ಗುರುಮಂತ್ರ – GuruMantra
ಹೆಣ್ಣು ಮಕಳ್ಳಿಗೆ ಗುರುಮಂತ್ರ , ಶ್ರೀಕೃಷ್ಣ ಷಡಕ್ಷರ ಮಂತ್ರ ಜಪ ವಿಧಾನ
ಶ್ರೀಗುರುಭೋ ನಮಃ | ದ್ವಿರಾಚಮ್ಮ (ಪೂರ್ವ ಅಥವಾ ಉತ್ತರಾಭಿ ಮುಖವಾಗಿ ಕುಳಿತು ಎರಡು ಸಲ ಆಚಮನ ಮಾಡಬೇಕು). ಕೇಶವಾಯ ಸ್ವಾಹಾ, ನಾರಾಯಣಾಯ ಸ್ವಾಹಾ, ಮಾಧವಾಯ ಸ್ವಾಹಾ, ಗೋವಿಂದಾಯ ನಮಃ, ವಿಷ್ಣವೇ ನಮಃ, ಮಧುಸೂಧನಾಯ ನಮಃ, ತ್ರಿವಿಕ್ರಮಾಯ ನಮಃ, ವಾಮನಾಯ ನಮಃ, ಶ್ರೀಧರಾಯ ನಮಃ, ಹೃಷಿಕೇಶಾಯ ನಮಃ, ಪದ್ಮನಾಭಾಯ ನಮಃ, ದಾಮೋದರಾಯ ನಮಃ, ಸಂಕರ್ಷಣಾಯ ನಮಃ,-
ವಾಸುದೇವಾಯ ನಮಃ, ಪ್ರದ್ಯುಮ್ನಾಯ ನಮಃ, ಅನಿರುದ್ಧಾಯ ನಮಃ, ಪುರುಷೋತ್ತಮಾಯ ನಮಃ, ಅಧೋಕ್ಷಜಾಯ ನಮಃ, ನಾರಸಿಂಹಾಯ ನಮಃ, ಅಚ್ಯುತಾಯ ನಮಃ, ಜನಾರ್ದನಾಯ ನಮಃ, ಉಪೇಂದ್ರಾಯ ನಮಃ, ಹರಯೇ ನಮಃ, ಶ್ರೀಕೃಷ್ಣಾಯ ನಮಃ (ಎಂದು ಹೇಳಿ ಕೈಮುಗಿಯಬೇಕು).
ಶುಭೇ ಶೋಭನಮುಹೂರ್ತೆ ಆದ್ಯ ಬ್ರಹ್ಮಣಃ ದ್ವಿತೀಯಪರಾರ್ಧೆ, ಶ್ರೀಶ್ವೇತವರಾಹ ಕಲ್ಪ, ವೈವಸ್ವತ ಮನ್ವಂತರೇ ಕಲಿಯುಗೇ ಪ್ರಥಮಚರಣೇ ಗೋದಾವರ್ಯಾಃ ದಕ್ಷಿಣೇ/ ಉತ್ತರೇ ತೀರೇ, ಶಾಲಿವಾಹನಶಕೇ ಬೌದ್ಧಾವತಾರೇ, ರಾಮಕ್ಷೇತ್ರೇ, ಅಸ್ಮಿನ್ ವರ್ತಮಾನೇ ಚಾಂದ್ರಮಾನೇನ, ಶ್ರೀ——-ನಾಮ ಸಂವತ್ಸರೇ ಅಯನೇ ——ಋ ——ಮಾಸೇ ವಾಸರೇ ಶುಭ ನಕ್ಷತ್ರ ಶುಭಯೋಗ, ಶುಭಕರಣ, ಏವಂಗುಣ ವಿಶೇಷಣ ವಿಶಿಷ್ಟಾಯಾಂ ಶುಭತಿಥೌ ಗುರುಮಂತ್ರಜಪಂ ಕರಿಷ್ಯ.
ಭೂತೋಚ್ಚಾಟನಂ –
ಮಮ ಶರೀರಸ್ಯ ಅಂತರ್ಯಾಮಿ ಋಷಿಃ | ಸತ್ಯ ದೇವತಾ | ಪ್ರಕೃತಿ ಪುರುಷಶ್ಚಂದಃ| ಸಮಸ್ತ ಭೂತೋಚ್ಚಾಟನೇ ವಿನಿಯೋಗಃ।|
ಅಪಸರ್ಪಂತು ಯೇ ಭೂತಾ ಯೇ ಭೂತಾ ಭುವಿ ಸಂಸ್ಥಿತಾಃ | ಯೇ ಭೂತಾ ವಿಘ್ನ ಕರ್ತಾರಃ ತೇ ನಶ್ಯಂತು ಶಿವಾಜ್ಞಾಯಾ || ಅಪಕ್ರಾಮಂತು ಭೂತಾದ್ಯಾಃ ಕ್ರೂರಾಶೈವ ತು ರಾಕ್ಷಸಾಃ | ಯೇ ಚಾತ್ರ ನಿವಸಂತ್ಯತ್ರ ದೇವತಾ ಭುವಿ ಸಂತತಂ || ತೇಷಾಮಪ್ಯವಿರೋಧೇನ ಬ್ರಹ್ಮ ಕರ್ಮ ಸಮಾರಭೇ || ಇತಿ ವಾಮಭಾಗೇ ಭೂತೋಚ್ಚಾಟನಂ ಕೃತ್ವಾ |
ಈ ಮಂತ್ರವನ್ನು ಹೇಳಿ ನಮ್ಮ ಸಮೀಪದಲ್ಲಿರುವ ರಾಕ್ಷಸರು ಮೊದಲಾದವರನ್ನು ಒಂದು ಕೈ ಚಿಟಕಿಯಿಂದ ಓಡಿಸಬೇಕು.
ಆಸನ ಶುದ್ದಿ :
ಪೃಥಿವ್ಯಾ ಮೇರುಪೃಷ್ಠ ಋಷಿಃ | ಕೂರ್ಮೋ ದೇವತಾ | ಸುತಲಂ ಛಂದಃ | ಆಸನೇ ವಿನಿಯೋಗಃ || ಪೃಥ್ವಿ ತ್ವಯಾ ಧೃತಾ ಲೋಕಾ ದೇವಿ ತ್ವಂ ವಿಷ್ಣುನಾ ಧೃತಾ | ತ್ವಂ ಚ ಧಾರಯ ಮಾಂ ದೇವಿ ಪವಿತ್ರಂ ಕುರು ಚಾಸನಂ || ಮಾಂ ಚ ಪೂತಂ ಕುರು ಧರೇ ನತಾ ತ್ವಾಂ ಸುರೇಶ್ವರಿ || ಇತಿ ಪೃಥಿವೀಂ ಪ್ರಾರ್ಥಯಿತ್ವಾ (ಈ ಮಂತರವನ್ನು ಹೇಳಿ ಭೂದೇವಿಗೆ ನಮಸ್ಕಾರ ಮಾಡಬೇಕು.
ನಿರಸ್ತಃ ಪರಾವಸುಃ | ಇದಮಹಮರ್ವಾವಸೋಸ್ಸದನೇ ಸೀದಾಮಿ | ಆಸನೇ ಸೋಮಮಂಡಲೇ ಕೂರ್ಮಸ್ಕಂದೇ ಉಪವಿಷ್ಠಾಸ್ಮಿ (ಎಂದು ಆಸನದಲ್ಲಿ ಕೂಡಬೇಕು). ಭೂರ್ಭುವಸ್ಸುವಃ (ಎಂದು ಆಸನವನ್ನು ಮುಟ್ಟಬೇಕು). ಶ್ರೀಂ ಅಂ ಅನಂತಾಸನಾಯ ನಮಃ | ಶ್ರೀಂ ಮಂ ಮಂಡೂಕಾಯ ನಮಃ | ಶ್ರೀಂ ಕೊಂ ಕೂರ್ಮಾಯ ನಮಃ | ಶ್ರೀಂ ವಂ ವರಾಹಾಯ ನಮಃ | ಶ್ರೀಂ ಶಂ ಶೇಷಾಯ ನಮಃ, ಶ್ರೀಂ ಕಂ ಕಾಲಾಗ್ನಿರುದ್ರಾಯ ನಮಃ | ಶ್ರೀಂ ವಂ ವಜ್ರಾಯ ನಮಃ |
ದಿಸ್ಪಂದನಂ :
ಐಂದ್ರಾದಿ ದಿಕ್ಷು ಬಾಮಿ ನಮಃ || ನಮಃ ಚಕ್ರಾಯ ಸ್ವಾಹಾ| ಅಸ್ತ್ರಾಯ ಫಟ್ | ಇತಿ ದಿಗ್ವಂಧಃ || ಸುದರ್ಶನಾಯ ವಿದ್ಮಹೇ ಮಹಾಜ್ವಾಲಾಯ ಧೀಮಹಿ | ತನ್ನಶ್ಚಕ್ರ ಪ್ರಚೋದಯಾತ್ || ಎಂದು ಹೇಳುತ್ತಾ ಜಪಕ್ಕೆ ತೊಂದರೆ ಮಾಡುವ ರಾಕ್ಷಸರು ಮೊದಲಾದವರು ಬಾರದಂತೆ ಬೊಟ್ಟನ್ನು ನಾಲ್ಕು ದಿಕ್ಕಿಗೂ ತೋರಿಸಿ ತನ್ನ ನಡುತಲೆಗಿಡಬೇಕು.
ಕರಶುದ್ಧಿ :
ಮಣಿಬಂಧೇ ಪ್ರಕೋಷ್ಠೇ ಚ ಕೂರ್ಪರೇ ಹಸ್ತಸಂಧಿಷು | ತತ್ಪೃಷ್ಠಪಾರ್ಶ್ವಯೋಶೈವ ಕರಶುದ್ಧಿರುದಾಹೃತಾ | (ಎಂದು ಹೇಳುತ್ತಾ) ಶ್ರೀಂ ಯಂ ಶ್ರೀಂ ಎಂದು ಆರು ಸಲವೂ, ಶ್ರೀಂ ರಂ ಶ್ರೀಂ ಎಂದು ಸಲವೂ, ಶ್ರೀಂ ವಂ ಶ್ರೀಂ ಎಂದು ಸಲವೂ ಜಪಿಸುತ್ತಾ ಮುಂಗೈ ಮೊದಲು ಬೆಟ್ಟುಗಳ ಕೊನೆವರಿಗೆ ಎರಡು ಕೈಗಳ ಮೇಲೂ ಆರು ಸಲ ಸವರಬೇಕು.
ಗುರು ನಮಸ್ಕಾರ :
(ಅನಂತರ ಈ ಮುಂದೆ ಹೇಳುವ ೧೨ ಮಂದಿ ಗುರುಗಳಿಗೂ ನಮಸ್ಕಾರ ಮಾಡಬೇಕು.) ಶ್ರೀ ಗುರುಭ್ಯೋ ನಮಃ | ಪರಮ ಗುರುಭ್ಯೋ ನಮಃ | ಶ್ರೀಮದಾನಂದತೀರ್ಥ ಭಗವತ್ಪಾದಾಚಾರ್ಯಭೋ ನಮಃ | ಶ್ರೀವೇದವ್ಯಾಸಾಯ ನಮಃ | ಶ್ರೀಭಾರತೈ ನಮಃ | ಶ್ರೀಸರಸ್ವತೈ ನಮಃ | ಶ್ರೀವಾಯವೇ ನಮಃ | ಶ್ರೀ ಬ್ರಹ್ಮಣೇ ನಮಃ | ಶ್ರೀಲಕ್ಷ್ಮೈ ನಮಃ | ಶ್ರೀನಾರಾಯಣಾಯ ನಮಃ | ಶ್ರೀಮಂತ್ರದೇವತಾಯೆ ನಮಃ | ಶ್ರೀವಾಸುದೇವಾಯ ನಮಃ ||
ಶ್ರೀಂ | ಹೃತ್ಕಮಲಸ್ಥಿತ ಪರಮಾತ್ಮಾನಂ ಸುಷುಮ್ನಾ ಮಾರ್ಗಣ ಮೂರ್ಥಿ ವಿನ್ಯಸೇತ್ |
ಅನಂತರ ಹೃದಯ ಕಮಲದಲ್ಲಿರುವ ನಾರಾಯಣ ದೇವರನ್ನು “ಸುಷುಮ್ನಾ” ಎಂಬ ನಾಡಿ ಮಾರ್ಗವಾಗಿ ಶಿರಸ್ಸಿಗೆ ತಂದು ನಿಲ್ಲಿಸಿದಂತೆ ಭಾವಿಸಬೇಕು.
ಪಾಪಪುರುಷ ವಿಸರ್ಜನಂ :
ವಾಮಕುಕ್ಷಿಂ ಸ್ಪೃಷ್ಟೃ (ಅನಂತರ ಎಡ ಬಗಲಿನ ಕೆಳಹೊಟ್ಟೆಯನ್ನು ಮುಟ್ಟಬೇಕು). ಬ್ರಹ್ಮಹತ್ಯಾಶಿರಸ್ಕಂ ಚ ಸ್ವರ್ಣಸ್ತೇಯಭುಜದ್ವಯಂ | ಸುರಾಪಾನಹೃದಾ ಯುಕ್ತಂ ಗುರುತಲ್ಪಕಟಿದ್ದಯಂ || ತತ್ಸಂಯೋಗಪದದ್ವಂದ್ವ ಮಂಗಪ್ರತ್ಯಂಗಪಾತಕಂ | ಉಪಪಾತಕರೋಮಾಣಂ ರಕ್ತಶ್ರುವಿಲೋಚನಂ || ಅಧೋಮುಖಂ ಕೃಷ್ಣವರ್ಣ೦ ಅಂಗುಷ್ಠ ಪರಿಮಾಣಕಂ | ಖಡ್ಗಚರ್ಮಧರಂ ಕೃಷ್ಣಂ ಕುಕ್ಷೌ ಪಾಪಂ ವಿಚಿಂತಯೇತ್ ||
(ಎಂದು ಹೇಳಿ ಎಡ ಬಗಲಿನ ಕೆಳ ಭಾಗದಲ್ಲಿ ಪಾಪಪುರುಷನಿರುವಂತೆ ಚಿಂತಿಸಬೇಕು. ಅನಂತರ ಪಾಪುರುಷನು ಹೊಕ್ಕಳಿಗೆ ಬಂದಂತೆ ಭಾವಿಸಿ ಹೊಕ್ಕಳನ್ನು ಮುಟ್ಟಬೇಕು).
ನಾಭೌ ಷಟ್ಕಾಣಮಂಡಲಮಧ್ಯಸ್ಧೋ ನೀಲವರ್ಣೋ ವಾಯು ಬೀಜವಾಚ್ಯಃ ಪ್ರದ್ಯುಮ್ನೋ ಭಗವಾನ್ ಮಚ್ಛರೀರಸ್ಥಂ ಪಾಪಪುರುಷಂ ವಾಯುನಾ ಶೋಷಋತು ಎಂದು ಹೇಳಿ ‘ಶ್ರೀಂ ಯಂ ಶ್ರೀಂ’ ಎಂದು ೬ ಸಲ ಹೇಳಿ ಆ ಪಾಪಪುರುಷನನ್ನು ಒಣಗಿದಂತೆ ಭಾವಿಸಬೇಕು.
ತತಸ್ತಂ ಹೃದಯದೇಶಮಾನೀಯ ಹೃದಯೇ ತ್ರಿಕೋಣ ಮಂಡಲ ಮಧ್ಯಸ್ಥೋ ರಕ್ತವರ್ಣೋ ಅಗ್ನಿಸ್ಥಃ ಅಗ್ನಿಬೀಜವಾಚ್ಯಃ ಸಂಕರ್ಷಣೋ ಭಗವಾನ್ ಮಚ್ಛರೀರಸ್ಥಂ ಪಾಪಪುರುಷಂ ಅಗ್ನಿನಾ ನಿರ್ದಹತು |ಎಂದು ಹೇಳಿ “ಶ್ರೀಂ ರಂ ಶ್ರೀಂ’ ಎಂದು ೧೨ ಸಲ ಜಪಿಸಿ ಆ ಪಾಪಪುರುಷನನ್ನು ಸುಟ್ಟು ಹೋದಂತೆ ಭಾವಿಸಿ ಎಡದ ಮೂಗಿನಿಂದ ಶ್ವಾಸ ಬಿಟ್ಟು ಆ ಬೂದಿಯನ್ನು ಹೊರಗೆ ಹೋದಂತೆ ಭಾವಿಸಬೇಕು.
ಅನಂತರ ಶಿರಸ್ಸನ್ನು ಮುಟ್ಟಿ.- ಶಿರಸಿ ವರ್ತುಲಮಂಡಲಮಧ್ಯಸ್ಥೋ ಶ್ವೇತವರ್ಣೋ ವರುಣಸ್ಥೋ ವರುಣಬೀಜ ವಾಚ್ಯಃ ಶ್ರೀವಾಸುದೇವೋ ಭಗವಾನ್ ಮಚ್ಛರೀರಂ ಆಪಾದಮಸ್ತಕಂ ಅಮೃತವೃಷ್ಟಾ ಆಪ್ಲಾವಯತು | ಎಂದು ಹೇಳಿ “ಶ್ರೀಂ ವಂ ಶ್ರೀಂ” ಎಂದು ೨೪ ಸಲ ಜಪಿಸಬೇಕು. ಅನಂತರ ಶಿರಸ್ಸಿನಲ್ಲಿ ಕುಳಿತಿದ್ದ ಪರಮಾತ್ಮನನ್ನು ಹೃದಯಕ್ಕೆ ಹಿಂತಿರುಗಿ ಬಂದಂತೆ ಭಾವಿಸಬೇಕು.
ಅಥ ಪುಣ್ಯಪುರುಷ ಧ್ಯಾನಂ :
ದಕ್ಷಿಣಕುಕ್ಕಿಂ ಸ್ಪಷ್ಮಾ (ಹೊಟ್ಟೆಯ ಬಲಭಾಗವನ್ನು ಮುಟ್ಟಿ) – “ಅಶ್ವಮೇಧಶಿರಸ್ಕಂ ಚ ಮಹಾದಾನಭುಜದ್ವಯಂ। ಸೋಮಪಾನಹೃದಾ ಯುಕ್ತಂ ಬ್ರಹ್ಮಚರ್ಯಕಟಿದ್ವಯಂ || ತತ್ಸಂಯೋಗ- ಪದದ್ವಂದ್ವಂ ಸಾಂಗೋಪಾಂಗಶುಭತ್ರಯಂ | ಸರ್ವವ್ರತಾಂಗರೋಮಾಣಂ ಗುರುಸೇವಾದಿಲೋಚನಂ || ಸಿಂಹಾಸನೇ ಸಮಾಸೀನಂ ಸ್ವರ್ಣವರ್ಣ೦ ಕಿರೀಟಿನಂ | ಗೀರ್ವಾಣನುಪಾದಾಬ್ಬಂ ಪುಣ್ಯಂ ಹೃದಿ ವಿಭಾವಯೇ ||” ಎಂದು ಪುಣ್ಯ ಪುರುಷನನ್ನು ಧ್ಯಾನಿಸಬೇಕು.
ಯಸ್ಯ ಸ್ಮೃತ್ಯಾ ಚ ನಾಮೋಕ್ಯಾ ತಪೋಜಪಕ್ರಿಯಾದಿಷು | ನ್ಯೂನಂ ಸಂಪೂರ್ಣತಾಂ ಯಾತಿ ಸದ್ಯೋ ವಂದೇ ತಮಚ್ಯುತಂ || ಮಂತ್ರಹೀನಾಂ ಕ್ರಿಯಾಹೀನಾಂ ಭಕ್ತಿಹೀನಾಂ ರಮಾಪತೇ | ಯತ್ತಂ ತು ಮಯಾ ದೇವ ಪರಿಪೂರ್ಣಂ ತದಸ್ತು ಮೇ || ಅನೇನ ಗುರುಮಂತ್ರ ಜಪೇನ ಅಸ್ಮತ್‌ತ್ಯಂತರ್ಗತ ಭಾರತೀರಮಣ ಮುಖ್ಯ ಪ್ರಾಣಾಂತರ್ಗತ ಶ್ರೀಲಕ್ಷ್ಮೀ ವೆಂಕಟೇಶಃ ಪ್ರೀಯತಾಂ ಪ್ರೀತೋ ವರದೋ ಭವತು || ಶ್ರೀಕೃಷ್ಣಾರ್ಪಣಮಸ್ತು (ಎಂದು ಕೈಯಲ್ಲಿ ನೀರನ್ನು ಹಾಕಿಕೊಂಡು ಬಿಡಬೇಕು).
ತತ್ವಾಭಿಮಾನಿ ದೇವತಾ ಪ್ರಾರ್ಥನೆ :
ತತ್ವಾಭಿಮಾನಿಗಳಿರಾ ಉತ್ತರ ಲಾಲಿಪುದು | ಎತ್ತಿ ಕರವ ಮುಗಿವೆ ವಿನಯದಲ್ಲಿ | ಆತ್ಮದೊಳಗೆ ನಿಮ್ಮ ವ್ಯಾಪಾರ ಘನವಯ್ಯಾ | ತತ್ತತ್ ಸ್ಥಾನದಲ್ಲಿ ನಿತ್ಯವಾಗಿ ದೈತ್ಯರಿಗೆ ಸರ್ವದ ನಿಮ್ಮ ಪ್ರೇರಣೆ ಯುಂಟು | ಅತ್ತ ಎಳೆಸದಿರಿ ದುಸ್ಸಂಗಕ್ಕೆ ಈ ಚಿತ್ರದಲ್ಲಿ ನೀವೆ ನಿಜ ವ್ಯಾಪಾರ ಮಾಡುವವರು | ಸತ್ಯಕ್ಕೆ ಎರಗುವ ಮಾರ್ಗವಿತ್ತು | ಉತ್ತಮ ಗುಣದಲ್ಲಿ ಮೊದಲೇ ನಿಮ್ಮ ಪೂಜಿಪ | ಅರ್ಥಿಯಾಗಲಿ ಆತರುವಾಯದಿ | ಉತ್ತಮ ಶ್ಲೋಕ ಸಿರಿ ವಿಜಯ ವಿಠಲನ್ನ | ಸ್ತುತಿಸಿ ಆತನ್ನ ಚರಣ ನೋಳ್ಪದು ಮಾಡಿ ||
ಶ್ರೀಕೃಷ್ಣ ಷಡಕ್ಷರ ಮಂತ್ರ :
ಶ್ರೀಂ ಕ್ರೀಂ ಕೃಷ್ಣಾಯ ನಮಃ | (ಎಂದು ಮೂರು ಸಾರೆ, ಹೇಳಿ ಪ್ರಾಣಾಯಾಮ ಮಾಡಿಕೊಳ್ಳಬೇಕು).
ಷಡಂಗನ್ಯಾಸ :
ಶ್ರೀಪೂರ್ಣ ಜ್ಞಾನಾತ್ಮನೇ ಹೃದಯಾಯ ನಮಃ (ಎದೆಯನ್ನು ಮುಟ್ಟಬೇಕು) ಪೂರ್ಣೆಶ್ವರ್ಯಾತ್ಮನೇ ಶಿರಸೇ ಸ್ವಾಹಾ (ತಲೆಯನ್ನು ಮುಟ್ಟಬೇಕು) ಪೂರ್ಣಪ್ರಭಾತ್ಮನೇ ಶಿಖಾಯ್ ವೌಷಟ್ (ತುರುಬನ್ನು ಮುಟ್ಟಬೇಕು) | ಪೂರ್ಣಾನಂದಾತ್ಮನೇ ಕವಚಾಯ ಹುಂ (ಒಂದೇ ಸಲ ಎಡಗೈಯಿಂದ ಬಲಭುಜವನ್ನೂ, ಬಲಗೈಯಿಂದ ಎಡಭುಜವನ್ನೂ ಮುಟ್ಟಬೇಕು)! ಪೂರ್ಣತೇಜಾತ್ಮನೇ ನೇತ್ರಾಭ್ಯಾಂ ವೌಷಟ್ (ಎರಡು ಕಣ್ಣುಗಳನ್ನೂ ಮಧ್ಯದ ಮತ್ತು ತರ್ಜನೀ ಬೆರಳುಗಳಿಂದ ಮುಟ್ಟಬೇಕು) ಪೂರ್ಣ ಶಕ್ವಾತ್ಮನೇ ಅಸ್ತ್ರಾಯಫಟ್ (ಎರಡು ಕೈಯಿಂದಲೂ ಚಪ್ಪಾಳೆ ಮಾಡಬೇಕು) ಇತಿ ದಿಗ್ಧಂಧಃ ||
ಅಸ್ಯ ಶ್ರೀಕೃಷ್ಣ ಷಡಕ್ಷರ ಮಹಾಮಂತ್ರಸ್ಯ ಬ್ರಹ್ಮಾ ಋಷಿಃ (ಶಿರಸಿ) ಗಾಯತ್ರೀ ಛಂಧಃ (ಮುಖ್ಯ) ಶ್ರೀಕೃಷ್ಣ ದೇವತಾ (ಹೃದಯೇ) | ಶ್ರೀಕೃಷ್ಣ ಪ್ರೀತ್ಯರ್ಥೇ ಜಪೇ ವಿನಿಯೋಗಃ
ಅಥ ಧ್ಯಾನಂ –
(ಅನಂತರ ಮುಂದೆ ಹೇಳುವ ಶ್ಲೋಕದಿಂದ ಶ್ರೀಕೃಷ್ಣ ದೇವರನ್ನು ಧ್ಯಾನ ಮಾಡಬೇಕು)
ಧ್ಯಾಯೇತ್ ಹರಿನ್ಮಣಿನಿಭಂ ಜಗದೇಕವಂದ್ಯಂ | ಸೌಂದರ್ಯಸಾರಮರಿಶಂಖವರಾಭಯಾನಿ ||
ದೋರ್ಭಿದ್ರಧಾನಮಜಿತಂ ಸರಸಂ ಚ ಭಸ್ಮ |
ಸತ್ಯಾಸಮೇತಮಖಿಲ ಪ್ರದಮಿಂದಿರೇಶಂ ||
ಅಥ ಜಪಃ –
ಅಸ್ಮತ್ಯಂತರ್ಗತ ಶ್ರೀಭಾರತೀರಮಣ ಮುಖ್ಯ ಪ್ರಾಣಾಂತರ್ಗತ ಶ್ರೀಗೋಪಾಲಕೃಷ್ಣಪ್ರೇರಣಯಾ ಶ್ರೀಗೋಪಾಲಕೃಷ್ಣ ಪ್ರೀತ್ಯರ್ಥಂ ಶ್ರೀಕೃಷ್ಣ ಷಡಕ್ಷರ ಮಹಾಮಂತ್ರ ಜಪತರ್ಪಣಮಹಂ ಕರಿಷ್ಯ | (ಉದ್ದರಣೆಯಿಂದ ಕೈಯಲ್ಲಿ ನೀರು ಬಿಟ್ಟು ಸಂಕಲ್ಪಿಸಬೇಕು).
ಶ್ರೀಂ ಕ್ಲೀಂ ಕೃಷ್ಣಾಯ ನಮಃ ಶ್ರೀಂ || (ಎಂದು ೧೦೮ ಸಲವಾದರೂ ಜಪಮಾಡಬೇಕು.
ಜಪವಾದ ಮೇಲೆ ಪುನಃ
ಷಡಂಗನ್ಯಾಸ : ಶ್ರೀಪೂರ್ಣ ಜ್ಞಾನಾತ್ಮನೇ ಹೃದಯಾಯ ನಮಃ (ಎದೆಯನ್ನು ಮುಟ್ಟಬೇಕು) | ಪೂರ್ಣೆಶ್ವರ್ಯಾತ್ಮನೇ ಶಿರಸೇ ಸ್ವಾಹಾ (ತಲೆಯನ್ನು ಮುಟ್ಟಬೇಕು) | ಪೂರ್ಣಪ್ರಭಾತ್ಮನೇ ಶಿಖಾಯೆ ವೌಷಟ್ (ತುರುಬನ್ನು ಮುಟ್ಟಬೇಕು) | ಪೂರ್ಣಾನಂದಾತ್ಮನೇ ಕವಚಾಯ ಹುಂ (ಒಂದೇ ಸಲ ಎಡಗೈಯಿಂದ ಬಲಭುಜವನ್ನೂ, ಬಲಗೈಯಿಂದ ಎಡಭುಜವನ್ನೂ ಮುಟ್ಟಬೇಕು) | ಪೂರ್ಣತೇಜಾತ್ಮನೇ ನೇತ್ರಾಭ್ಯಾಂ ವೌಷಟ್ (ಎರಡು ಕಣ್ಣುಗಳನ್ನೂ ಮಧ್ಯದ ಮತ್ತು ತರ್ಜನೀ ಬೆರಳುಗಳಿಂದ ಮುಟ್ಟಬೇಕು) ಪೂರ್ಣ ಶಕ್ಯಾತ್ಮನೇ ಅಸ್ಮಾಯಫಟ್ (ಎರಡು ಕೈಯಿಂದಲೂ ಚಪ್ಪಾಳೆ ಮಾಡಬೇಕು) ಇತಿ ದಿಗ್ನಂಧ ||
ಅಸ್ಯ ಶ್ರೀಕೃಷ್ಣ ಷಡಕ್ಷರ ಮಹಾಮಂತ್ರಸ್ಯ ಬ್ರಹ್ಮಾ ಋಷಿಃ (ಶಿರಸಿ) ಗಾಯತ್ರೀ ಛಂಧಃ (ಮುಖೇ) (ಶ್ರೀಕೃಷ್ಣ ದೇವತಾ (ಹೃದಯೇ) | ಶ್ರೀಕೃಷ್ಣ ಪ್ರೀತ್ಯರ್ಥ ಜಪೋಪಸಂಹಾರೇ ವಿನಿಯೋಗಃ |
ಅಥ ಧ್ಯಾನಂ
ಧ್ಯಾಯೇತ್ ಹರಿನ್ಮಣಿನಿಭಂ ಜಗದೇಕವಂದ್ಯಂ | ಸೌಂದರ್ಯಸಾರಮರಿಶಂಖ ವರಾಭಯಾನಿ ||
ದೋರ್ಭಿದ್ರಧಾನಮಜಿತಂ ಸರಸಂ ಚ ಭ -| ಸತ್ಯಾಸಮೇತಮಖಿಲಪ್ರದಮಿಂದಿರೇಶಂ ||
ಅನೇನ ಶ್ರೀಕೃಷ್ಣ ಪಡಕ್ಷರಮಹಾಮಂತ್ರಣ ಅಸ್ಮದ್ತ್ಯಂತರ್ಗತ ಭಾರತೀರಮಣಮುಖ್ಯಪ್ರಾಣಾಂತರ್ಗತ ಶ್ರೀಗೋಪಾಲಕೃಷ್ಣ: ಪ್ರೀಯತಾಂ | ಪ್ರೀತೋ ವರದೋ ಭವತು | ಶ್ರೀಕೃಷ್ಣಾರ್ಪಣಮಸ್ತು || (ಎಂದು ಕೈಯಲ್ಲಿ ನೀರನ್ನು ಹಾಕಿಕೊಂಡು ಬಿಡಬೇಕು).
ಅರ್ಘ೦ : –
ಶ್ರೀಂ ಕ್ರೀಂ ಕೃಷ್ಣಾಯ ನಮಃ ಶ್ರೀಂ | ಇತಿ ಅರ್ಥ್ಯ೦ (೧೦ ಜಪಕ್ಕೆ ೧ ಅರ್ಘದಂತೆ ಜಪದ ಸಂಖ್ಯೆಯನ್ನನುಸರಿಸಿ ಅರ್ಥ್ಯವನ್ನು ಕೊಡಬೇಕು).
|| ಶ್ರೀ ಕೃಷ್ಣ ಷಡಕ್ಷರ ಮಂತ್ರವು ಸಮಾಪ್ತವಾಯಿತು ||
|| ಶ್ರೀಕೃಷ್ಣಾರ್ಪಣಮಸ್ತು ||
Thanks for the important information