Sri Gurujagannatha Dasarya Kruta Sri Raghavendra Stotram
ಶ್ರೀ ಗುರುಜಗನ್ನ್ನಾಥ ದಾಸಾರ್ಯ ಕೃತ ಶ್ರೀರಾಘವೇಂದ್ರ ಸ್ತೋತ್ರಮ್ – Sri GuruJagannatha Dasarya Kruta Sri Raghavendra Stotram
ರಾಘವೇಂದ್ರ ಕೃಪಾಸಾಗರ
ಜನಪಾಪೌಘದೂರ ತೇ ನಮೋ ನಮೋ || ಪ ||
ಮಾಗಧರಿಪುಮತಸಾಗರಝಷ
ಸಮಾಮೋಘಮಹಿಮ ತೇ ನಮೋ ನಮೋ ||ಅ.ಪ.||
ದಾರಿತಪರಮತವಾರಣತತಿ ಪರಿಪೂರಿತಕರುಣಾಸಿಂಧು ನಮೋ |
ವಾರಿತತಮ, ಸ್ವೀಕಾರಿತಹರಿಮತ, ಧಾರುಣಿಸುರವರ, ಧೀರ ನಮೋ || ೧||
ಸಾಧಿತರಘುವರ, ಬೋಧಿತಭಿದಮತ, ಬಾಧಿತಪರದುರ್ವಾದ ನಮೋ |
ಶೋಧಿತಹರಿಮತ, ಮೋದಿತಸುರ, ಸಂಪಾದಿತಹರಿಪದ, ದೇವ ನಮೋ ||೨||
ಸೇವಿತ ಯದುವರ, ಪಾವಿತನಿಜಜನ ಶ್ರಾವಿತಹರಿಕಥ ಪಾಲಯ ಮಾಮ್ |
ಕೋವಿದಕುಲಸಂಭಾವಿತ, ನಿಜಜನಜೀವಪ್ರದ ಹೇ ಪಾಲಯ ಮಾಮ್ ||೩||
ಕಾಮಿತ ಚಿಂತಾಮಣಿನಿಭಭಾಸುರ ಕಾಮದುಹೋಪಮ ಪಾಲಯ ಮಾಮ್ |
ಸಾಮವೇದ್ಯ ಶ್ರೀರಾಮಸುಪದ
ಯುಗತಾಮರಸಾಲಿ ಭೋ ಪಾಲಯ ಮಾಮ್ ।। ೪ ||
ಪಾತಕವನಕುಲವೀತಿಹೋತ್ರನಿಭ, ತಾತಪಾಲಿತ ನಿಜದೂತ ನಮೋ |
ದಾತಗುರುಜಗನ್ನಾಥವಿಠಲಪದ ||
ಪಾಥೋಜಭ್ರಮರ ತೇ ನಮೋ ನಮೋ
||ಇತಿ ಗುರುಜಗನ್ನಾಥದಾಸಾರ್ಯ ವಿರಚಿತಂ ಶ್ರೀರಾಘವೇಂದ್ರಸ್ತೋತ್ರಂ ||
||ಶ್ರೀ ಮಧ್ವೇಶ ಕೃಷ್ಣಾರ್ಪಣಮಸ್ತು||