Bheemana Amavasya
ಭೀಮನ ಅಮಾವಸ್ಯ ವ್ರತವನ್ನು ಪ್ರತಿ ವರ್ಷ ಅಷಾಡ ಅಮಾವಸ್ಯ ದಿನದಂದು ಸುಮಂಗಲಿಯಲು ಹಾಗು ಮದುವೆಯಾಗಬೇಕಿರುವ ಹೆಣ್ಣು ಮಕ್ಕಳು ಆಚರಿಸುವ ಪದ್ದತಿ ಇದೆ. ಈ ಹಬ್ಬವನ್ನು ಸಾಮನ್ಯವಾಗಿ ಆಂದ್ರ ಹಾಗು ಕರ್ನಾಟಕ ಪ್ರಾಂತದ ಹೆಣ್ಣುಮಕ್ಕಳು ಸಂಭ್ರಮದಿಂದ ಆಚರಿಸುತ್ತರೆ. ಏ ವ್ರತ ಪತಿಸಂಜೀವಿನಿ ವ್ರತ ಅಥವ ಜ್ಯೋತಿಭೀಮೇಶ್ವರ ವ್ರತವೆಂದು ಕರೆಯಲಾಗುತ್ತದೆ. ಇದರ ಬಗ್ಗೆ ಸ್ಕಂದ ಪುರಾಣದಲ್ಲಿ ಉಲ್ಲೇಖ ಇದೆ. ಪಾರ್ವತಿಯ ಭಕ್ತಿಗೆ ಮೆಚ್ಚಿ, ವಾಮದೇವ ಅವಳನ್ನು ಪತ್ನಿಯಾಗಿ ಸ್ವೀಕರಿಸುವ ದಿನ ಎಂದು ನಂಬಲಾಗುತ್ತದೆ.
ವ್ರತೋಧೇಶ : ಗಂಡನ ಹಾಗು ಅಣ್ಣ ತಮ್ಮಂದಿರ ಧೀರ್ಗಾಯುಷ್ಯ ಹಾಗು ಸುಖಃಕೊಸ್ಕರ ಈ ವ್ರತಚರಣೆ ಮಾಡಲಾಗುತ್ತದೆ. ಮದುವೆಯಾದ ಹೆಣ್ಣುಮಕ್ಕಳು ೯ ವರ್ಶ ಈ ವ್ರತಾಚರಣೆ ಮಾಡುತ್ತರೆ. ಮದುವೆಯಾಗಬೇಕಿರುವ ಕನ್ಯಯರು ಒಳ್ಳೆ ಪತಿ ಸಿಗಲೆಂದು ಈ ವ್ರತ ಆಚರಿಸುತ್ತಾರೆ.
ವ್ರತ ಸಿದ್ದತೆಗಳು:
ಒಂದು ಮಣೆ ಮೇಲೆ ಅಕ್ಕಿ ಹರಡಿ. ಅದರ ಮೇಲೆ ಎರಡು ತುಪ್ಪದ ದೀಪ ಸ್ತಂಬಗಳು(ಬೆಳ್ಳಿ, ಹಿತ್ತಾಳಿ ಮಣ್ಣಿನ ಹಣತೆ) ಇಡಬೇಕು. ದೀಪಗಳು ಶಿವ ಪಾರ್ವತಿಯರ ಸಾನಿದ್ಯ ಎಂದು ಅನುಸಂದಾನ ಮಾಡಿಕೊಳ್ಳಬೇಕು. ಗನಪತಿ ಪೂಜೆಗೆ ಒಂದು ಗಣಪತಿ ವಿಗ್ರಹ ಅಥವ ಅಡಕಿ ಬೆಟ್ಟ ಇಟ್ಟಿರಬೇಕು. ನೈವೇದ್ಯಕ್ಕೆ ಮಾವಿನ ಹಣ್ಣು ಕಲ್ಲು ಸಕ್ಕರೆ, ತಾಂಬೂಲ , ಪೂಜೆಗೆ ಗೆಜ್ಜೆವಸ್ತ್ರ ,ಹೂ, ಕರ್ಪೂರ, ಗಂದ, ೯ ಅಡಿಕಿ ೯ ವೀಳ್ಯದೆಲೆ ಅರಿಷಿಣ, ಕುಂಕುಮ, ಮಂತ್ರಾಕ್ಷತೆ ಎಲ್ಲವನ್ನು ತಯಾರಿ ಮಾಡಿ ಇಟ್ಟುಕೊಂದು ಇರಬೇಕು.
ದೊರಬಂದನಕ್ಕೆ(ದಾರ ಕಟ್ಟೀಕೊಳ್ಳುವುದು) ೯ ಎಳೆ ೯ ಗಂತು ಸುಮಂಗಳಿಯರಿಗೆ ಹಾಗು ೫ ಎಳೆ ೫ ಗಂತು ದಾರ ಚಿಕ್ಕ ಹುಡುಗಿರರಿಗೆ ಅಂತ ನಿಯಮ.
ಪೂಜೆ ವಿಧಾನ:
ಗೌರಿ ಮುಂದೆ ದೀಪ ಹಚ್ಚಿ, ಒಂದು ವೀಳ್ಯದ ಎಲೆ ಮೇಲೆ, ಅರಿಷಿಣ ಹಚ್ಚಿದ ದಾರ, ದೆವರಿಗೆ ಏರಿಸುವ ಹೂ ತೆಗೆದು ಇದಿ. ಅಚಮನ ಮಾಡಬೆಕು. ಮೊದಲು ಗಣಪಥಿ ಪೂಜೆ ಮಾಡಿ(ಅರಿಷಿಣ, ಕುಂಕುಮ ಗೆಜ್ಜೆವಸ್ತ್ರ ಏರಿಸಿ, ಬೆಲ್ಲ ಅಥವ ಕಲ್ಲುಸಕ್ಕರೆ ನೆವೈವೇದ್ಯ , ಗಣಪತಿಗೆ ಮಂಗಳಾರತಿ ಮಾಡಿ).
ದೀಪದ ಕಂಬದಲ್ಲಿ ದೀಪ ಹಚ್ಚಿ, ಶಿವ ಪಾರ್ವತಿಯರನ್ನು ನೆನೆದು ಪೂಜಿಸಬೇಕು. ಶಿವ ಪಾರ್ವತಿಯರಿಗೆ ಅರಿಶಿನ, ಕುಂಕುಮ, ಬಿಡಿಹೂವು, ಗೆಜ್ಜೆವಸ್ತ್ರ, ಅಗರ್ಬಥಿ, ನೈವೆಧ್ಯ ಅರಥಿ ಸಮರ್ಪಿಸಿ. ದೇವರಿಗೆ ಎರಿಸಿದ ಹೂವಿನಲ್ಲಿ ೯ ಗಂಟು ಬರುವ ಹಾಗೆ ಕಟ್ಟಿ , ಮನೆಯಲ್ಲಿಯ ಹಿರಿ ಮುತ್ತೈದೆಯರಿಂದ ಕೈಗೆ ದಾರ ಕತ್ತಿಸಿಕೊಳ್ಳಿ. ಹಾಗೆ ಚಿಕ್ಕ ಹುಡುಗಿಯರಿಗೆ ೫ ಗಂಟು ಬರುವ ಹಾಗೆ ಕಟ್ಟಿ ಅವರಿಗು ದಾರ ಕಟ್ಟಿ. ಎಲ್ಲರು ದೇವರಿಗೆ, ಹಿರಿಯರಿಗೆ ನಮಸ್ಕಾರ ಮಾಡಬೇಕು.
ಬಂಡಾರ ಒಡೆಯುವುದು :
ಕರಿಗಡಬು ಈ ಹಬ್ಬಕ್ಕೆ ಮುಖ್ಯ ನೇವೇದ್ಯ. ಗೋದಿಹಿಟ್ಟಿನ ಕಣಕದಲ್ಲಿ ಹೂರಣ, ಒಂದಿಷ್ಟು ನಾಣ್ಯಗಳನ್ನು ತುಂಬಿ, ಮನೆಯ ಮೂಬಾಗಿಲ ಹೊಸ್ತಲ ಮೇಲೆ ಇಡಬೇಕು(ಇದನ್ನು ಬಂಡಾರ ಎನ್ನುತ್ತರೆ). ಪೂಜೆ ಮಾಡಿದವರ ಅಣ್ಣ ತಮ್ಮಂದಿರು ಬಾಗಿಲ ಹೊರಗೆ ನಿಲ್ಲುತಾರೆ. ಹುಡುಗಿಯರು ಒಳಗೆ ನಿಂತು ಬಂಡಾರಕ್ಕೆ ಅರಿಷಿಣ, ಕುಂಕುಮ ಮಂತ್ರಾಕ್ಷತೆ ಹಾಕಿ ಪೂಜೆ ಮಾಡಬೇಕು.
ಅಣ್ಣ ಅಥವ ತಮ್ಮನನ್ನು ಹೊರ ಬಾಗಿಲಲ್ಲಿ ನಿಲ್ಲಿಸಿ ಕುಂಕುಮ ವಿಟ್ಟು, ಅವರಕೈಗೆ ತಾಂಬೂಲ ದಕ್ಷಿಣೆ(ಉಡುಗೋರೆ) ಕೊಡಬೇಕು. ಅವರು ತಮ್ಮ ಮೋಣಕೈಯಿಂದ ಭಂಡಾರ ಒಡೆದು ಮನೆಯೊಳಗೆ ಬರಬೇಕು. ದೇವರಿಗೆ ಹಾಗು ಅವರಿಗೆ ಆರತಿ ಮಾಡಿ ಅವರಿಗೆ ಸಿಹಿ ಕೊಡಬೇಕು. ಸಂಜೆಗೆ ದಿವಸಿ ಗೌರಿ ಆರತಿ ಮಾಡಿ ಗೌರಿ ಹಾಡುಗಳನ್ನು ಭಕ್ತಿಯಿಂದ ಹಾಡಬೇಕು.
ಶ್ರೀ ಕೃಷ್ಣಾರ್ಪಣಮಸ್ತುಃ
EXCELLENT….🙏🙏🙏🙏