nagara chouti/naagara panchami

ನಾಗರ ಚೌತಿ ಹಬ್ಬದ ಹಿನ್ನೆಲೆ:

 

nagappa

 

ಶ್ರಾವಣ ಮಾಸ ಮಳೆಗಾಲದಲ್ಲಿ ಬರುತ್ತದೆ. ಭೂಮಿಎಲ್ಲಾ ಜಲಾವೃತ್ತ ವಾದಾಗ, ಭೂಮಿಯ ಕೆಳಗೆ ಇರುವ ಹಾವುಗಳು ಹುತ್ತದಿಂದ ಹೊರಗೆ ಬರುತ್ತವೆ. ರೈತಾಪಿಜನರನ್ನು, ಜಾನುವಾರುಗಳನ್ನು ಹಾವು ಕಡಿಯುವ ಸಂಭವ ಹೆಚ್ಚು. ಆದರಿಂದ ನಮ್ಮ ಹಿರಿಯರು ಹಾವಿಗೆ ಹಾಲೆರದು, ತಮ್ಮ ಮನೆಜನರ ಕ್ಷೇಮಕ್ಕಾಗಿ ನಾಗರಾಜನಿಗೆ ಪೂಜೆ ಸಲ್ಲಿಸುವ ಸಂಪ್ರದಾಯ ಬೆಳೆದು ಬಂದಿದೆ.   ನಾಗ ವಿಷ್ಣುವಿಗೆ ಹಾಸಿಗೆ, ಶಿವನಿಗೆ ಕಂಠಾಭರಣ, ಗಣಪತಿಗೆ ಹೊಟ್ಟೆಯ ಪಟ್ಟಿ, ಸ್ವತಃ ಭೂಭಾರವನ್ನು ಹೊತ್ತವ, ಅಸಾಧಾರಣ ಶಕ್ತಿಶಾಲಿಯಾದ ಆದಿಶೇಷ.  ವಿಶ್ವದ ಸೃಷ್ಟಿಗೆ ತೊಡಗಿದ ಶ್ರೀ ಬ್ರಹ್ಮದೇವರು ಮಾನಸ ಧ್ಯಾನದಿಂದ ಸೃಷ್ಠಿಸಿದರು. ಮರೀಚಿಯ ಮಗನೇ ಕಾಶ್ಯಪ. ದಕ್ಷ ಪುತ್ರಿಯಾದ ಕದ್ರೂ ಅವನ ಮಡದಿ. ಮರೀಚ ಪುತ್ರ ಕಾಶ್ಯಪ ಅವಳಲ್ಲಿ ಬಲಿಷ್ಠರಾದ ನಾಗರಗಳನ್ನು ಹುಟ್ಟಿಸಿದನು. ಅನಂತ ಅಥವಾ ಶೇಷ; ವಾಸುಕಿ; ಕಂಬಳ ಅಥವಾ ತಕ್ಷಕ; ಕರ್ಕೋಟಕ, ಪದ್ಮ; ಮಹಾಪದ್ಮ; ಶಂಖ ಅಥವಾ ಶಂಖಪಾಲ ಮತ್ತು ಕುಲಿಕ ಇವರೇ ಎಂಟು ಮಂದಿ ಪ್ರಧಾನ ನಾಗರು.

“ಅಗ್ನಿ ಪುರಾಣ” ಇವರ ಹೆಡೆಗಳ ಸಂಖ್ಯೆಯನ್ನು ಹೇಳುತ್ತದೆ. ಶೇಷನಿಗೆ ಮತ್ತು ವಾಸುಕಿಗೆ 1000 ತಲೆಗಳೂ; ತಕ್ಷಕ ಮತ್ತು ಕರ್ಕೋಟಕನಿಗೆ 800 ತಲೆಗಳೂ; ಪದ್ಮ ಮತ್ತು ಮಹಾಪದ್ಮನಿಗೆ 500 ತಲೆಗಳೂ; ಶಂಖಪಾಲ ಮತ್ತು ಕುಲಿಕನಿಗೆ 300 ತಲೆಗಳು.  ಇದೇ ” ಅಗ್ನಿ ಪುರಾಣ ” ಇವರನ್ನು 4 ವರ್ಣಗಳಿಗೆ ಸಂಬಂಧ ಪಟ್ಟಂತೆ 4 ಗುಂಪು ಮಾಡುತ್ತದೆ.

ವಿಪ್ರೌ ನೃಪೌ ವಿಶೌ ಶ್ರಾದ್ರೌ ದ್ವೌ ದ್ವೌ ನಾಗೇಷು ಕೀರ್ತಿತೌ ।।

ಇವರು ಕ್ರಮವಾಗಿ ಇಬ್ಬಿಬ್ಬರು ಒಂದೊಂದು ವರ್ಣಕ್ಕೆ ಸಂಬಂಧ ಪಟ್ಟವರು.

ಅನಂತ, ಕುಲಿಕ = ಬ್ರಾಹ್ಮಣ ವರ್ಣ

ವಾಸುಕಿ, ಶಂಖಪಾಲ = ಕ್ಷತ್ರೀಯ ವರ್ಣ

ತಕ್ಷಕ, ಮಹಾಪದ್ಮ = ವೈಶ್ಯ

ಪದ್ಮ – ಕರ್ಕೋಟಕ = ಶೂದ್ರ ವರ್ಣ

 

ಈ ಎಂಟು ನಾಗಗಳಿಂದ ಅನೇಕ ನಾಗ ಪ್ರಭೇದಗಳು ಬೆಳೆದು ಬಂದವು. ಇವುಗಳ  ಒಂದು ವಿಶೇಷ ಶಕ್ತಿಯೆಂದರೆ ನಮ್ಮ ಮನಸ್ಸಿನ ಭಾವನೆಗಳನ್ನು ಗ್ರಹಿಸುವ ಶಕ್ತಿ. ಅವುಗಳಿಗೆ ಕಿವಿಯಿಲ್ಲ. ನಮ್ಮ ಮಾತುಗಳನ್ನು ಕೇಳಿಸಿಕೊಳ್ಳುವ ಶಕ್ತಿ ಅವುಗಳಿಗಿಲ್ಲ. ಅದಕ್ಕೆಂದೇ ಅವುಗಳಿಗೆ ” ಚಕ್ಷುಃಶ್ರವ ” ಎಂದು  ಹೆಸರು. ಕೆಣ್ಣೆ ಕಿವಿಯಾಗಿ ಉಳ್ಳವು ಎಂದು ಅದರ ಅರ್ಥ.

 

ಪೂಜಾ ವಿಧಾನ

ಶ್ರಾವಣ ಮಾಸದ ಚೌತಿ ದಿನದಂದು ನಸುಕಿನಲ್ಲೆ ಮನೆಯ ಹೆಣ್ಣುಮಕ್ಕಳು ಎದ್ದು, ತೈಲಾಭ್ಯಂಜನ ಮಾಡುತ್ತಾರೆ.  ಮಣ್ಣಿನ ಅಥವ ಕಲ್ಲಿನ ನಾಗನಿಗೆ ಕಲ್ಲುಪ್ಪು, ಬೆಲ್ಲದ ನೀರು, ನೆನೆದ ಕಡಲಿ, ಹಸಿ ತಂಬಿತ್ತು, ಜೊಳದ ಅರಳು ಅರಿಷಿಣ ಕುಂಕುಮ ಮಂತ್ರಾಕ್ಷತೆ ಹಾಕಿ ಪೂಜಿಸುತ್ತರೆ.  ಕೇದಿಗೆ ಹಾಗು ಸಂಪಿಗೆ ಹೂ ನಾಗರಾಜನಿಗೆ ಶ್ರೇಷ್ಠ. ಈ ದಿನವೆಲ್ಲ ಉಪ್ಪು ಇಲ್ಲದ ಉಪವಾಸ ಮಾಡುತ್ತಾರೆ . ತಮ್ಮ ಅಣ್ಣಾ ತಮ್ಮಂದಿರ ಹಾಗು ಮಕ್ಕಳ ಕ್ಷೇಮಕ್ಕಾಗಿ ನಾಗನನ್ನು ಪ್ರಾರ್ಥಿಸುತ್ತಾರೆ. ಅವರವರ ಮನೆಯ ಸಂಪ್ರದಾಯದಂತೆ ಕೆಲವರು ಬರಿ ಫಲಾಹಾರ ಮಾಡುತ್ತರೆ. ಇಂದು ಹುರಿಯುವ, ಕರಿಯುವ ಯಾವುದೇ ಪದಾರ್ಥಗಳು ಮನೆಯಲ್ಲಿ ತಯಾರಿಸುವುದಿಲ್ಲ. ನಾಗಪ್ಪನಿಗೆ ಹಸಿ ಎಳ್ಳಿನ ಚಿಗಳಿ ಹಾಗು ತಂಬಿಟ್ಟು ನೈವೇದ್ಯ ಮಾಡುತ್ತಾರೆ. ಯಥಾ ಶಕ್ತಿ  ಬ್ರಾಹ್ಮಣನಿಗೆ ದಕ್ಷಿಣೆ ತಾಂಬೂಲ ಕೊಡಬೇಕು.

 

ನಾಗಪಂಚಮಿ

ಜನಮೇಜಯ ತಾನು ಮಾಡುತ್ತಿದ್ದ ಸರ್ಪಯಜ್ಞವನ್ನು ನಿಲ್ಲಿಸಿ, ಮಹಾಭಾರತ ಕೇಳಲು ಶುರುಮಾಡಿದುದು ಶ್ರಾವಣ ಶುದ್ಧ ಪಂಚಮಿ ದಿನ. ನಾಗಪಂಚಮಿ ಎಂದು ಪ್ರಸಿದ್ಧವಾದ ಈ ದಿನ ಗೋಮಯದಿಂದ ಬಾಗಿಲು ಸಾರಿಸಿ, ಚಿತ್ರಗಳನ್ನು ಬರೆದು ನೇಮದಿಂದ ನಾಗನನ್ನು ಪೂಜಿಸಬೇಕು. ಪಂಚಮಿಯಂದು ಬೆಳ್ಳಿಯ ನಾಗನಿಗೆ ಹಸಿ ಹಾಲು, ಉಪ್ಪು, ಹುರಿದ ಕಡಲಿ, ತಂಬಿಟ್ಟು, ಜೊಳದ ಅರಳು ಅರಿಷಿಣ ಕುಂಕುಮ ಮಂತ್ರಾಕ್ಷತೆ ಹಾಕಿ ಪೂಜಿಸುತ್ತಾರೆ. ಎಳ್ಳಿನ ಚಿಗಳಿ ಹಾಗು ತಂಬಿಟ್ಟು ನೈವೇದ್ಯ ಮಾಡುತ್ತಾರೆ. ಈ ನಾಗಪಂಚಮಿಯ ಆಚರಣೆಗಾಗಿ ಹೆಣ್ಣು ಮಕ್ಕಳು ಗಂಡನ ಮನೆಯಿಂದ ತವರು ಮನೆಗೆ ಹೋಗುತ್ತಾರೆ. ಹಬ್ಬಕ್ಕೆ ನಾಲ್ಕು ದಿನವಿರುವಾಗಲೇ ಅಣ್ಣ ಬಂದು ತಂಗಿಯನ್ನು ತವರಿಗೆ ಕರೆದುಕೊಂಡು ಹೋಗುವ ಸಂಪ್ರದಾಯ ಕರ್ನಾಟಕದ ಹಲವು ಭಾಗಗಳಲ್ಲಿ ಇಂದಿಗೂ ಇದೆ.

 

ಅನಂತಂ ವಾಸುಕಿಂ ಚೈವ ಕಂಬಳಂ ಚ ಮಹಾಬಲಂ ।

ಕರ್ಕೋಟಕಂ ಚ ರಾಜೇಂದ್ರ ಪದ್ಮಂ ಜಾನ್ಯಂ ಸರೀಸೃಪಮ್ ।।

ಮಹಾ ಪದ್ಮಂ ತಥ ಶಂಖಂ ಕುಲಿಕಂ ಚಾಪರಾಜಿತಂ ।

ಏತೇ ಕಶ್ಯಪದಾಯದಾಃ ಪ್ರಧಾನಾಃ ಪರಿಕೀರ್ತಿತಾಃ ।।

అనంతం వాసుకిం శేషం పద్మకంబలకౌ తథా |

తథా కార్కోటకం నాగం భుజంగశ్వతరౌ తథా ||

ధృతరాష్ట్రం శంఖపాలం కాలీయం తక్షకం తథా |

పింగలం చ మహానాగం సపత్నీకాన్ ప్రపూజయేత్ ||

अनंतं वासुकिं शॆषं पद्मकंबलकौ तथा ।

तथा कार्कॊटकं नागं भुजंगश्वतरौ तथा ॥

धृतराष्ट्रं शंखपालं कालीयं तक्षकं तथा ।

पिंगलं च महानागं सपत्नीकान् प्रपूजयॆत् ॥

 

ಶ್ರೀ ಕೃಷ್ಣಾರ್ಪಣಮಸ್ತು .

 

madhwamrutha

Tenets of Madhwa Shastra

You may also like...

Leave a Reply

Your email address will not be published. Required fields are marked *