Dasha Paapa Hara Vratha
ದಶ (ಪಾಪ) ಹರವ್ರತ
ದಶಮೀ ಶುಕ್ಲಪಕ್ಷೇ ತು ಜೇಷ್ಟೇಮಾಸಿ ಕುಜೇಹನಿ | |
ಆವತೀರ್ಣಾ ಯತ: ಸ್ವರ್ಗಾತ್ ಹಸ್ತರ್ಕ್ಷೇ ಸರಿದ್ವರಾ ||
ಹರತೇ ದಶ ಪಾಪಾನಿ ತಸ್ಮಾದ್ ದಶಹರಾ ಸ್ಮೃತಾ ||
(ವರಾಹ ಪುರಾಣ)
ದಶಹರ ವ್ರತವು ಜೇಷ್ಟಮಾಸ ಶುಕ್ಲ ಪಕ್ಷ ಪಾಡ್ಯದಿಂದ ದಶಮಿಯವರೆಗು ೧೦ ದಿನಗಳು ಆಚರಿಸಲಾಗುತ್ತದೆ. ಶ್ರೀವಿಷ್ಣು ಪಾದಂಗುಟ ದಿಂದ ಹುಟ್ಟಿದ ಗಂಗಾದೇವಿಯು ಭಗೀರಥನ ಮಹಾ ಪ್ರಯತ್ನದಿಂದ ಭುವಿಗಿಳಿದ ಮಹಾ ಪವಿತ್ರ ದಿನ ಭಾಗೀರತಿಜಯಂತಿ ಅಥವ ಗಂಗ ಜಯಂತಿಯಂದು ಜೇಷ್ಟ ಶುಕ್ಲ ದಶಮಿಯಂದು ಆಚರಿಸಲಾಗುತ್ತದೆ.
ಈ ಹತ್ತೂ ದಿನಗಳು ಗಂಗಾನದಿ ಸ್ನಾನ ವಿಶೇಷ ಗಂಗ ಪೂಜೆಗೆ ದೊಡ್ಡ ಮಹತ್ವವಿದೆ.ಇವಾಗಿನ ಗಂಗಾಸ್ನಾನ ಅಧಿಕ ಪುಣ್ಯದಾಯಕ. ಕಾಶಿ ನಗರದ ದಶಾಶ್ವಮೇಧ ಘಟ್ಟದಲ್ಲಿ ಸ್ನಾನ ಶ್ರೇಷ್ಠ. ಇಲ್ಲಿ ಮಾಡಲಾಗದವರು ತಮಗೆ ಹತ್ತಿರವಿರುವ ನದಿಯಾಲದರು ಗಂಗಾ ನದಿಯ ಅನುಸಂದಾನ ದಿಂದ ಸ್ನಾನ ಮಾಡುವುದು ಒಂದು ರೂಢಿ.ನಿದಿಯಲ್ಲಿ ಸ್ನಾನ ಮಾಡಲಾಗದವರು, ಸ್ನಾನ ಮಾಡುವಾಗ ಗಂಗ ಸ್ತೋತ್ರ ಹೇಳಿಕೊಂಡು ಮಾಡಿದರೆ ಪುಣ್ಯ ಲಭಿಸುತ್ತದೆ.
ದಶಮಿ ದಿನದಂದು ಗಂಗಪೂಜೆ ಮಾಡಿ, ೧೦ ಜನ ದಂಪತಿಗಳಿಗೆ ವಸ್ತ್ರ ಸಹಿತ ದಕ್ಷಿಣೆ ತಾಂಬೂಲ ಕೊಟ್ಟು ಸತ್ಕರಿಸುವುದು ಈ ವ್ರತಾನಿಯಮ. ಗೋದಾನ, ತಿಲದಾನ ಹಾಗು ರವೆ ದಾನವು ಶುಭಕರ. ಹತ್ತು ಮಾಹಪಾತಕಗಳನ್ನು ನಾಶಮಾಡುವ ದಶಹರ ವ್ರತ ದಿನಕ್ಕೆ ಹತ್ತು ಯೋಗಗಳು ಬಂದರೆ ವಿಶೆಷ.
ಜೇಷ್ಟಮಾಸೆ ಸಿತೇ ಪಕ್ಷೆ ದಶಮ್ಯಾಂ ಬುಧಹಸ್ತಯೋಃ|
ವ್ಯತಿಪಾತೇ ಗರಾನಂದೇ ಕನ್ಯಾ ಚಂದ್ರೇ ವೃಷೇ ರವೌ ||
*ಜೇಷ್ಟಮಾಸ *ಶುಕ್ಲ ಪಕ್ಶ
*ದಶಮಿ *ಬುಧವಾರ
*ಹಸ್ತಾ ನಕ್ಷತ್ರ *ವ್ಯತಿಪಾತ ಯೋಗ
*ಗರಜ ಕರಣ *ಅನಂದ ಯೋಗ
*ಚಂದ್ರ ಕನ್ಯ ರಾಶಿಯಲ್ಲಿ *ಸೂರ್ಯ ವೃಶಭ ರಾಶಿಯಲ್ಲಿ
ಈ ವರ್ಷ ೨೩/೦೬/೨೦೧೮ ಗಂಗ ಜಯಂತಿ. ೫ ಯೊಗಗಳು ಬಂದಿವೆ.
ಶ್ರೀ ವಾದಿರಾಜತೀರ್ಥರ ತೀರ್ಥಪ್ರಬಂಧದ ಗಂಗ ಸ್ತೋತ್ರ :
ಗಂಗಾ ನದೀ –
ತ್ವಂ ದೀನೇಷು ದಯಾವತೀತಿ ವಿದಿತಂ ಯದ್ಬ್ರಹ್ಮಹಸ್ತಾಶ್ರಯಂ
ಪ್ರಾಪ್ತಾsಥಾಚ್ಯುತಪಾದಸಂಗಮಹಿತಾ ಪಶ್ಚಾಚ್ಚ ನಾಕಂ ಗತಾ |
ಸೌವರ್ಣಾಚಲಶೃಂಗಮೇತ್ಯ ಮುದಿತಾ ಶಂಭೋ: ಶಿರ: ಸಂಗತಾs-
ಪ್ಯಾಸ್ಮಾಕಕ್ಷಿತಿಮಂಡಲೇ ತ್ರಿಪಥಗೇ ತುಷ್ಠಾsಸ್ಯಭೀಷ್ಟಪ್ರದಾ || |
ಆದೌ ಪಾದತಲೋಧ್ರ್ವಭಾಗಮಹಸಾ ಯಾ ರಕ್ತನೀಲಾ ಹರೇ:
ಸ್ವರ್ಗಸ್ತ್ರೀಕುಚಕುಂಕುಮಾಂಕನಯನೋಪಾಂತಶ್ರಿಯಾsಭ್ಯಂತರೇ |
ಅಂತೇ ಶಂಭುಕಪರ್ದಪನ್ನಗಗಲಶ್ರೇಣೀಜ್ವಲಜ್ಜ್ಯೋತಿಷಾ
ಜನ್ಮಾರಭ್ಯ ಸರಸ್ವತೀನತನಯಾಸಂಗೇವ ಗಂಗಾsಸ್ತಿ ಸಾ ||
ಆಜ್ಞಾನಾದ್ಯದಿ ಸಜ್ಜನೇಷು ರಚಿತದ್ರೋಹಾನ್ಮಯಿ ಸ್ವರ್ಧುನಿ
ಸ್ವಸ್ಫೂತ್ರ್ಯಾ ಸುಜನೇಷು ದೂಷಣಗಣಾರೋಪಾದವಜ್ಞಾ ತವ |
ತರ್ಹಿ ತ್ವಾಂ ಸಗರಾತ್ಮಜಾಸ್ಥಿನಿಕರಾ ಜಾನಂತಿ ಕಿಂ ತೈ: ಪ್ರಭೋ:
ದ್ರೋಹ: ಕಿಂ ನ ಕೃತ: ಕಿಮಂಬ ನ ಹರಾವರೋಪಿತಾ ಚೋರತಾ ||
ಆರಭ್ಯಾಬ್ಜಜಲೋಕಮಾಕ್ಷಿತಿತಲಾದಾಯಾತಯಾ ಕಿಂ ತ್ವಯಾ
ಮಚ್ಚಿತ್ತಂ ಬಹುದೂರಮಿತ್ಯಮಲಯಾ ತ್ಯಕ್ತಂ ಭಿಯಾ ಜಾಹ್ನವಿ |
ಅಕ್ಷಯ್ಯಾಚಲತುಂಗಶೃಂಗನಿಕರಾನ್ನಿರ್ಭಿದ್ಯ ಯಾಂತೀ ಮಮ
ಸ್ವಲ್ಪಂ ಕಿಂ ಬಹು ಮನ್ವಸೇsಶುಭಕುಲಂ ಗಂಗೇsಂತರಂಗೇ ಚಲಂ ||
ಅಸ್ಥಿಸ್ಪರ್ಶನಮಾತ್ರತ: ಕಿಮು ತವ ಶ್ರೇಯ:ಪ್ರದತ್ವಂ ಗತಂ
ವಿಸ್ತೀರ್ಣಾ ನ ಕಿಮಚ್ಯುತಸ್ಯ ನಗರೀ ಮನ್ಮಾತ್ರದೇಶೋಜಿû್ಜತಾ |
ತದ್ವತ್ರ್ಮಾಪಿ ಸಕಂಟಕಂ ಕಿಮು ಸತಾಂ ಸಂತಾನಜೋsಹಂ ನ ಕಿಂ
ಕಸ್ಮಾದಂಬ ನ ಮೇ ಪ್ರದಾಸ್ಯಸಿ ಪದಂ ಗಂಗೇsಖಿಲಾರ್ಥಪ್ರದಂ ||
ಹೇ ಗಂಗೇ ತವ ಕೋಮಲಾಂಘ್ರಿನಲಿನಂ ರಂಭೋರು ನೀವೀಲಸತ್–
ಕಾಂಚೀದಾಮ ತನೂದರಂ ಘನಕುಚವ್ಯಾಕೀರ್ಣಹಾರಂ ವಪು: |
ಸನ್ಮುದ್ರಾಂಗದಕಂಕಣಾವೃತಕರಂ ಸ್ಮೇರಂ ಸ್ಫುರತ್ಕುಂಡಲಂ
ಸಾರಂಗಾಕ್ಷಿ ಜಲಾನ್ಯದಿಂದುರುಚಿ ಯೇ ಜಾನಂತಿ ತೇsನ್ಯೇ ಜಲಾತ್ ||
ಶ್ರೀನಾರಾಯಣರಾಮಗೋಪತಿಹೃಷೀಕೇಶಾದಿರೂಪೋsಕ್ಷಮ–
ಸ್ತ್ವಾಂ ಹಾತುಂ ಹರಿಸೂಕರಾಕೃತಿರಥ ಶ್ರೀದೇವಹೂತ್ಯಾತ್ಮಜ: |
ವೇಣೀಮಾಧವಬಿಂದುಮಾಧವತನುಸ್ತೀರೇ ವ್ಯಧತ್ತ ಸ್ಥಿತಿಂ
ಗಂಗೇ ಕಿಂ ಬಹುನಾsಧುನಾsಪಿ ವಸತಿ ತ್ವದ್ಭರ್ತೃಗೇಹೇsಪ್ಯಸೌ ||
ಗಂಗೇ ತ್ವಂ ಶುಭಸಂಚಯಸ್ಯ ಜಯದಾ ದೋಷಾತ್ಮನಾಂ ನ ತ್ವಿತಿ
ಜ್ಞಾತಂ ಯತ್ ಕ್ರತುಕೋಟ್ಯಲಭ್ಯಸುಕೃತಸ್ಯಾಭ್ಯುನ್ನತಿಂ ಯಚ್ಚಸಿ |
ದುಷ್ಕರ್ಮಾಣ್ಯಮಿತಾನಿ ದೂರಯಸಿ ಚ ತ್ವದ್ಗೇಯತೋಯೇಕ್ಷಯಾ
ಪಾನೇನಾಪ್ಯವಗಾಹನೇನ ಮನಸಾ ಧ್ಯಾನೇನ ಗಾನೇನ ವಾ ||
ಆದಿ ಶಂಕರಾಚರ್ಯರ ಗಂಗ ಸ್ತೋತ್ರ :
ದೇವಿ! ಸುರೇಶ್ವರಿ! ಭಗವತಿ! ಗಂಗೇ ತ್ರಿಭುವನತಾರಿಣಿ ತರಳತರಂಗೇ |
ಶಂಕರಮೌಳಿವಿಹಾರಿಣಿ ವಿಮಲೇ ಮಮ ಮತಿರಾಸ್ತಾಂ ತವ ಪದಕಮಲೇ || 1 ||
ಭಾಗೀರಥಿಸುಖದಾಯಿನಿ ಮಾತಸ್ತವ ಜಲಮಹಿಮಾ ನಿಗಮೇ ಖ್ಯಾತಃ |
ನಾಹಂ ಜಾನೇ ತವ ಮಹಿಮಾನಂ ಪಾಹಿ ಕೃಪಾಮಯಿ ಮಾಮಙ್ಞಾನಮ್ || 2 ||
ಹರಿಪದಪಾದ್ಯತರಂಗಿಣಿ ಗಂಗೇ ಹಿಮವಿಧುಮುಕ್ತಾಧವಳತರಂಗೇ |
ದೂರೀಕುರು ಮಮ ದುಷ್ಕೃತಿಭಾರಂ ಕುರು ಕೃಪಯಾ ಭವಸಾಗರಪಾರಮ್ || 3 ||
ತವ ಜಲಮಮಲಂ ಯೇನ ನಿಪೀತಂ ಪರಮಪದಂ ಖಲು ತೇನ ಗೃಹೀತಮ್ |
ಮಾತರ್ಗಂಗೇ ತ್ವಯಿ ಯೋ ಭಕ್ತಃ ಕಿಲ ತಂ ದ್ರಷ್ಟುಂ ನ ಯಮಃ ಶಕ್ತಃ || 4 ||
ಪತಿತೋದ್ಧಾರಿಣಿ ಜಾಹ್ನವಿ ಗಂಗೇ ಖಂಡಿತ ಗಿರಿವರಮಂಡಿತ ಭಂಗೇ |
ಭೀಷ್ಮಜನನಿ ಹೇ ಮುನಿವರಕನ್ಯೇ ಪತಿತನಿವಾರಿಣಿ ತ್ರಿಭುವನ ಧನ್ಯೇ || 5 ||
ಕಲ್ಪಲತಾಮಿವ ಫಲದಾಂ ಲೋಕೇ ಪ್ರಣಮತಿ ಯಸ್ತ್ವಾಂ ನ ಪತತಿ ಶೋಕೇ |
ಪಾರಾವಾರವಿಹಾರಿಣಿ ಗಂಗೇ ವಿಮುಖಯುವತಿ ಕೃತತರಲಾಪಾಂಗೇ || 6 ||
ತವ ಚೇನ್ಮಾತಃ ಸ್ರೋತಃ ಸ್ನಾತಃ ಪುನರಪಿ ಜಠರೇ ಸೋಪಿ ನ ಜಾತಃ |
ನರಕನಿವಾರಿಣಿ ಜಾಹ್ನವಿ ಗಂಗೇ ಕಲುಷವಿನಾಶಿನಿ ಮಹಿಮೋತ್ತುಂಗೇ || 7 ||
ಪುನರಸದಂಗೇ ಪುಣ್ಯತರಂಗೇ ಜಯ ಜಯ ಜಾಹ್ನವಿ ಕರುಣಾಪಾಂಗೇ |
ಇಂದ್ರಮುಕುಟಮಣಿರಾಜಿತಚರಣೇ ಸುಖದೇ ಶುಭದೇ ಭೃತ್ಯಶರಣ್ಯೇ || 8 ||
ರೋಗಂ ಶೋಕಂ ತಾಪಂ ಪಾಪಂ ಹರ ಮೇ ಭಗವತಿ ಕುಮತಿಕಲಾಪಮ್ |
ತ್ರಿಭುವನಸಾರೇ ವಸುಧಾಹಾರೇ ತ್ವಮಸಿ ಗತಿರ್ಮಮ ಖಲು ಸಂಸಾರೇ || 9 ||
ಅಲಕಾನಂದೇ ಪರಮಾನಂದೇ ಕುರು ಕರುಣಾಮಯಿ ಕಾತರವಂದ್ಯೇ |
ತವ ತಟನಿಕಟೇ ಯಸ್ಯ ನಿವಾಸಃ ಖಲು ವೈಕುಂಠೇ ತಸ್ಯ ನಿವಾಸಃ || 10 ||
ವರಮಿಹ ನೀರೇ ಕಮಠೋ ಮೀನಃ ಕಿಂ ವಾ ತೀರೇ ಶರಟಃ ಕ್ಷೀಣಃ |
ಅಥವಾಶ್ವಪಚೋ ಮಲಿನೋ ದೀನಸ್ತವ ನ ಹಿ ದೂರೇ ನೃಪತಿಕುಲೀನಃ || 11 ||
ಭೋ ಭುವನೇಶ್ವರಿ ಪುಣ್ಯೇ ಧನ್ಯೇ ದೇವಿ ದ್ರವಮಯಿ ಮುನಿವರಕನ್ಯೇ |
ಗಂಗಾಸ್ತವಮಿಮಮಮಲಂ ನಿತ್ಯಂ ಪಠತಿ ನರೋ ಯಃ ಸ ಜಯತಿ ಸತ್ಯಮ್ || 12 ||
ಯೇಷಾಂ ಹೃದಯೇ ಗಂಗಾ ಭಕ್ತಿಸ್ತೇಷಾಂ ಭವತಿ ಸದಾ ಸುಖಮುಕ್ತಿಃ |
ಮಧುರಾಕಂತಾ ಪಂಝಟಿಕಾಭಿಃ ಪರಮಾನಂದಕಲಿತಲಲಿತಾಭಿಃ || 13 ||
ಗಂಗಾಸ್ತೋತ್ರಮಿದಂ ಭವಸಾರಂ ವಾಂಛಿತಫಲದಂ ವಿಮಲಂ ಸಾರಮ್ |
ಶಂಕರಸೇವಕ ಶಂಕರ ರಚಿತಂ ಪಠತಿ ಸುಖೀಃ ತವ ಇತಿ ಚ ಸಮಾಪ್ತಃ || 14 ||
ಶ್ರೀ ಕೃಷ್ಣಾರ್ಪಣಮಸ್ತು:
Thanks a lot for the information
ಒಳ್ಳೆಯ ಸಂಗ್ರಹ.ತುಂಬಾ ಚೆನ್ನಾಗಿದೆ . ಇದೇ ರೀತಿ ಸೇವೆ ಮಾಡಲು ದೇವರು ನಿಮ್ಮ ಕೈಗಳನ್ನು ಬಲ ಪಡಿಸಲಿ ಎಂದು ಭಗವಂತ ನಲ್ಲಿ ಪ್ರಾರ್ಥನೆ