಾಡಬೇಕು)

ಅಥ ಕಲಶ ಪೂಜಾ
(ತಟ್ಟೆಯಲ್ಲಿ ಒಟ್ಟು ೫ ಅಥವಾ ೨ ಕಲಶಗಳನ್ನು ಇಟ್ಟು, ಗಂಧೋದಕ-ಸ್ವಾದೂದಕಗಳನ್ನಿಟ್ಟು ಕಲಶಗಳ ನಾಲ್ಕು ದಿಕ್ಕಿಗೂ ಗಂಧಾಕ್ಷತೆ ಹಚ್ಚಿ, ತುಳಸೀದಳ ಹಾಕಿ ಪೂಜಿಸುವುದು)
ಓಂ ಆ ಕಲಶೇಷು ಧಾವತಿ ಪವಿತ್ರೇ ಪರಿಷಿಚ್ಯತೇ ಉಕ್ಥೈರ್ಯಜ್ಞೇಷು ವರ್ಧತೇ (ಈ ಮಂತ್ರದಿಂದ ಕಲಶಗಳಲ್ಲಿ ತುಳಸೀದಳ ಹಾಕಬೇಕು)

(ನಂತರ ಸ್ನಾನೀಯ ಕಲಶವನ್ನು ಸ್ಪರ್ಶಿಸುತ್ತಾ ಈರೀತಿ ಹೇಳಬೇಕು)
ಓಂ ಕಲಶಸ್ಯ ಮುಖೇ ವಿಷ್ಣುಃ ಕಂಠೇ ರುದ್ರಃ ಸಮಾಶ್ರಿತಃ
ಮೂಲೇ ತತ್ರ ಸ್ಥಿತೋ ಬ್ರಹ್ಮಾ ಮಧ್ಯೇ ಮಾತೃಗಣಾಃ ಸ್ಮೃತಾಃ
ಕುಕ್ಷೌತು ಸಾಗರಾಃ ಸಪ್ತ ಸಪ್ತದ್ವೀಪಾ ವಸುಂಧರಾ
ಋಗ್ವೇದೋಽಥ ಯಜುರ್ವೇದಃ ಸಾಮವೇದೋ ಹ್ಯಥರ್ವಣಃ
ಅಂಗೈಶ್ಚ ಸಹಿತಾಃ ಸರ್ವೇ ಕಲಶಂ ತು ಸಮಾಶ್ರಿತಾಃ
ಅತ್ರ ಗಾಯತ್ರೀ ಸಾವಿತ್ರೀ ಶಾಂತಿಃ ಪುಷ್ಟಿಕರೀ ತಥಾ
ಆಯಾಂತು ದೇವಪೂಜಾರ್ಥಂ ದುರಿತಕ್ಷಯ ಕಾರಕಾಃ
ಸರ್ವೇ ಸಮುದ್ರಾಃ ಸರಿತಸ್ತೀರ್ಥಾನಿ ಜಲದಾ ನದಾಃ
ಆಯಾಂತು ದೇವಪೂಜಾರ್ಥಂ ಅಭಿಷೇಕಾರ್ಥಮಾದರಾತ್
ಗಂಗೇಚ ಯಮುನೇ ಚೈವ ಗೋದಾವರೀ ಸರಸ್ವತೀ
ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು
ಓಂ ಇಮಂ ಮೇ ಗಂಗೇ ಯಮುನೇ ಸರಸ್ವತೀ ಶತುದ್ರಿಸ್ತೋಮಂ ಸಚತಾ ಪರುಷ್ಣ್ಯಾ ಅಸಿಕ್ನ್ಯಾ ಮರುಧ್ವೃದೇ ವಿತಸ್ತಯಾರ್ಜಿಕೀಯೇ ಶೃಣುಹ್ಯಾ ಸುಷೋಮಯಾ
ನಿರ್ವೀಷೀಕರಣಾರ್ಥಂ ತಾಕ್ಷ್ಯಮುದ್ರಾಂ ಪ್ರದರ್ಶಯಾಮಿ
ಅಮೃತೀಕರಣಾರ್ಥಂ ಧೇನುಮುದ್ರಾಂ ಪ್ರದರ್ಶಯಾಮಿ
ಪವಿತ್ರೀಕರಣಾರ್ಥಂ ಶಂಖಮುದ್ರಾಂ ಪ್ರದರ್ಶಯಾಮಿ
ದಿಗ್ಬಂಧನಾರ್ಥಂ ಗದಾಮುದ್ರಾಂ ಪ್ರದರ್ಶಯಾಮಿ
ಸಂರಕ್ಷಣಾರ್ಥಂ ಚಕ್ರಮುದ್ರಾಂ ಪ್ರದರ್ಶಯಾಮಿ
ಸ್ನಾನೀಯ ಕಲಶೇ ಅಜಾದಿ ಶತಕಲಾ ಸಹಿತಂ ಶ್ರೀ ಲಕ್ಷ್ಮೀನಾರಾಯಣಂ ಸೂರ್ಯಮಂಡಲಾದಾವಾಹಯಾಮಿ ಪೂರ್ಣಕುಂಭೇ ಶಿಂಶುಮಾರಾದಿ ಶತಕಲಾ ಸಹಿತಂ ಶ್ರೀ ಲಕ್ಷ್ಮೀನಾರಾಯಣಂ ಸೂರ್ಯಮಂಡಲಾದಾವಾಹಯಾಮಿ
ಓಂ ಓಂ ನಮೋ ನಾರಾಯಣಾಯ ಓಂ ( ೧೨ ಬಾರಿ ಜಪಿಸಬೇಕು ಕಲಶವನ್ನು ಮುಟ್ಟಿ)
ಆವಾಹಿತ ಕಲಶ ದೇವತಾಭ್ಯೋಂ ನಮಃ ಆವಾಹಯಾಮಿ ಆಸನಂ ಸಮರ್ಪಯಾಮಿ ಅರ್ಘ್ಯಂ ಸಮರ್ಪಯಾಮಿ ಪಾದ್ಯಂ ಸಮರ್ಪಯಾಮಿ ಆಚಮನಂ ಸಮರ್ಪಯಾಮಿ ಮಧುಪರ್ಕಂ ಸಮರ್ಪಯಾಮಿ ಸ್ನಾನಂ ಸಮರ್ಪಯಾಮಿ ವಸ್ತ್ರಂ ಸಮರ್ಪಯಾಮಿ ಯಜ್ಞೋಪವೀತಂ ಸಮರ್ಪಯಾಮಿ ಆಭರಣಾನಿ ಸಮರ್ಪಯಾಮಿ ಗಂಧಾಕ್ಷತಾನ್ ಸಮರ್ಪಯಾಮಿ ತುಳಸೀಪುಷ್ಪಾಣಿ ಸಮರ್ಪಯಾಮಿ ಧೂಪಂ ಆಘ್ರಾಪಯಾಮಿ ದೀಪಂ ದರ್ಶಯಾಮಿ ನೈವೇದ್ಯಂ ಸಮರ್ಪಯಾಮಿ ಆರ್ತಿಕ್ಯಂ ದರ್ಶಯಾಮಿ ಮಂತ್ರಪುಷ್ಪಂ ಸಮರ್ಪಯಾಮಿ
ಸರ್ವಕ್ಷೇತ್ರ ಮಯೋ ಯಸ್ಮಾತ್ ಸರ್ವತೀರ್ಥ ಮಯೋ ಯತಃ
ಅತೋ ಹರಿಪ್ರಿಯೋಸಿ ತ್ವಂ ಪೂರ್ಣಕುಂಭ ನಮೋಸ್ತು ತೇ
ಅನೇನ ಕಲಶ ದೇವತಾರಾಧನೇನ ಭಗವಾನ್ ಲಕ್ಷ್ಮೀನಾರಾಯಣಃ ಪ್ರಿಯತಾಂ

ಅಥ ಶಂಖಪೂಜಾ
(ಪೂಜೆಮಾಡಿದ ಪ್ರತ್ಯೇಕವಾದ ಕಲಶೋದಕದಿಂದ ಶಂಖವನ್ನು ತುಂಬಿ, ತುಳಸೀಗಳನ್ನು ಇಟ್ಟು ಗಂಧಾಕ್ಷತೆ ಹಚ್ಚಿ ಗರುಡಮುದ್ರೆ ಮುಂತಾದುವನ್ನು ತೋರಿಸಿ ಪ್ರಾರ್ಥಿಸಬೇಕು)
ತ್ವಂ ಪುರಾ ಸಾಗರೋತ್ಪನ್ನೋ ವಿಷ್ಣುನಾ ವಿಧೃತಃ ಕರೇ
ನಮಿತಃ ಸರ್ವದೇವೈಶ್ಚ ಪಾಂಚಜನ್ಯ ನಮೋಽಸ್ತು ತೇ
ಶಂಖಾದೌ ಚಂದ್ರ ದೈವತ್ಯಂ ಮಧ್ಯೇ ವರುಣ ದೈವತಂ
ಪೃಷ್ಠೇ ಪ್ರಜಾಪತಿಂ ವಿದ್ಯಾದ್ ಅಗ್ರೇ ಗಂಗಾ ಸರಸ್ವತೀ
ತ್ರೈಲೋಕ್ಯೇ ಯಾನಿ ತೀರ್ಥಾನಿ ವಾಸುದೇವಸ್ಯ ಚಾಜ್ಞಯಾ
ಶಂಖೇತಿಷ್ಠಂತಿ ವಿಪ್ರೇಂದ್ರ ತಸ್ಮಾಚ್ಛಂಖಂ ಪ್ರಪೂಜಯೇತ್
ಓಂ ಪಾಂಚಜನ್ಯಾಯ ವಿದ್ಮಹೇ ಮಹಾದರಾಯ ಧೀಮಹಿ ತನ್ನಃ ಶಂಖಃ ಪ್ರಚೋದಯಾತ್ (ಶಂಖವನ್ನು ಮುಟ್ಟೀ ಮೂರಿ ಬಾರಿ ಹೇಳಬೆಕು)
ಶಂಖ ದೇವತಾಭ್ಯೋ ನಮಃ ಧ್ಯಾನಂ ಸಮರ್ಪಯಾಮಿ ಆಸನಂ ಸಮರ್ಪಯಾಮಿ ಅರ್ಘ್ಯಂ ಸಮರ್ಪಯಾಮಿ ಪಾದ್ಯಂ ಸಮರ್ಪಯಾಮಿ ಆಚಮನಂ ಸಮರ್ಪಯಾಮಿ ಮಧುಪರ್ಕಂ ಸಮರ್ಪಯಾಮಿ ಸ್ನಾನಂ ಸಮರ್ಪಯಾಮಿ ವಸ್ತ್ರಂ ಸಮರ್ಪಯಾಮಿ ಯಜ್ಞೋಪವೀತಂ ಸಮರ್ಪಯಾಮಿ ಆಭರಣಾನಿ ಸಮರ್ಪಯಾಮಿ ಗಂಧಾಕ್ಷತಾನ್ ಸಮರ್ಪಯಾಮಿ ತುಳಸೀಪುಷ್ಪಾಣಿ ಸಮರ್ಪಯಾಮಿ ಧೂಪಂ ಆಘ್ರಾಪಯಾಮಿ ದೀಪಂ ದರ್ಶಯಾಮಿ ನೈವೇದ್ಯಂ ಸಮರ್ಪಯಾಮಿ ಆರ್ತಿಕ್ಯಂ ದರ್ಶಯಾಮಿ ಮಂತ್ರಪುಷ್ಪಂ ಸಮರ್ಪಯಾಮಿ
ಅನೇನ ಶಂಖ ಪೂಜನೇನ ಭಗವಾನ್ ಲಕ್ಷ್ಮೀನಾರಾಯಣಃ ಪ್ರಿಯತಾಂ

ಪೀಠಪೂಜೆ
ಓಂ ವಿಷ್ಣೋರಾಸನ ಭೂತಾಯ ದಿವ್ಯರತ್ನ ಮಯಾಯ ಚ ! ಪ್ರಧಾನ ಪುರುಷೇಶಾಯ ಮಹಾಪೀಠಾಯ ತೇ ನಮಃ

ಷೋಡಶೋಪಚಾರ ಪೂಜಾ
ಓಂ ನಾರಾಯಣಾಯ ಧ್ಯಾನಂ ಸಮರ್ಪಯಾಮಿ, ಲಕ್ಷ್ಮೀ ಹಸ್ತೇನ ಅರ್ಘ್ಯಂ ಸಮರ್ಪಯಾಮಿ, ಸರಸ್ವತೀ ಹಸ್ತೇನ ಪಾದ್ಯಂ ಸಮರ್ಪಯಾಮಿ, ರತಿ ಹಸ್ತೇನ ಆಚಮನೀಯಂ ಸಮರ್ಪಯಾಮಿ, ಪಿತಾಮಹ ಹಸ್ತೇನ ಮಧುಪರ್ಕಂ ಸಮರ್ಪಯಾಮಿ, ಶಾಂತಿ ಹಸ್ತೇನ ಪುನರಾಚಮನಂ ಸಮರ್ಪಯಾಮಿ, ವರುಣ ಹಸ್ತೇನ ಸ್ನಾನೀಯಂ ಸಮರ್ಪಯಾಮಿ
(ಮುಂದೆ ಪುರುಷಸೂಕ್ತ ಪಠಿಸುತ್ತಾ ಶಾಲಗ್ರಾಮ, ಚಕ್ರಾಂಕಿತ, ಸುದರ್ಶನ, ವಿಷ್ಣುಪಾದ, ಪ್ರತಿಮೆ ಗಳಿಗೆ ಕಲಶೋದಕದಿಂದ ಶಂಖದಿಂದ ಅಭಿಷೇಕ ಮಾಡಬೇಕು, ಇದೇ ದೇವರ ತೀರ್ಥ)

ಓಂ ಸಹಸ್ರಶೀರ್ಷಾ ಪುರುಷಃ ಸಹಸ್ರಾಕ್ಷಸ್ಸಹಸ್ರಪಾತ್ ಸ ಭೂಮಿಂ ವಿಶ್ವತೋ ವೃತ್ವಾ ಅತ್ಯತಿಷ್ಠದ್ದಶಾಂಗುಲಂ
ಪುರುಷ ಏವೇದಂ ಸರ್ವಂ ಯದ್ಭೂತಂ ಯಚ್ಛಭವ್ಯಂ ಉತಾಮೃತತ್ವಸ್ಯೇಶಾನೋ ಯದನ್ನೇನಾತಿರೋಹತಿ
ಏತಾವಾನಸ್ಯ ಮಹಿಮಾಽತೋ ಜ್ಯಾಯಾಂಶ್ಚ ಪೂರುಷಃ ಪಾದೋಽಸ್ಯ ವಿಶ್ವಾ ಭೂತಾನಿ ತ್ರಿಪಾದಾಸ್ಯಾಮೃತಂ ದಿವಿ
ತ್ರಿಪಾದೂರ್ಧ್ವ ಉದೈತ್ ಪುರುಷಃ ಪಾದೋಽಸ್ಯೇಹಾಭವತ್ ಪುನಃ ತತೋ ವಿಷ್ವಜ಼್ ವ್ಯಕ್ರಾಮತ್ ಸಾಶನಾನಶನೇ ಅಭಿ
ತಸ್ಮಾದ್ವಿರಾಡಜಾಯತ ವಿರಾಜೋ ಅಧಿ ಪೂರುಷಃ ಸ ಜಾತೋ ಅತ್ಯರಿಚ್ಯತ ಪಶ್ಚಾದ್ಭೂಮಿಮಥೋ ಪುರಃ
ಯತ್ಪುರುಷೇಣ ಹವಿಷಾ ದೇವಾ ಯಜ್ಞಮತನ್ವತ ವಸಂತೋ ಅಸ್ಯಾಸೀದಾಜ್ಯಂ ಗ್ರೀಷ್ಮ ಇಧ್ಮಃ ಶರದ್ಧವಿಃ
ತಂ ಯಜ್ಞಂ ಬರ್ಹಿಷಿ ಪ್ರೌಕ್ಷನ್ ಪುರುಷಂ ಜಾತಮಗ್ರತಃ ತೇನ ದೇವಾ ಅಯಜಂತ ಸಾಧ್ಯಾ ಋಷಯಶ್ಚ ಯೇ
ತಸ್ಮಾದ್ ಯಜ್ಞಾತ್ ಸರ್ವಹುತಃ ಸಂಭೃತಂ ಪೃಷದಾಜ್ಯಂ ಪಶೂಂಸ್ತಾಂಶ್ಚಕ್ರೇ ವಾಯವ್ಯಾನಾರಣ್ಯಾನ್ ಗ್ರಾಮ್ಯಾಶ್ಚ ಯೇ
ತಸ್ಮಾತ್ ಯಜ್ಞಾತ್ ಸರ್ವಹುತಃ ಋಚಸ್ಸಾಮಾನಿ ಜಜ್ಞಿರೇ ಛಂದಾಂಸಿ ಜಜ್ಞಿರೇ ತಸ್ಮಾತ್ ಯಜುಸ್ತಸ್ಮಾದಜಾಯತ
ತಸ್ಮಾ ದಶ್ವಾ ಅಜಾಯಂತ ಯೇ ಕೇ ಚೋಭಯಾದತಃ ಗಾವೋ ಹ ಜಜ್ಞಿರೇ ತಸ್ಮಾತ್ ತಸ್ಮಾಜ್ಜಾತಾ ಅಜಾವಯಃ
ಯತ್ಪುರುಷಂ ವ್ಯದಧುಃ ಕತಿಧಾ ವ್ಯಕಲ್ಪಯನ್ ಮುಖಂ ಕಿಮಸ್ಯ ಕೌ ಬಾಹೂ ಕಾ ಊರೂ ಪಾದಾ ಉಚ್ಯೇತೇ
ಬ್ರಾಹ್ಮಣೋಽಸ್ಯ ಮುಖಮಾಸೀತ್ ಬಾಹೂ ರಾಜನ್ಯಃ ಕೃತಃ ಊರೂ ತದಸ್ಯ ಯದ್ವೈಶ್ಯಃ ಪದ್ಭ್ಯಾಂ ಶೂದ್ರೋ ಅಜಾಯತ
ಚಂದ್ರಮಾ ಮನಸೋ ಜಾತಶ್ಚಕ್ಷೋಃ ಸೂರ್ಯೋ ಅಜಾಯತ ಮುಖಾದಿಂದ್ರಶ್ಚಾಗ್ನಿಶ್ಚ ಪ್ರಾಣಾದ್ವಾಯುರಜಾಯತ
ನಾಭ್ಯಾ ಆಸೀದಂತರಿಕ್ಷಂ ಶೀರ್ಷ್ಣೋ ದ್ಯೌಸ್ಸಮವರ್ತತ ಪದ್ಭ್ಯಾಂ ಭೂಮಿರ್ದಿಶಃ ಶ್ರೋತ್ರಾತ್ ತತಾ ಲೋಕಾಂ ಅಕಲ್ಪಯನ್
ಸಪ್ತಾಸ್ಯಾಸನ್ ಪರಿಧಯಃ ತ್ರಿಸ್ಸಪ್ತ ಸಮಿಧಃ ಕೃತಾಃ ದೇವಾ ಯದ್ಯಜ್ಞಂ ತನ್ವಾನಾಃ ಅಬಧ್ನನ್ ಪುರುಷಂ ಪಶುಂ
ಯಜ್ಞೇನ ಯಜ್ಞಮಯಜಂತ ದೇವಾಸ್ತಾನಿ ಧರ್ಮಾಣಿ ಪ್ರಥಮಾನ್ಯಾಸನ್ ತೇ ಹ ನಾಕಂ ಮಹಿಮಾನಃ ಸಚಂತೇ ಯತ್ರ ಪೂರ್ವೇ ಸಾಧ್ಯಾಃ ಸಂತಿ ದೇವಾಃ

(ಅಭಿಷೇಕದ ನಂತರ ಶಾಲಗ್ರಾಮಗಳ ಮೇಲೆ ತುಳಸೀ ಏರಿಸುವುದು. ಶಾಲಗ್ರಾಮಗಳನ್ನು ಬಟ್ಟೆಯಿಂದ ಒರಿಸಬಾರದು, ಪ್ರತಿಮೆಗಳನ್ನು ಒರಿಸಬಹುದು)
ಓಂ ನಮೋ ನಾರಾಯಣಾಯ ಮಹಾಭಿಷೇಕ ಸ್ನಾನಂ ಸಮರ್ಪಯಾಮಿ ವಸ್ತ್ರಯುಗಂ ಸಮರ್ಪಯಾಮಿ ಕೌಸ್ತುಭಾದ್ಯಾಭರಣಾನಿ ಸಮರ್ಪಯಾಮಿ ಚಕ್ರಾದ್ಯಾಯುಧಾನಿ ಸಮರ್ಪಯಾಮಿ ಯಜ್ಞೋಪವೀತಂ ಸಮರ್ಪಯಾಮಿ ಗಂಧಾನ್ ಸಮರ್ಪಯಾಮಿ ಅಕ್ಷತಾನ್ ಸಮರ್ಪಯಾಮಿ ತುಳಸೀದಳ ಸಹಿತ ದೂರ್ವಾದಿ ನಾನಾವಿಧ ಪರಿಮಳ ಪುಷ್ಪಾಣಿ ಸಮರ್ಪಯಾಮಿ
(ನಂತರ ಕೇಶವಾದಿ ಚತುರ್ವಿಂಶತಿ ನಾಮಗಳಿಂದ ತುಳಸಿಯನ್ನು ಏರಿಸಬೇಕು)

ಧೂಪ
ವನಸ್ಪತ್ಯುದ್ಭವೋ ದಿವ್ಯೋ ಗಂಧಾಡ್ಯೋ ಗಂಧ ಉತ್ತಮ
ಅಘ್ರೇಯಃ ಸರ್ವದೇವಾನಾಂ ಧೂಪೋಽಯಂ ಪ್ರತಿಗೃಹ್ಯತಾಂ
ಓಂ ನಮೋ ನಾರಾಯಣಾಯ ಧೂಪಂ ಸಮರ್ಪಯಾಮಿ

ದೀಪ
ಸಾಜ್ಯಂ ತ್ರಿವರ್ತಿಸಂಯುಕ್ತಂ ವಹ್ನಿನಾ ಯೋಜಿತಂ ಮಯಾ
ದೀಪಂ ಗೃಹಾಣ ದೇವೇಶ ತ್ರೈಲೋಕ್ಯತಿಮಿರಾಪಹ
ಓಂ ನಮೋ ನಾರಾಯಣಾಯ ದೀಪಂ ಸಮರ್ಪಯಾಮಿ

ನೈವೇದ್ಯ
(ದೇವರೆದುರು ಬಲಗಡೆ ನೆಲ ಸಾರಿಸಿ ಎರಡು ಮಂಡಲ ಮಾಡಿ ರಂಗೋಲಿಯಿಂದ ಶ್ರೀಕಾರ ಅಥವಾ ಓಂಕಾರ ಹಾಕಿ ಒಂದರಲ್ಲಿ ಅಡಿಗೆ ಪದಾರ್ಥಗಳನ್ನಿಟ್ಟೂ, ಮತ್ತೊಂದರಲ್ಲಿ ಹಾಲು,ಹಣ್ಣು, ತಾಂಬೂಲ ಮುಂತಾದವನ್ನಿಡಬೇಕು. ತುಳಸೀದಳದಿಂದ ತುಪ್ಪದ ಅಭಿಘಾರ ಮಾಡಿ, ತುಳಸೀದಳಗಳನ್ನು ಹಾಕಿ ಯಥಾಶಕ್ತಿ ದ್ವಾದಶ ಸ್ತೋತ್ರವನ್ನು ಪಠಿಸಬೇಕು)
ನಂತರ ಶಂಖದಲ್ಲಿ ನೀರು ತುಂಬಿ ಓಂ ನಮೋ ನಾರಾಯಣಾಯ ಎಂದು ಎಂಟಾವರ್ತಿ ಅಭಿಮಂತ್ರಿಸಿ ತಾರ್ಕ್ಷ್ಯಾದಿ ಮುದ್ರೆಗಳನ್ನು ಶಂಖಕ್ಕೆ ತೋರಿಸಿ – ಓಂ ಭೂರ್ಭುವಸ್ವಃ ತತ್ಸವಿತುರ್ವರೇಣ್ಯಂ ಭರ್ಗೋದೇವಸ್ಯ ಧೀಮಹಿ ಧಿಯೋ ಯೋ ನಃ ಪ್ರಚೋದಯಾತ್ ಎಂದು ನೈವೇದ್ಯಕ್ಕೆ ಪ್ರೋಕ್ಷಿಸಬೇಕು
ಓಂ ಅಮೃತೀಕರಣಾರ್ಥಂ ಧೇನುಮುದ್ರಾಂ ಪ್ರದರ್ಶಯಾಮಿ ಓಂ ಪವಿತ್ರೀಕರಣಾರ್ಥಂ ಶಂಖಮುದ್ರಾಂ ಪ್ರದರ್ಶಯಾಮಿ ಸಂರಕ್ಷಣಾರ್ಥಂ ಚಕ್ರಮುದ್ರಾಂ ಪ್ರದರ್ಶಯಾಮಿ ಓಂ ನಿರ್ವೀಷೀಕರಣಾರ್ಥಂ ತಾರ್ಕ್ಷ್ಯಮುದ್ರಾಂ ಪ್ರದರ್ಶಯಾಮಿ ದಿಗ್ಬಂಧನಾರ್ಥಂ ಗದಾಮುದ್ರಾಂ ಪ್ರದರ್ಶಯಾಮಿ

ಓಂ ಸತ್ಯಂ ತ್ವರ್ತೇನ ಪರಿಷಿಂಚಾಮಿ (ಎಂದು ಶಂಖದ ನೀರಿನಿಂದ ನೈವೇದ್ಯದ ಸುತ್ತಲೂ ನೀರನ್ನು ಪರಿಷೇಚಿಸಿ) ಓಂ ಅಮೃತೋಪಸ್ತರಣಮಸಿ ಸ್ವಾಹಾ ಮಹಾಲಕ್ಷ್ಮೀ ಸಮೇತಸ್ಯ ವಿಷ್ಣೋ ತೇ ದಕ್ಷಿಣೇ ಕರೇ ಅಪೋಶನಂ ದಿಯಮಾನಂ ಪಿಬದೇವ ರಮಾಪತೇ ( ಎಂದು ಶಂಖದಿಂದ ಆಪೋಶನ ಕೊಟ್ಟು ಅರ್ಘ್ಯಪಾತ್ರೆಯಲ್ಲಿ ಹಾಕಿ ಪುನಃ ನೀರು ತುಂಬಿಕೊಂಡು)
ಓಂ ಪ್ರಾಣಾಯ ಸ್ವಾಹಾ ಶ್ರೀ ಅನಿರುದ್ಧಾಯ ಇದಂ ನ ಮಮ
ಓಂ ಅಪಾನಾಯ ಸ್ವಾಹಾ ಶ್ರೀ ಪ್ರದ್ಯುಮ್ನಾಯ ಇದಂ ನ ಮಮ
ಓಂ ವ್ಯಾನಾಯ ಸ್ವಾಹಾ ಶ್ರೀ ಸಂಕರ್ಷಣಾಯ ಇದಂ ನ ಮಮ
ಓಂ ಉದಾನಾಯ ಸ್ವಾಹಾ ಶ್ರೀ ವಾಸುದೇವಾಯ ಇದಂ ನ ಮಮ
ಓಂ ಸಮಾನಾಯ ಸ್ವಾಹಾ ಶ್ರೀ ನಾರಾಯಣಾಯ ಇದಂ ನ ಮಮ
ಶ್ರೀನಿವಾಸ ನಮಸ್ತುಭ್ಯಂ ಮಹಾ ನೈವೇದ್ಯ ಮುತ್ತಮಂ
ನಿತ್ಯತೃಪ್ತ ಗೃಹಾಣೇದಂ ಕೃಪಯಾ ಭಕ್ತವತ್ಸಲ
ಶ್ರೀ ನಾರಾಯಣಾಯ ನೈವೇದ್ಯಂ ಸಮರ್ಪಯಾಮಿ (ಎಂದು ಶಂಖದಿಂದ ಅರ್ಘ್ಯೋದಕ ಸಮರ್ಪಿಸಿ ನಂತರ ತುಳಸೀದಳ ಕೈಯಲ್ಲಿ ಹಿಡಿದು ಪ್ರಾರ್ಥಿಸುವುದು)
ಮಧ್ಯೇ ಪಾನೀಯಂ ಸಮರ್ಪಯಾಮಿ
(ಕಣ್ಣೂಗಳನ್ನು ಮುಚ್ಚಿಕೊಂಡು “ಓಂ ನಮೋ ನಾರಾಯಣಾಯ” ಎಂದು ೧೦೮ ಅಥವಾ ೧೨ ಸಲ ಜಪಿಸಿ)
ಓಂ ಅಮೃತಾಪಿಧಾನಮಸಿ ಸ್ವಾಹಾ ಉತ್ತರಾಪೋಷನಂ ಸಮರ್ಪಯಾಮಿ ಹಸ್ತಪ್ರಕ್ಷಾಲನಂ ಸಮರ್ಪಯಾಮಿ ಗಂಡೂಷಂ ಸಮರ್ಪಯಾಮಿ ಮುಖವಸ್ತ್ರಂ ಸಮರ್ಪಯಾಮಿ ಪೂಗೀಫಲ ತಾಂಬೂಲಂ ಸಮರ್ಪಯಾಮಿ ಸುವರ್ಣಪುಷ್ಪಂ ಸಮರ್ಪಯಾಮಿ (ಎಂದು ಪ್ರತಿ ಸಮರ್ಪಣೆಗೆ ದೇವರ ಎಡಭಾಗದಲ್ಲಿ ಬೇರೆ ಬಟ್ಟಲಿಟ್ಟು ಅದರಲ್ಲಿ ನೀರು ಬಿಡುವುದು)

ಮಹಾಮಂಗಳಾರತಿ
ಓಂ ಅರ್ಚತ ಪ್ರಾರ್ಚತ ಪ್ರಿಯಮೇಧಾಸೋ ಅರ್ಚತ
ಅರ್ಚಂತು ಪುತ್ರಕಾ ಉತ ಪುರಂ ನ ಧೃಷ್ಣ್ವರ್ಚತ
ಶ್ರಿಯೇ ಜಾತಃ ಶ್ರಿಯ ಅನಿರಿಯಾಯ ಶ್ರಿಯಂ ವಯೋ ಜರಿತೃಭ್ಯೋದಧಾತಿ
ಶ್ರಿಯಂ ವಸಾನಾ ಅಮೃತತ್ವಮಾಯನ್ ಭವಂತಿ ಸತ್ಯಾ ಸಮಿಥಾ ಮಿತದ್ರೌ
ಶ್ರಿಯ ಏವೈನಂ ತಚ್ಛ್ರಿಯಮಾದಧಾತಿ ಸಂತತಮೃಚಾ ವಷಟ್ ಕೃತ್ಯಂ ಸಂತತೈ ಸಂಧೀಯತೇ ಪ್ರಜಯಾ ಪಶುಭಿರ್ಯ ಏವಂ ವೇದ
ಕಳ್ಯಾಣಾದ್ಭುತ ಗಾತ್ರಾಯ ಕಾಮಿತಾರ್ಥ ಪ್ರದಾಯಿನೇ
ಶ್ರಿಮದ್ವೇಂಕಟನಾಥಾಯ ಶ್ರೀನಿವಾಸಾಯ ತೇ ನಮಃ

ಮಂತ್ರಪುಷ್ಪ
(ನಂತರ ಬೊಗಸೆಯಲ್ಲಿ ಹೂವು ತುಳಸಿ ಅಕ್ಷತೆಕಾಳನ್ನು ಹಿಡಿದು)
ಓಂ ನಮೋ ಮಹಾದ್ಭ್ಯೋ ನಮೋ ಆರ್ಭಕೇಭ್ಯೋ ನಮೋ ಯುವೇಭ್ಯೋ ನಮ ಆಶಿನೇಭ್ಯಃ ಯಜಾಮದೇವಾನ್ ಯದಿ ಶಕ್ನವಾಮ ಮಾ ಜ್ಯಾಯಸಃ ಶಂಸಮಾ ವೃಕ್ಷಿ ದೇವಾಃ
ರಾಜಾಧಿರಾಜಾಯ ಪ್ರಸಹ್ಯಸಾಹಿನೇ ನಮೋ ವೈಶ್ರವಣಾಯ ಕುರ್ಮಹೇ ಸ ಮೇ ಕಾಮಾನ್ ಕಾಮ ಕಾಮಾಯ ಮಹ್ಯಂ ಕಾಮೇಶ್ವರೋ ವೈಶ್ರವಣೋ ದಧಾತು ಕುಬೇರಾಯ ವೈಶ್ರವಣಾಯ ಮಹಾರಾಜಾಯ ನಮಃ ಯೋ ವೈತಾಂ ಬ್ರಹ್ಮಣೋ ವೇದ ಅಮೃತೇನಾವೃತಾಂ ಪುರೀಂ ತಸ್ಮೈ ಬ್ರಹ್ಮಚ ಬ್ರಹ್ಮಾಚ ಆಯುಃ ಕೀರ್ತಿಂ ಪ್ರಜಾಂ ದದುಃ

ತಾಸಾಮಾವಿರಭೂಚ್ಛೌರಿಃ ಸ್ವಯಮಾನ ಮುಖಾಂಬುಜಃ
ಪೀತಾಂಬರದರಃ ಸ್ರಗ್ವೀ ಸಾಕ್ಷಾತ್ ಮನ್ಮಥ ಮನ್ಮಥಃ
ಓಂ ನಮೋ ನಾರಾಯಣಾಯ ಮಂತ್ರಪುಷ್ಪಂ ಸಮರ್ಪಯಾಮಿ ಛತ್ರಂ ಸಮರ್ಪಯಾಮಿ ಚಾಮರಂ ಸಮರ್ಪಯಾಮಿ ವ್ಯಜನಂ ಸಮರ್ಪಯಾಮಿ ದರ್ಪಣಂ ಸಮರ್ಪಯಾಮಿ ಗೀತಂ ಸಮರ್ಪಯಾಮಿ ನೃತ್ಯಂ ಸಮರ್ಪಯಾಮಿ ವಾದ್ಯಂ ಸಮರ್ಪಯಾಮಿ ಸ್ತೋತ್ರಂ ಸಮರ್ಪಯಾಮಿ ಸಮಸ್ತ ರಾಜೋಪಚಾರಾನ್ ಸಮರ್ಪಯಾಮಿ
(ಎಂದು ಅರ್ಪಿಸುವುದು)

ಶಂಖಭ್ರಮಣ
(ಶಂಖದಲ್ಲಿ ಶುದ್ಧನೀರು ಹಾಕಿಕೊಂಡು ಕೆಳಗಿನ ಮಂತ್ರದಿಂದ ದೇವರ ಪಾದದಿಂದ ಕಿರೀಟ ಪರ್ಯಂತ, ಎರಡನೆ ಸಲ ನಾಭಿಯಿಂದ ಕಿರೀಟ ಪರ್ಯಂತ, ಮೂರನೇ ಸಲ ಹೃದಯದಿಂದ ಕಿರೀಟ ಪರ್ಯಂತ, ಹೀಗೆ ಮೂರುಸಲ ಪ್ರದಕ್ಷಿಣಾಕಾರ ಮಾಡಿ ಬಟ್ಟಲಿಗೆ ಈ ನೀರನ್ನು ಹಾಕಿಕೊಳ್ಳುವುದು. ಇದೇ ತೀರ್ಥದ ಮೊದಲು ಪ್ರೋಕ್ಷಣೆಗೆ ಉಪಯೋಗಿಸುವ ಶಂಖ ತೀರ್ಥ)
ಓಂ ಇಮಾ ಆಪಃ ಶಿವತಮಾ ಇಮಾ ಸರ್ವಸ್ಯ ಭೇಷಜೀಃ
ಇಮಾ ರಾಷ್ಟ್ರಸ್ಯ ವರ್ಧನೀರಿಮಾ ರಾಷ್ಟ್ರಭೃತೋಽಮೃತಾ

(ನಂತರ ರಮಾ, ಬ್ರಹ್ಮ, ವಾಯುಗಳಿಗೆ ನಮಸ್ಕರಿಸಿ ಮೂರುಬಾರಿ ತೀರ್ಥ ಹಾಕಿ ನಿರ್ಮಾಲ್ಯ, ಗಂಧ ತುಳಸೀ ಪುಷ್ಪಗಳನ್ನು ಸಮರ್ಪಿಸಬೇಕು. ರಮಾದೇವಿಗೆ ಅರಿಷಿಣ ಕುಂಕುಮ ಸಮರ್ಪಿಸಬೇಕು. ದೇವರ ನೈವೇದ್ಯದಲ್ಲಿ ವೈಶ್ವದೇವಕ್ಕಾಗಿ ಒಂದು ಭಾಗ ತೆಗದಿಟ್ಟು ಉಳಿದುದನ್ನು ರಮೆಗೂ, ವಾಯುವಿಗೂ ಅರ್ಪಿಸಬೇಕು. ಗರುಡಾದಿಗಳಿಗೆ ಬೇರೆ ತೆಗೆದಿಟ್ಟು ಸಮರ್ಪಿಸಬೇಕು)
ರಮಾ ಬ್ರಹ್ಮದಯೋ ದೇವಾಃ ಸನಕಾದ್ಯಾಃ ಶುಕಾದಯಃ
ಶ್ರೀ ನೃಸಿಂಹ ಪ್ರಸಾದೋಯಂ ಸರ್ವೇ ಗೃಹ್ಣಂತು ವೈಷ್ಣವಾಃ

ಸಮಾಪನಂ :
ಯಸ್ಯ ಸ್ಮೃತ್ಯಾ ಚ ನಾಮೋಕ್ತ್ಯಾ ತಪಃ ಪೂಜಾಕ್ರಿಯಾದಿಷು
ನ್ಯೂನಂ ಸಂಪೂರ್ಣತಾಂ ಯಾತಿ ಸದ್ಯೋ ವಂದೇ ತಮಚ್ಯುತಂ
ಮಂತ್ರಹೀನಂ ಕ್ರಿಯಾಹೀನಂ ಭಕ್ತಿಹೀನಂ ರಮಾಪತೇ
ಯತ್ ಕೃತಂ ತು ಮಯಾ ದೇವ ಪರಿಪೂರ್ಣಂ ತದಸ್ತು ಮೇ

ಅನೇನ ಷೋಡಶೋಪಚಾರ ಪೂಜನೇನ ಭಗವಾನ್ ಭಾರತೀರಮಣಮುಖ್ಯಪ್ರಾಣಾಂತರ್ಗತ ಸವಿತೃನಾಮಕ ಶ್ರೀ ಲಕ್ಷ್ಮೀನಾರಾಯಣ ಪ್ರಿಯತಾಂ ಪ್ರೀತೋ ವರದೋ ಭವತು ಶ್ರೀ ಕೃಷ್ಣಾರ್ಪಣಮಸ್ತು.
(ಉದ್ಧರಿಣಿ ಯಿಂದ ನೀರನ್ನು ಬಿಟ್ಟು ಎರಡು ಸಲ ಆಚಮನ ಮಾಡಬೇಕು)
ಮಧ್ಯೇ ಮಂತ್ರ ತಂತ್ರ ಸ್ವರ ವರ್ಣ ಲೋಪದೋಷ ಪ್ರಾಯಶ್ಚಿತ್ತಾರ್ಥಂ ನಾಮತ್ರಯಮಂತ್ರಜಪಂ ಕರಿಷ್ಯೇ
ಅಚ್ಯುತಾಯ ನಮಃ ಅನಂತಾಯ ನಮಃ ಗೋವಿಂದಾಯ ನಮಃ (ಮೂರು ಸಲ) ಅಚ್ಯುತಾನಂತಗೋವಿಂದೇಭ್ಯೋ ನಮಃ

ಕಾಯೇನವಾಚಾ ಮನಸೇಂದ್ರಿಯೈರ್ವಾ ಬುದ್ಧ್ಯಾತ್ಮನಾ ವಾ ಅನುಸೃತ್ ಸ್ವಭಾವಂ
ಕರೋಮಿ ಯದ್ಯತ್ ಸಕಲಂ ಪರಸ್ಮೈ ನಾರಾಯಣಾಯೇತಿ ಸಮರ್ಪಯಾಮಿ

(Download the Article)

Devapooja Paddhati Kannada

 

madhwamrutha

Tenets of Madhwa Shastra

You may also like...

6 Responses

  1. Venkatesh vyasa rao says:

    Please can you post this Pooja paddathi in devanagri script.

  2. Govindraj Vijayraj Patil says:

    Nice & detailed information about pooja paddhati.

  3. Sridhar Kumsy says:

    Dear Sir.
    Please mail or post pooja paddathi to be followed on Ekadashi.
    Thanks and Regards
    Sridhar Kumsy

  4. Dr Muralidhar says:

    Kindly provide details of puja on Ekadashi.

  5. madhusudhan kandukur says:

    its a very good naration . vaishwadeva also to be added. and in the sukthas Swaras to be added.

  6. Uthra Lakshmanan says:

    Please post the paddathi in Tamil text too.

Leave a Reply

Your email address will not be published. Required fields are marked *